ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕನೆಕ್ಷನ್ ಮಾಡಿದ ಕನ್ನಡದ ಈ ಸಿನಿಮಾ ಇದೀಗ ಓಟಿಟಿನಲ್ಲೂ ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡು ಸಖತ್ ಟ್ರೆಂಡ್ ಕ್ರಿಯೆಟ್ ಮಾಡಿದೆ. ಇತ್ತೀಚೆಗೆ ತಾನೇ ಕಳೆದ ತಿಂಗಳು ಫೆಬ್ರವರಿ 11ರಂದು ರಾಜ್ಯಾದ್ಯಂತ ತೆರೆಕಂಡ ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದ ಜೊತೆಗೆ ಅಭಿನಯ ಇರುವ ಲವ್ ಮಾಕ್ಟೇಲ್2 ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿತು. ಲವ್ಮಮಾಕ್ಟೇಲ್ ಚಿತ್ರದ ಮುಂದುವರಿದ ಭಾಗವಾಗಿ ಮೂಡಿ ಬಂದ ಈ ಲವ್ ಮಾಕ್ಟೇಲ್ ಸಿನಿಮಾ ಯುವ ಪ್ರೇಮಿಗಳಿಗೆ ಬಹಳ ಆಪ್ತವಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನ ತೃಪ್ತಿ ಪಡಿಸುವಲ್ಲಿ ಲವ್ ಮಾಕ್ಟೇಲ್2 ಚಿತ್ರ ಸಫಲವಾಯಿತು. ಅದರ ಜೊತೆಗೆ ಈ ಸಿನಿಮಾ ಕಲೆಕ್ಷನ್ ನಲ್ಲೂ ಕೂಡ ಉತ್ತಮವಾಗಿ ವಹಿವಾಟು ನಡೆಸಿತ್ತು. ಚಿತ್ರದ ನಾಯಕಿ ಆಗಿರುವ ನಟಿ ಮಿಲನಾ ನಾಗರಾಜ್ ಅವರೇ ಸ್ವತಃ ಬಂಡವಾಳ ಹೂಡಿಕೆ ಮಾಡಿ ನಟಿಸಿದ ಈ ಸಿನಿಮಾ ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು.

ಅದರಂತೆ ಚಿತ್ರ ತಂಡ ರಾಜ್ಯದ ಅನೇಕ ಕಡೆ ತಮ್ಮ ಚಿತ್ರದ ಯಶಸ್ಸಿಗೆ ಕಾರಣವಾದ ಸಿನಿ ಪ್ರೇಕ್ಷಕರು ಅಭಿಮಾನಿಗಳನ್ನ ನೇರವಾಗಿ ಭೇಟಿ ಮಾಡಲು ಪ್ರವಾಸ ಕೂಡ ಕೈ ಗೊಂಡಿದ್ದರು ನಟ,ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಲವ್ ಮಾಕ್ಟೇಲ್2 ಸಿನಿಮಾ ಬಿಡುಗಡೆಯಾದ ಎರಡೇ ವಾರದಲ್ಲಿ ಹದಿನೈದು ಕೋಟಿ ಗಳಿಕೆ ಮಾಡಿ ಡಾರ್ಲಿಂಗ್ ಕೃಷ್ಣ ಅವರ ಸಿನಿ ವೃತ್ತಿಯಲ್ಲಿ ಹೊಸ ತಿರುವು ನೀಡಿತು. ಇನ್ನು ಲವ್ ಮಾಕ್ಟೇಲ್2 ಸಿನಿಮಾ ಚಿತ್ರ ಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಕಂಡು ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಿತು. ನಿರೀಕ್ಷಿತ ಎಂಬಂತೆ ಇತ್ತೀಚೆಗೆ ತಾನೇ ಈ ಲವ್ ಮಾಕ್ಟೇಲ್2 ಸಿನಿಮಾ ಒಟಿಟಿ ಅಮೇಜಾ಼ನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಸಿನಿಮಾ ಮಂದಿರದಲ್ಲಿ ನೋಡದ ಅನೇಕ ಮಂದಿ ಈ ಲವ್ ಮಾಕ್ಟೇಲ್2 ಚಿತ್ರವನ್ನ ಓಟಿಟಿಯಲ್ಲಿ ನೋಡಿದ್ದಾರೆ. ಓಟಿಟಿಯಲ್ಲಿ ಚಿತ್ರ ನೋಡಿದ ಸಿನಿ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.



ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಅವರಿಗೆ ಮತ್ತೊಂದಷ್ಟು ಸಿನಿಮಾ ನಿರ್ದೇಶನ ಮಾಡುವುದಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲವ್ಮಮಾಕ್ಟೇಲ್2 ಚಿತ್ರದ ಬಗ್ಗೆ ಪಾಸಿಟೀವ್ ವಿಮರ್ಶೆ ಮಾಡಿದ್ದಾರೆ. ಇದರ ಜೊತೆಗೆ ಲವ್ ಮಾಕ್ಟೇಲ್2 ಸಿನಿಮಾ ಓಟಿಟಿಯಲ್ಲಿ ಟಾಪ್ 10 ಸಿನಿಮಾಗಳ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡು ಟ್ರೆಂಡ್ ಸೃಷ್ಟಿ ಮಾಡಿದೆ. ಇನ್ನು ಲವ್ ಮಾಕ್ಟೇಲ್2 ಸಿನಿಮಾದಲ್ಲಿ ನಟಿಸಿದ ಎಲ್ಲಾ ನಟ ನಟಿಯರಿಗೆ ಇದೀಗ ಚಂದನವನದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಹರಿದು ಬರುತ್ತಿವೆ. ಒಟ್ಟಾರೆಯಾಗಿ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶನ ಮಾಡಿದ ಎರಡನೇ ಚಿತ್ರಕ್ಕೆ ಕೂಡ ಅಭೂತ ಪೂರ್ವ ಯಶಸ್ಸು ಸಿಕ್ಕಿದ್ದು ಲವ್ ಮಾಕ್ಟೇಲ್2 ಸಿನಿಮಾ ಥಿಯೇಟರ್ ನಲ್ಲಿ ಸದ್ದು ಮಾಡಿದಂತೆ ಒಟ್ಟಿನಲ್ಲಿ ಪ್ಲಾಟ್ ಫಾರ್ಮ್ ನಲ್ಲೂ ಕೂಡ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.