ಕಿತ್ತುಕೊಂಡು ತಿಂದು ಬದುಕುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಮಾಡುತ್ತಿರುವ ಕೆಲಸವನ್ನು ನೋಡಿದರೆ ನಿಮಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಬೆಳೆಯುತ್ತಿರುವ ದೊಡ್ಡ್ದ ದೇಶವಾಗಿರುವ ಭಾರತದಲ್ಲಿ ಹಸಿವಿನ ಸಮಸ್ಯೆ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ, ಅದರಲ್ಲೂ ಕಳೆದ ಏಳೆಂಟು ತಿಂಗಳಿಂದ ಎಷ್ಟೋ ಜನರ ಜೀವನ ಬೀದಿಗೆ ಬಂದು ನಿಂತಿದೆ, ಇದಕ್ಕೆಲ್ಲಾ ಕಾರಣ ಈ ಮಹಾಮಾರಿ ಕೊರೊನ ವೈರಸ್. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಕಾಣಿಸಿಕೊಂಡ ಈ ವೈರಸ್ ಮೊದಲು ಚೀನಾ ದೇಶದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದು ನಂತರ ನಿಧಾನವಾಗಿ ಜಗತ್ತಿನ ಅತ್ಯಂತ ಹಬ್ಬಿ ಜನರ ಬದುಕನ್ನೇ ಬಲಿ ಪಡೆದುಕೊಂಡಿದೆ.

ಜಗತ್ತಿನ ತುಂಬೆಲ್ಲ ಕೋಟ್ಯಾಂತರ ಸೋಂಕಿತರು ಇದ್ದಾರೆ ಹಾಗೂ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತವಷ್ಟೇ ಅಲ್ಲ ಇಡೀ ಜಗತ್ತು ಕಳೆದ ಒಂಬತ್ತು ತಿಂಗಳು ಗಳಿಂದ ಬಂದಾಗಿತ್ತು, ಮಾರ್ಚ್ ತಿಂಗಳಲ್ಲಿ ಆರಂಭವಾಗಿದ್ದ ಲಾಕ್ ಡೌನ್ ಅಕ್ಟೋಬರ್ ತಿಂಗಳಲ್ಲಿ ಕೊನೆಗೊಂಡಿತ್ತು ಅಂದರೆ ಸುಮಾರು ಎಂಟು ತಿಂಗಳುಗಳ ಕಾಲ ಭಾರತ ಸ್ತಬ್ಧವಾಗಿತ್ತು. ಲಾಕ್ಡೌನ್ ಸಮಯದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಅನುಭವಿಸಿರುವ ತೊಂದರೆ ಅಷ್ಟಿಷ್ಟಲ್ಲ, ದುಡಿದು ತಿನ್ನುವ ಜನರಿಗಂತೂ ಒಂದು ಹೊತ್ತಿನ ಊಟ ಕೂಡ ಕಬ್ಬಿಣದ ಕಡಲೆಯಾಗಿತ್ತು.ಲಾಕ್ಡೌನ್ ಸಮಯದಲ್ಲಿ ಸರ್ಕಾರ ದುಡಿದು ತಿನ್ನುವ ಕೂಲಿಕಾರ್ಮಿಕರಿಗೆ ಎರಡು ಹೊತ್ತಿನ ಊಟ ವ್ಯವಸ್ಥೆ ಕೂಡ ಮಾಡಿತ್ತು, ಕೊರೋನ ಬಂದ ಮೇಲೆ ಲಕ್ಷಾಂತರ ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ.

ತೆಲಂಗಾಣ ರಾಜ್ಯದ ರಾಮು ದೋಸತಿ ಎಂಬ ವ್ಯಕ್ತಿ ತನ್ನ ಲಕ್ಷ ಲಕ್ಷದ ಸಂಬಳದ ಕೆಲಸವನ್ನು ತೊರೆದು ಬಡವರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ. ಬಡವರಿಗಾಗಿ ದವಸಧಾನ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಹಣವನ್ನು ಬಡವರ ಹೊಟ್ಟೆ ತುಂಬಿಸಲು ಖರ್ಚು ಮಾಡಿದ್ದಾರೆ. ತಮ್ಮ ಕನಸಿನ ಮನೆಯಲ್ಲಿ ರೈಸ್ ಎಟಿಎಂ ಎಂಬ ಅಂಗಡಿಯನ್ನು ತೆರೆದು ಬಡವರಿಗಾಗಿ ಅಲ್ಲಿ ಅಕ್ಕಿಯನ್ನು ದಾನ ಮಾಡುತ್ತಿದ್ದಾರೆ.ಕಿತ್ತು ತಿನ್ನುವ ಈ ಕಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ಲಕ್ಷಾಂತರ ಮಂದಿಗೆ ಅನ್ನ ನೀಡುತ್ತಿರುವ ರಾಮ್ ಅವರ ಈ ಕೆಲಸ ನಿಜಕ್ಕೂ ಶ್ಲಾಘನೀಯ.