ಕಿಚ್ಚ ಸುದೀಪ್ ಅವರಿಗೂ ಮತ್ತು ಜುಲೈ 6 ಕ್ಕೂ ಇರುವ ವಿಶೇಷ ಸಂಬಂಧ ಏನು ಗೊತ್ತೇ

ಸ್ಯಾಂಡಲ್ವುಡ್ನ ಮತ್ತು ಭಾರತದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಯಾರಿಗೆ ಗೊತ್ತಿಲ್ಲ ಹೇಳಿ ನೋಡೋಣ. ಹೌದು ತಮ್ಮ ವಿಶೇಷ ಅಭಿನಯದ ಮೂಲಕ ಇಡೀ ದೇಶದ ಸಿನಿರಸಿಕರ ಮನ ಗೆದ್ದವರು ನಮ್ಮ ಚಿತ್ರರಂಗದ ಹೆಮ್ಮೆ ಸುದೀಪ್ ಅವರು. ಸುದೀಪ್ ಅವರಿಗೆ ಜುಲೈ ತಿಂಗಳ ಆರನೇ ತಾರೀಖಿನ ಜೊತೆ ತುಂಬಾ ನಂಟು ಇದೆ. ಅರೆರೆ ಸುದೀಪ್ ಹುಟ್ಟುಹಬ್ಬ ಸೆಪ್ಟೆಂಬರ್ ತಿಂಗಳು ಅಲ್ವಾ ಎಂದು ನಿಮಗೆ ಅನಿಸಬಹುದು.

ಆದರೆ ಇದು ಹುಟ್ಟುಹಬ್ಬಕ್ಕಿಂತಲೂ ಸುದೀಪ್ ಅವರ ಜೀವನದಲ್ಲಿ ಅಷ್ಟು ಪ್ರಾಮುಖ್ಯತೆಯನ್ನು ಪಡೆದ ದಿನವೊಂದರ ಕಥೆ. ಸುದೀಪ್ ಅವರು ಪ್ರಾರಂಭದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು ಕೂಡ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿದ್ದು ಹುಚ್ಚ ಎಂಬ ಒಂದು ಚಿತ್ರ. ಈ ಚಿತ್ರ ಸುದೀಪ್ ಅವರನ್ನು ಗಾಂಧಿನಗರದಲ್ಲಿ ಟಾಪ್ ನಟನನ್ನಾಗಿ ಮಾಡಿದ್ದು ಈಗ ಇತಿಹಾಸ, ಈ ಚಿತ್ರ ಬಿಡುಗಡೆಯಾಗಿದ್ದು 2001 ಜುಲೈ 6ರಂದು.

ಈಗ ಹುಚ್ಚು ಚಿತ್ರ ತೆರೆಕಂಡು ಬರೋಬ್ಬರಿ ಹತ್ತೊಂಬತ್ತು ವರ್ಷಗಳು ಕಳೆದಿವೆ. ಇನ್ನೊಂದು ವಿಶೇಷತೆ ಏನೆಂದರೆ ಸುದೀಪ್ ಅವರ ಪರಭಾಷೆಯ ನಟನೆ. ಬಹುತೇಕ ಚಿತ್ರರಂಗದ ಎಲ್ಲ ಭಾಷೆಗಳಲ್ಲಿ ಸುದೀಪ್ ನಟಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆದರೆ ಅವರನ್ನು ವಿಶ್ವವಿಖ್ಯಾತ ಮಟ್ಟಕ್ಕೆ ಏರಿಸಿದ್ದು ರಾಜಮೌಳಿ ಅವರ ನಿರ್ದೇಶನದ ಈಗ ಎಂಬ ಚಿತ್ರ. ಈ ಚಿತ್ರ ತೆಲುಗು ಹಿಂದಿ ತಮಿಳಿನಲ್ಲಿ ತೆರೆ ಕಂಡು ಅಬ್ಬರಿಸಿತು.

ಈ ಚಿತ್ರದಲ್ಲಿನ ಸುದೀಪ್ ಅವರ ನಟನೆಗೆ ಮನಸೋಲದವರೇ ಇಲ್ಲ. ಕಾಕತಾಳೀಯವೆಂದರೆ ಈಗ ಚಿತ್ರ ಬಿಡುಗಡೆಯಾಗಿದ್ದು ಕೂಡ 2012 ಜುಲೈ 6ರಂದು. ಹಾಗಾಗಿ ಸುದೀಪ್ ಅವರ ಜೀವನದಲ್ಲಿ ಜುಲೈ ಯಾರು ತುಂಬಾನೇ ಪ್ರಾಮುಖ್ಯತೆಯನ್ನು ಪಡೆದಿದೆ. ಇತ್ತೀಚಿಗೆ ಈ ವಿಷಯ ಟ್ರೆಂಡ್ ಆಗಿರುವ ಬಗ್ಗೆ ಮಾತನಾಡಿದ ಸುದೀಪ್ ಅವರು ಈ ಎರಡು ಸಿನಿಮಾಗಳನ್ನು ಮರೆಯಲು ಸಾಧ್ಯವೇ ಇಲ್ಲ, ಹಿಂದಿನ ಅದ್ಭುತ ನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

%d bloggers like this: