ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಎಂದಿಗೂ ಸೇವಿಸುವ ತಪ್ಪನ್ನು ಮಾಡಬೇಡಿ

ಆರೋಗ್ಯವೇ ಭಾಗ್ಯ ಎಂಬ ಉಕ್ತಿ ಮಾನವ ಕುಲ ಇರುವವರೆಗೂ ಅನ್ವಯವಾಗುವಂತದ್ದು. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯಕ್ಕಿಂತ ಮತ್ತೊಂದು ಸಂಪತ್ತು ಇಲ್ಲ ಎನ್ನಬಹುದು. ನಮ್ಮ ಆಧುನಿಕ ಜೀವನ ಜಂಜಾಟದಲ್ಲಿ ನಾವು ಆರೋಗ್ಯ ಸಂಬಂಧಪಟ್ಟಂತೆ ಸಾಕಷ್ಟು ತಪ್ಪುಗಳನ್ನು ದಿನನಿತ್ಯ ಮಾಡುತ್ತೇವೆ. ನಮಗೆ ಗೊತ್ತಿಲ್ಲದೆ ನಾವು ಮಾಡುವ ಕೆಲವು ತಪ್ಪುಗಳಿಂದ ನಮ್ಮ ಆರೋಗ್ಯಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಅದರಲ್ಲಿ ಇದು ಕೂಡ ಒಂದು. ಹೌದು ಖಾಲಿ ಹೊಟ್ಟೆಯಲ್ಲಿ ನಾವು ಕೆಲವು ಆಹಾರಗಳನ್ನು ಸೇವಿಸಿದರೆ ಅದರಿಂದ ದೊಡ್ಡ ಅಡ್ಡ ಪರಿಣಾಮಗಳು ಇವೆ. ಮೊದಲನೆಯದು ಚಹಾ ಮತ್ತು ಕಾಫಿ, ನಮ್ಮ ಜೀವನ ಶುರುವಾಗುವುದೇ ಕಾಫಿ ಮತ್ತು ಚಹಾ ಸೇವನೆಯಿಂದ. ಕಾಫಿ ಮತ್ತು ಚಹಾ ಸೇವನೆ ಒಳ್ಳೆಯದು ಆದರೆ ಅದನ್ನು ಕಾಲಿ ಹೊಟ್ಟೆಯಲ್ಲಿ ಮಾಡಿದರೆ ಅದು ದೇಹಕ್ಕೆ ತುಂಬಾ ಹಾನಿಕರ.

ಇವುಗಳಲ್ಲಿ ಕೆಫಿನ್ ಎಂಬ ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಉಂಟುಮಾಡುವಂತಹ ಅಂಶವಿದ್ದು ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಿಮಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸುವ ಅಭ್ಯಾಸವಿದ್ದರೆ ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಎರಡನೆಯದಾಗಿ ಮಸಾಲೆಯುಕ್ತ ಆಹಾರಗಳು. ಹೌದು ಸಾಕಷ್ಟು ಹೊತ್ತು ಏನೇನು ಸೇವಿಸದೆ ಒಮ್ಮೆಲೆ ನೀವು ಮಸಾಲ ಬರಿತ ತಿಂಡಿ ತಿನಿಸುಗಳನ್ನು ತಿಂದರೆ ಅದು ಪಿತ್ತ ರಸ ಉತ್ಪತಿಗೆ ಕಾರಣವಾಗಿ ಜೀರ್ಣಕ್ರಿಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಮಸಾಲೆ ಕಡಿಮೆ ಇರುವಂತಹ ಆಹಾರಗಳನ್ನು ಖಾಲಿ ಹೊಟ್ಟೆ ಇರುವ ಸಮಯದಲ್ಲಿ ಸೇವಿಸುವುದು ಒಳ್ಳೆಯದು.

ಇನ್ನು ಕೆಲವು ಯುವ ಜನಾಂಗ ತಮಗೆ ಅರಿವಿಲ್ಲದೆ ಖಾಲಿ ಹೊಟ್ಟೆಯಲ್ಲಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇವುಗಳಲ್ಲಿ ಕೆಲವು ಆಮ್ಲ ಅಂಶಗಳಿದ್ದು ಅವು ನಮ್ಮ ಜೀರ್ಣಾಂಗ ವ್ಯೂಹಕ್ಕೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ಇನ್ನು ಕೆಲವರಿಗೆ ಊಟಕ್ಕೆ ಮೊದಲು ಸಲಾಡ್ ರೂಪದಲ್ಲಿ ಟೊಮ್ಯಾಟೋ ಹಣ್ಣನ್ನು ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಈ ಟೊಮ್ಯಾಟೋ ಹಣ್ಣುಗಳಲ್ಲಿ ಟ್ಯನಿಕ್ ಎಂಬ ಅಮ್ಲವಿದ್ದು ಇದು ನಮ್ಮ ಹೊಟ್ಟೆಯಲ್ಲಿ ಪಿತ್ತ ರಸ ಉತ್ಪಾದನೆ ಮಾಡಿ ನಾವು ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡುತ್ತವೆ.

%d bloggers like this: