ಸ್ಯಾಂಡಲ್ವುಡ್ ನ ಸ್ವೀಟಿ ಎಂದೇ ಖ್ಯಾತಿಯಾಗಿರುವ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಎಲ್ಲರ ಫೆವರಿಟ್. ಈ ಹಿಂದೆ ಕನ್ನಡ ಸಿನಿ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಈ ನಟಿ, ಕೆಲವು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ತಮ್ಮ ಮದುವೆ ನಂತರ ಮನೆ ಹಾಗೂ ಮಗಳೊಂದಿಗೆ ಕಾಲಕಳೆಯುತ್ತಿದ್ದ ರಾಧಿಕಾ, ಚಿತ್ರರಂಗದಿಂದ ದೂರವೇ ಉಳಿದಿದ್ದರು. ಹಲವಾರು ನಟ ನಟಿಯರು ತಮ್ಮ ಸಿನಿ ಪಯಣಕ್ಕೆ ಬ್ರೇಕ್ ಹಾಕಿದ್ದರೂ ಕೂಡ, ಸೋಷಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಆದರೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಯಾವುದೇ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಿರಲಿಲ್ಲ.

ಹೀಗಾಗಿ ಇವರ ಅಭಿಮಾನಿಗಳಿಗೆ ಇವರ ಬಗ್ಗೆ ಅಪ್ಡೇಟ್ ಗಳು ದೊರೆಯುತ್ತಿರಲಿಲ್ಲ. ಹಲವಾರು ವರ್ಷಗಳ ನಂತರ ಲಕ್ಕಿ ಸಿನಿಮಾದ ನಿರ್ಮಾಪಕಿಯಾಗಿ ಮತ್ತೆ ಎಲ್ಲರ ಮುಂದೆ ಕಾಣಿಸಿಕೊಂಡ ಈ ನಟಿಯನ್ನು, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಬಗ್ಗೆ ಅಪ್ಡೇಟ್ ಗಳನ್ನು ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಮದುವೆ ಹಾಗೂ ಮಕ್ಕಳ ನಂತರವೂ ತಮ್ಮ ಸೌಂದರ್ಯವನ್ನು ಮೊದಲಿನಂತೆಯೇ ಕಾಪಾಡಿಕೊಂಡ ಈ ನಟಿ, ರಾಧಿಕಾ ಅವರ ಡೇಲಿ ರೂಟಿನ್ ಹೇಗಿರುತ್ತದೆ ಹಾಗೂ ಅವರು ತಮ್ಮ ಸೌಂದರ್ಯವನ್ನು ಇಷ್ಟು ಚೆನ್ನಾಗಿ ಕಾಪಾಡಿಕೊಂಡು ಬಂದಿರುವ ಹಿಂದಿನ ಸೀಕ್ರೆಟ್ ಏನು ಎಂಬುದರ ಬಗ್ಗೆ ಅವರ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.



ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಇವರು ಆಕ್ಟಿವ್ ಆಗಿರದೆ ಇರುವುದರಿಂದ ರಾಧಿಕಾ ಅವರ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುತ್ತಿದ್ದರು. ಹಲವಾರು ಸೋಶಿಯಲ್ ಮೀಡಿಯಾ ಗಳಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರಿನೊಂದಿಗೆ ಅವರ ಅಭಿಮಾನಿಗಳು ಅನೇಕ ಪೇಜುಗಳನ್ನು ತೆರೆದಿದ್ದಾರೆ. ಆದರೆ ಇಲ್ಲಿ ಇವರ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಹೀಗಾಗಿ ರಾಧಿಕಾ ಅವರು ತಮ್ಮ ಅಭಿಮಾನಿಗಳ ಒತ್ತಾಸೆಯಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬರಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ಅವರೇ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ನಾನು ನಿಮ್ಮ ರಾಧಿಕಾ ಕುಮಾರಸ್ವಾಮಿ.



ನನ್ನ ಅಭಿಮಾನಿಗಳಾದ ನಿಮಗೆಲ್ಲರಿಗೂ ಇನ್ನಷ್ಟು ಹತ್ತಿರವಾಗಲು ಫೇಸ್ಬುಕ್ ಖಾತೆಯನ್ನು ತೆರೆದಿದ್ದೇನೆ. ಇದುವರೆಗೆ ನನ್ನ ಅಭಿಮಾನಿಗಳು ನನ್ನ ಹೆಸರಿನಲ್ಲಿ ಹಲವಾರು ಪೇಜ್ ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಆದರೆ ಈಗ ನಾನು ನನ್ನ ಪರ್ಸನಲ್ ಅಕೌಂಟ್ ಅನ್ನು ತೆರೆಯುತ್ತಿದ್ದೇನೆ. ಇಲ್ಲಿ ನಾನು ನನ್ನ ದಿನನಿತ್ಯದ ಅಪ್ಡೇಟ್ ಗಳನ್ನು ನೀಡುತ್ತೇನೆ. ಎಲ್ಲರೂ ನನ್ನ ಪೇಜ್ ಅನ್ನು ಫಾಲೋ ಮಾಡಿ ಮತ್ತು ಶೇರ್ ಮಾಡಿ ಎಂದು ಹೇಳಿದ್ದಾರೆ. ತಮ್ಮ ಅಭಿಮಾನಿಗಳಿಗೋಸ್ಕರ ಫೇಸ್ಬುಕ್ ಖಾತೆಯನ್ನು ತೆರೆದು, ಆಫೀಸಿಯಲ್ ಕೂಡ ಮಾಡಿಸಿಕೊಂಡಿರುವ ರಾಧಿಕಾ ಅವರು ತಮ್ಮ ಮುಂದಿನ ಸಿನಿಮಾ ಹಾಗೂ ಜೀವನದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡಲಿದ್ದಾರೆ. ಇದನ್ನು ತಿಳಿದ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.