ಕಿಚ್ಚ ಸುದೀಪ್ ಅವರ 36 ವರ್ಷಗಳ ಕನಸು ಈಗ ಸಫಲ

ಸಾಮಾನ್ಯ ಜನರಿಗೆ ಸಿನಿಮಾ ಸೆಲೆಬ್ರಿಟಿಗಳ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ಮಹಾದಾಸೆ ಇರುತ್ತದೆ. ಆದರೆ ಆ ಸಿನಿಮಾ ನಟರಿಗೂ ಕೂಡ ತಮ್ಮ ಇಷ್ಟದ ವ್ಯಕ್ತಿಯೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಕೆಲವರಿಗಂತೂ ಅದು ಕನಸು ಕೂಡ ಆಗಿರುತ್ತದೆ. ಅದರಂತೆ ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅವರಿಗೂ ಕೂಡ ಒಂದು ಕನಸು ಇದೆಯಂತೆ. ಅದು ಕ್ರಿಕೆಟ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬುದು. ನಟ ಕಿಚ್ಚ ಸುದೀಪ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಅಪಾರವಾದ ಒಲವು ಹೊಂದಿರುತ್ತಾರೆ. ಅವರಿಗೆ ವಿಶ್ವಕಪ್ ತಂದುಕೊಟ್ಟಂತಹ ಕ್ರಿಕೆಟಿಗ ಕಪಿಲ್ ದೇವ್ ಅವರನ್ನ ಕಂಡರೆ ಬಹಳ ಅಚ್ಚು ಮೆಚ್ಚಂತೆ.

1987 ರ ಸಂಧರ್ಭದಲ್ಲಿ ಕಿಚ್ಚ ಸುದೀಪ್ ಅವರು ಕಪಿಲ್ ದೇವ್ ಅವರನ್ನ ಭೇಟಿ ಆಗಲು ಹೋಗಿದ್ದರಂತೆ. ಅವಾಗ ಅವರನ್ನ ಭೇಟಿ ಮಾಡಿ ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ಕ್ಯಾಮೆರಾ ಕೈ ಕೊಟ್ಟಿತ್ತಂತೆ. ಅಂದಿನಿಂದ ಇಲ್ಲಿಯವರೆಗೆ ಅವರಿಗೆ ಕಪಿಲ್ ದೇವ್ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಈ ಕನಸು ಈಡೇರಲು ಸಾಧ್ಯವಾಗಿದ್ದು ರಣ್ ವೀರ್ ಸಿಂಗ್ ಅಭಿನಯದ 83 ಚಿತ್ರದ ಮೂಲಕ. ಹೌದು ಕಪಿಲ್ ದೇವ್ ಕ್ರಿಕೆಟ್ ವೃತ್ತಿಯಲ್ಲಿ ವಿಶ್ವಕಪ್ ಗೆದ್ದ ಸನ್ನಿವೇಶ ಹಿನ್ನೆಲೆ ಹೊಂದಿರುವ ಮತ್ತು ಕಪಿಲ್ ದೇವ್ ಅವರ ಜೀವಾನಾಧಾರಿತ ಘಟನೆಗಳನ್ನು ಆಧಾರಿಸಿ ಸಿದ್ದಗೊಂಡಿರುವ ಈ 83 ಚಿತ್ರದ ಪ್ರಮೋಶನ್ ಗಾಗಿ ಕಪಿಲ್ ದೇವ್ ಅವರು ಬೆಂಗಳೂರಿಗೆ ಆಗಮಿಸಿದ್ದರು.

ಈ 83 ಸಿನಿಮಾದ ಕಾರ್ಯಕ್ರಮದಲ್ಲಿ ಸುದೀಪ್, ಕಪಿಲ್ ದೇವ್, ನಾಯಕ ನಟ ರಣ್ ವೀರ್ ಸಿಂಗ್ ಪಾಲ್ಗೋಂಡಿದ್ದರು. ಈ ಸಂಧರ್ಭದಲ್ಲಿ ನಟ ಕಿಚ್ಚ ಸುದೀಪ್ ಕಪಿಲ್ ದೇವ್ ಅವರೊಟ್ಟಿಗೆ ಪೋಟೋ ತೆಗೆದುಕೊಂಡರು. ಈ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಸುದೀಪ್ ಅವರು ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಕನಸನ್ನು ನನಸು ಮಾಡಿದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಇನ್ನು ಈ 83 ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಕಥಾ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಈ 83 ಸಿನಿಮಾ ಕನ್ನಡದಲ್ಲಿ ಕೂಡ ಡಬ್ ಆಗಲಿದೆ. ಇದೇ ಡಿಸೆಂಬರ್ 23 ರಂದು ಈ 83 ಚಿತ್ರ ದೇಶಾದ್ಯಂತ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ರಿಲಾಯನ್ಸ್ ಎಂಟರ್ಟೈನ್ ಮೆಂಟ್ ಸಂಸ್ದೆಯ ಸಹಭಾಗಿತ್ವದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಶಾಲಿನಿ ಆರ್ಟ್ಸ್ ಮೂಲಕ ಈ 83 ಸಿನಿಮಾದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಈ ಮೂಲಕ ಮತ್ತೊಮ್ಮೆ ದೇಶಾದ್ಯಂತ ಸದ್ದು ಮಾಡಲಿದ್ದಾರೆ.

%d bloggers like this: