ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಖ್ಯಾತ ನಿರ್ದೇಶಕರು ಫಿಕ್ಸ್, ಕಥೆ ಇಷ್ಟಪಟ್ಟ ಕಿಚ್ಚ

ಕಾಲಿವುಡ್ ಗೆ ಸ್ಯಾಂಡಲ್ ವುಡ್ ಬಾದ್-ಶಾ ಕಿಚ್ಚ ಸುದೀಪ್, ಕನ್ನಡದ ಅನೇಕ ನಟ-ನಟಿಯರು ಪರ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದು ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆ. ಆದರೆ ಇದಕ್ಕೂ ಮೊದಲು ಪರಭಾಷೆಗಳಲ್ಲಿ ದಿಗ್ಗಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ನಟ ಕಿಚ್ಚ ಸುದೀಪ್ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಸ್ಟಾರ್ ನಟ. ಹಾಗಂತ ಅವರು ಬೇರೆ ಭಾಷೆಯ ಸಿನಿಮಾಗಳಲ್ಲಿ ಹೀರೋ ಪಾತ್ರವೇ ಬೇಕು ಎಂದು ಬೇಡಿಕೆ ಇಟ್ಟವರಲ್ಲ. ಸಿಕ್ಕಂತಹ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ತಮ್ಮ ನಟನಾ ಪ್ರತಿಭಾ ಮೂಲಕ ಗಮನ ಸೆಳೆದರು. ಅದರಲ್ಲಿಯೂ ಸಹ ಟಾಲಿವುಡ್ ಸುಪ್ರಸಿದ್ದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಈಗ ಚಿತ್ರದಲ್ಲಿ ಸುದೀಪ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಖಳ ನಾಯಕನ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ದಕ್ಷಿಣ ಭಾರತದಾದ್ಯಂತ ಒಮ್ಮೆಲೆ ಸ್ಟಾರ್ ನಟರಾದರು. ಈಗ ಚಿತ್ರದ ನಂತರ ಸುದೀಪ್ ಅವರಿಗೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಕೂಡ ಅಪಾರ ಅವಕಾಶ ಗಿಟ್ಟಿಸಿಕೊಂಡರು. ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ನಟಿಸಿದರು. ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್, ತಮಿಳಿನ ಇಳಯ ದಳಪತಿ ವಿಜಯ್, ತೆಲುಗಿನಲ್ಲಿ ಬಹುದೊಡ್ಡ ಅದ್ದೂರಿತನದ ಚಿತ್ರ ಬಾಹುಬಲಿಯಲ್ಲಿ ಪ್ರಭಾಸ್ ಅವರೊಟ್ಟಿಗೆ ನಟಿಸಿದ್ದರು. ಅಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ಸೈರಾ ನರಸಿಂಹ ರೆಡ್ಡಿ, ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಸಿನಿಮಾದಲ್ಲಿಯೂ ಕೂಡ ಕಿಚ್ಚ ನಟಿಸಿದ್ದರು.

ಇದೀಗ ಸುದೀಪ್ ಅವರು ತಮಿಳಿನ ಯಶಸ್ವಿ ನಿರ್ದೇಶಕ ವೆಂಕಟ್ ಪ್ರಭು ಅವರಿಗೆ ಕಾಲ್ ಶೀಟ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ತಮಿಳು ನಿರ್ದೇಶಕರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ವೆಂಕಟ್ ಪ್ರಭು ಅವರು ಕೇವಲ ನಿರ್ದೇಶಕ ಮಾತ್ರ ಅಲ್ಲ. ಅವರು ನಿರ್ಮಾಪಕ ಮತ್ತು ಕಥೆಗಾರ ಕೂಡ ಹೌದು. ವೆಂಕಟ್ ಪ್ರಭು ಅವರು ಕಿಚ್ಚನಿಗೆ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಲಿದೆಯಂತೆ.

ಹೌದು ಇತ್ತೀಚೆಗೆ ತಾನೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ಸಿಂಬು ಅಭಿನಯದ ಮಾನಾಡು ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಅವರ ಹೊಸ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಮಾನಾಡು ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಹೊಸ ಪ್ರಾಜೆಕ್ಟ್ ಗೆ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಕಿಚ್ಚ ಸುದೀಪ್ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಸುದೀಪ್ ಕೂಡ ತಮ್ಮ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ಬಿಝಿ಼ ಆಗಿದ್ದಾರೆ.

%d bloggers like this: