ಕಿಚ್ಚ ಸುದೀಪ್ ಅವರಿಗೆ ಸಿಕ್ತು ಮಹಿಳಾ ಅಭಿಮಾನಿಯ ವಿಶೇಷ ಉಡುಗೊರೆ

ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರು ಜನೆವರಿ 31ರಂದು ಸ್ಯಾಂಡಲ್ ವುಡ್ ಗೆ ಬಂದು 26 ವರ್ಷ ಪೂರ್ಣವಾಯಿತು. ಇಪ್ಪತ್ತಾರು ವರ್ಷಗಳ ಹಿಂದೆ ಜನವರಿ 31ರಂದು ಸುದೀಪ್ ಅವರ ಮೊದಲ ಬ್ರಹ್ಮ ಸಿನಿಮಾಗಾಗಿ ಕಿಚ್ಚ ಅವರು ಮೊದಲ ಬಾರಿ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಟಿಸಿದ್ದರು. ಅಂದಿನ ಬ್ರಹ್ಮ ಚಿತ್ರದಿಂದ ಇಂದಿನ ವಿಕ್ರಂತ್ ರೋಣ ಚಿತ್ರದವರೆಗೂ ಸುದೀಪ ಅವರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ, ತಮ್ಮದೇ ನಟನೆಯನ್ನು ಮುಂದುವರೆಸಿ ನಮ್ಮನ್ನು ರಂಜಿಸಿದ್ದಾರೆ. ಹುಚ್ಚ ಸಿನಿಮಾದ ನಂತರ ಅವರ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದವು. ಇದಕ್ಕೆ ಜಗ್ಗದ ಬಾದ್ ಶಾ, ನಟನಿಂದ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಹೊರಹೊಮ್ಮಿದರು.

ಮೈ ಆಟೋಗ್ರಾಫ್ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಮತ್ತೆ ಗೆಲುವಿನ ಪತಾಕೆಯನ್ನು ಹಾರಿಸಿದರು. ಕಳೆದ ವರ್ಷ 25ನೇ ವರ್ಷ ಪೂರೈಸಿದ್ದಕ್ಕಾಗಿ ಕಿಚ್ಚ ಸುದೀಪ್ ಅವರು ದುಬೈನಲ್ಲಿ ಸೆಲೆಬ್ರೇಶನ್ ಮಾಡಿಕೊಂಡಿದ್ದರು. ಕಿಚ್ಚ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ರೆಕಾರ್ಡ್ ಮಾಡಿದ್ದರು. ಇದುವರೆಗೂ ಎಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಕಿಚ್ಚ ಅವರು ಸ್ಯಾಂಡಲ್ ವುಡ್ ನಲ್ಲಿ 26 ವರ್ಷ ಪೂರೈಸಿದ್ದಕ್ಕಾಗಿ ಅವರ ಮಹಿಳಾ ಅಭಿಮಾನಿಗಳು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಈ ಗಿಫ್ಟ್ ಕಂಡು ಕಿಚ್ಚ ಸುದೀಪ್ ಅವರು ದಿಲ್ ಖುಷ್ ಆಗಿದ್ದಾರೆ. ಹೌದು ಸುದೀಪ್ ಅವರಿಗೆ 26 ವರ್ಷ ಪೂರೈಸಿದ್ದಕ್ಕಾಗಿ ಎಲ್ಲರೂ ವಿಶ್ ಮಾಡಿದ್ದಾರೆ. ಅವರ ಪತ್ನಿ ವಿಶೇಷ ಫೋಟೋ ಒಂದನ್ನು ಪೋಸ್ಟ್ ಮಾಡಿ ಸುದೀಪ್ ಅವರಿಗೆ ವಿಶ್ ಮಾಡಿದರು. ಆದರೆ ಒಬ್ಬ ಮಹಿಳಾ ಅಭಿಮಾನಿ ಸುದೀಪ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಸುದೀಪ್ ಅಭಿನಯದ ಎಲ್ಲಾ ಸಿನಿಮಾಗಳ ಫೋಟೋವನ್ನು ಒಂದು ಬಾಕ್ಸ ನಲ್ಲಿ ಲೈಟ್ ಹಾಕಿ ಗಿಫ್ಟ್ ಮಾಡಿದ್ದಾರೆ. ಗಿಫ್ಟ್ ಬಾಕ್ಸ್ ಓಪನ್ ಆಗುತ್ತಿದ್ದಂತೆ ಕಿಚ್ಚನ ಎಲ್ಲ ಸಿನಿಮಾಗಳ ಫೋಟೋಗಳು ಕಾಣಿಸುತ್ತವೆ. ಈ ಉಡುಗೊರೆಯಿಂದ ಕಿಚ್ಚ ಸುದೀಪ್ ಅವರು ತುಂಬಾ ಖುಷಿ ಪಟ್ಟಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದೀಗ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

%d bloggers like this: