ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಪುಟ್ಟಕ್ಕನ ಮಕ್ಕಳು ಧಾರವಾಹಿ

ಸಿನಿ ಅಭಿಮಾನಿಗಳಂತೆಯೇ ನಮ್ಮ ಸ್ಮಾಲ್ ಸ್ಕ್ರೀನ್ ಗಳಲ್ಲಿ ದಿನನಿತ್ಯ ಪ್ರಸಾರವಾಗುವ ಧಾರಾವಾಹಿಗಳಿಗೂ ಕೂಡ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಿನಿಮಾ ನಟ-ನಟಿಯರಿಗೆ ದೊಡ್ಡ ದೊಡ್ಡ ಅಭಿಮಾನಿ ಬಳಗವು ಇರುವ ಹಾಗೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಯ ನಟನಟಿಯರಿಗೂ ಕೂಡ ಅಭಿಮಾನಿಗಳ ಬಳಗವಿದೆ. ಇತ್ತೀಚಿಗೆ ಪ್ರಸಾರವಾಗುವ ಧಾರವಾಹಿಗಳು ಕೂಡ ಯಾವುದೇ ಸಿನಿಮಾಗೆ ಕಡಿಮೆಯಿಲ್ಲವೆಂಬಂತೆ ನಿರ್ದೇಶನ ಮಾಡುತ್ತಿವೆ. ಧಾರಾವಾಹಿಗಳು ಒಂದು ಕುಟುಂಬದಲ್ಲಿ ದಿನನಿತ್ಯ ನಡೆಯಬಹುದಾದ ನೈಜ ಘಟನೆಗಳನ್ನು ಆಧರಿಸಿರುವುದರಿಂದ ಇವುಗಳು ಎಲ್ಲರಿಗೂ ಅಚ್ಚುಮೆಚ್ಚು. ದೊಡ್ಡ ದೊಡ್ಡ ಸಿನಿಮಾ ನಟರಂತೆ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿರುವ ಪಾತ್ರಧಾರಿಗಳಿಗೂ ಕೂಡ ಕ್ರೇಜ್ ಹೆಚ್ಚುತ್ತಿದೆ.

ಯಾವುದೇ ಹೊಸ ಧಾರಾವಾಹಿ ಆರಂಭವಾದಾಗ ಅದರ ಬಗ್ಗೆ ವೀಕ್ಷಕರು ಆಸಕ್ತಿ ತೋರಿಸುವುದು ಸಹಜ. ಧಾರಾವಾಹಿ ಶುರುವಾದಾಗ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಾರೆ. ಆದರೆ ಆ ಕುತೂಹಲವನ್ನು ಮುಂದುವರಿಸಿದೊಂಡು ಹೋಗುವಲ್ಲಿ ಕೆಲವು ಸೀರಿಯಲ್ ಗಳು ಮಾತ್ರ ಸಕ್ಸಸ್ ಆಗುತ್ತವೆ. ಅದೇ ರೀತಿ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ್ನು ಜನ ಮೆಚ್ಚಿಕೊಂಡಿದ್ದಾರೆ. ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕಾಗಿ ಹೆಂಡತಿಯನ್ನು ತ್ಯಜಿಸಿ ಗಂಡ ಮತ್ತೊಂದು ವಿವಾಹವಾದರೂ, ಪುಟ್ಟಕ್ಕ ಯಾವ ರೀತಿ ತಾನೇ ತನ್ನ ಬದುಕು ಕಟ್ಟಿಕೊಂಡು ಸ್ವಾಭಿಮಾನದಿಂದ ಬದುಕುತ್ತಾಳೆ ಎಂಬುದು ಈ ಧಾರಾವಾಹಿಯ ಕಥೆ.

ಆ ಹೆಣ್ಣುಮಕ್ಕಳ ಧೈರ್ಯ, ಸ್ವಾಭಿಮಾನವನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀಯವರ ಜೊತೆಗೆ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ ಹೀಗೆ ದೊಡ್ಡ ತಾರಾಗಣವಿದೆ. ಅಲ್ಲದೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅವರು ಈ ಸೀರಿಯಲ್ ನಲ್ಲಿದ್ದಾರೆ.

ಈ ಧಾರಾವಾಹಿಯನ್ನು ಜಿ ಎಸ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಪ್ರದೀಪ್ ಅಜ್ರಿ ಮತ್ತು ಪರೀಕ್ಷಿತ್ ಎಂ ಎಸ್ ನಿರ್ಮಾಪಕರು. ಇನ್ನು ಧಾರಾವಾಹಿಯ ಶೀರ್ಷಿಕೆ ಗೀತೆ ಕೂಡ ಫೇಮಸ್ ಆಗಿದ್ದು, ಹರಿಪ್ರಿಯಾ ಅವರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಪಂಚಮಜೀವ ದ್ವನಿ ನೀಡಿದ್ದು, ಸತ್ಯಕಿ ಅವರು ಚಿತ್ರಕತೆ ಮತ್ತು ಸಂಭಾಷಣೆ ನೀಡಿದ್ದಾರೆ. ಇನ್ನು ಈ ಧಾರಾವಾಹಿಯ ಮತ್ತೊಂದು ವಿಶೇಷವೆಂದರೆ ಟಿ ಆರ್ ಪಿ. ಹೌದು ಈ ಸೀರಿಯಲ್ ನ ಟಿ ಆರ್ ಪಿ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಬರೋಬ್ಬರಿ 13.5 ಟಿವಿಆರ್ ಪಡೆದುಕೊಂಡಿರುವುದು ಈ ಧಾರಾವಾಹಿಯ ಗೆಲುವು ಎಂದೇ ಹೇಳಬಹುದು.

%d bloggers like this: