ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಜೊತೆಯಾದ ಸಿಂಗಂ ರವಿ ಚೆನ್ನಣ್ಣವರ್

ಕರ್ನಾಟಕದ ಸಿಂಗಂ ಎಂದೇ ಖ್ಯಾತಿಯಾಗಿರುವ ಎಲ್ಲರ ನೆಚ್ಚಿನ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ, ಕೇವಲ ತಮ್ಮ ಕಾರ್ಯ ಸಾಧನೆಗಳಿಂದ ಅಷ್ಟೇ ಅಲ್ಲ ಅವರ ಸ್ಪೂರ್ತಿದಾಯಕ ಮಾತುಗಳಿಂದ ಅವರು ಎಲ್ಲರ ಮನೆಮಾತಾಗಿ ಹೋದರು. ರವಿ ಚನ್ನಣ್ಣನವರ್ ಅವರು ಮೊದಲಿನಿಂದಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ತುಂಬಾ ಆತ್ಮೀಯವಾದ ಮತ್ತು ತುಂಬಾ ಹತ್ತಿರವಾದ ಸ್ನೇಹಿತರಾಗಿದ್ದಾರೆ.

ಹೌದು ಈ ಆತ್ಮೀಯತೆಗೆ ಮತ್ತೊಂದು ಸಾಕ್ಷಿ ಎಂಬಂತೆ ರವಿ ಚನ್ನಣ್ಣವರ್ ಅವರು ಕಿಚ್ಚ ಸುದೀಪ್ ಅವರ ಅಭಿಮಾನಿ ಸಂಘದ ವತಿಯಿಂದ ಆಯೋಜಿಸಲಾಗಿರುವ ಕ್ರಿಕೆಟ್ ಲೀಗ್ ಅನ್ನು ಅವರು ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಬೆಂಗಳೂರಿನ ನೆಲಮಂಗಲದ ಗ್ಲೋಬಲ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಲು ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ ಮತ್ತು ಸುದೀಪ್ ಅಭಿಮಾನಿಯಾಗಿರುವ ವೇದ ಕೃಷ್ಣಮೂರ್ತಿ ಅವರ ಜೊತೆಗೆ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರು ಆಗಮಿಸಿದ್ದರು.

ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರ ಭಾಗವಹಿಸುವ ಈ ಟೂರ್ನಿಯಲ್ಲಿ ಪ್ರತಿಯೊಂದು ಜಿಲ್ಲೆ ಒಂದು ಟೀಮ್ ಆಡಲಿದೆ. ಈ ಕುರಿತು ಸಂತೋಷ ಹಂಚಿಕೊಂಡು ಸುದೀಪ್ ಅವರು ಟ್ವಿಟ್ಟರ್ ಮೂಲಕ ಮಾತನಾಡಿ ಹಲವು ತಂಡಗಳು ಭಾಗವಹಿಸುತ್ತಿರುವುದು ನೋಡಿ ಖುಷಿಯಾಗುತ್ತಿದೆ, ಪಂದ್ಯಾವಳಿಯನ್ನು ಆಯೋಜನೆ ಮಾಡಿರುವ ಎಲ್ಲ ಸಂಘಟಕರಿಗೆ ನನ್ನ ಧನ್ಯವಾದಗಳು, ಪ್ರತಿಯೊಂದು ತಂಡದ ಆಟಗಾರರು ಹಾಗೂ ಸುರಕ್ಷಿತವಾಗಿ ಇರಿ ಮತ್ತು ಆನಂದಿಸಿ ಎಂದು ಶುಭಹಾರೈಸಿದ್ದಾರೆ.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ರವಿ ಚೆಣ್ಣನವರ್ ಅವರು ನಾನು ಮೊದಲಿನಿಂದಲೂ ಸುದೀಪ್ ಅವರ ಅಭಿಮಾನಿ ಮತ್ತು ಸುದೀಪ್ ಅವರ ಸ್ವಾತಿಮುತ್ತು ಚಿತ್ರದ ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆಯತನ ಎಂಬ ಮಾತುಗಳು ತಮಗೆ ಸ್ಪೂರ್ತಿದಾಯಕ ಎಂದು ಹೇಳಿದರು. ಸುದೀಪ್ ಅಭಿಮಾನಿಗಳ ಅಭಿಮಾನದ ಈ ಟೂರ್ನಿ ಎರಡನೆಯ ಆವೃತ್ತಿಯಾದಾಗಿದ್ದು ಮೊದಲ ಆವೃತ್ತಿ ಕಳೆದ ವರ್ಷ ಯಶಸ್ವಿಯಾಗಿ ನಡೆದಿತ್ತು.

%d bloggers like this: