ಕೊನೆಗೂ ಭಾರತಕ್ಕೆ ಶರಣಾದ ಚೀನಾ, 30 ವರ್ಷಗಳ ನಂತರ ಈ ಕೆಲಸ ಮಾಡ್ತಿದೆ

ಭಾರತ ಮತ್ತು ಚೀನಾ ದೇಶಗಳ ಸಂಬಂಧ ಬಹಳ ದಶಕಗಳಿಂದಲೂ ಹಾವು ಮುಂಗುಸಿ ಇದ್ದಂತೆ. ಎರಡು ದೇಶಗಳ ನಡುವೆ ಬಹಳ ಹಿಂದಿನಿಂದಲೂ ಗಡಿ ತಕರಾರು ಇದ್ದೇ ಇದೆ. ಅದರಲ್ಲೂ ಈಗ ಸ್ವಲ್ಪ ತಿಂಗಳುಗಳಿಂದ ಚೀನಾ ದೇಶದ ಸೈನಿಕರ ಉಪಟಳ ಅತಿಯಾಗಿಯೇ ಇತ್ತು. ಇದೇ ಜೂನ್ ತಿಂಗಳಲ್ಲಿ ನಮ್ಮ ದೇಶದ ಲಡಾಕ್ ಭಾಗದಲ್ಲಿ ಚೀನಾ ಮತ್ತು ಭಾರತಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು, ಆ ಸಂದರ್ಭದಲ್ಲಿ ಚೀನಾದ ಕೆಲವು ದುಷ್ಟ ಸೈನಿಕರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದರು. ಆ ಘಟನೆಯ ನಂತರ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗ ಚೀನಾ ಕೊಂಚ ಶಾಂತವಾದ ರೀತಿಯಲ್ಲಿ ಕಾಣುತ್ತಿದೆ. ಇಡೀ ದೇಶಕ್ಕೆ ಕೋರೋಣ ಎಂಬ ಸೋಂಕನ್ನು ಹಚ್ಚಿದರೂ ಕೂಡ ಅದರ ಸೊಕ್ಕು ಮಾತ್ರ ಮುರಿದಿರಲಿಲ್ಲ, ಆ ದೇಶಕ್ಕೆ ತನ್ನ ತಪ್ಪಿನ ಅರಿವೇ ಇಲ್ಲ ಎಂಬಂತೆ ವರ್ತಿಸುತ್ತಿತ್ತು, ಆದರೆ ಈಗ ಚೀನಾ ಬರೋಬ್ಬರಿ 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಹೌದು ಅಕ್ಕಿಯ ರಫ್ತಿನಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮೊದಲ ಸ್ಥಾನದಲ್ಲಿ ಇದ್ದರೂ ಚೀನಾ ನಮ್ಮ ದೇಶದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿರಲಿಲ್ಲ, ಅದರ ಬದಲಾಗಿ ವಿಯೆಟ್ನಾಂ ಮಯನ್ಮಾರ್ ಮತ್ತು ಪಾಕಿಸ್ತಾನಗಳಿಂದ ತರಿಸಿಕೊಳ್ಳುತ್ತಿದ್ದರು. ಆದರೆ ಆ ದೇಶಗಳಿಂದ ಬರುವ ಅಕ್ಕಿಯ ಗುಣಮಟ್ಟ ಕಳಪೆಯಾದ ಕಾರಣ ಈಗ ಚೀನಾ ಭಾರತದತ್ತ ಮುಖ ಮಾಡುತ್ತಿದೆ. ನಮ್ಮ ದೇಶದ ಅಕ್ಕಿಯ ಗುಣಮಟ್ಟ ಉತ್ಕೃಷ್ಟವಾಗಿದೆ ಎಂದುದು ಅದಕ್ಕೆ ಗೊತ್ತಾಗಿದೆ. ಅದರಲ್ಲೂ ಭಾರತ ಸ್ವಲ್ಪ ಕಡಿಮೆ ಬೆಲೆಗೆ ಚೀನಾ ದೇಶಕ್ಕೆ ಅಕ್ಕಿಯನ್ನು ವಿತರಿಸಲು ನಿರ್ಧರಿಸಿದೆ, ಪ್ರತಿ 1 ಟನ್ ಅಕ್ಕಿಗೆ 22000 ದಂತೆ ಚೀನಾ ಬೆಲೆ ಕೊಡುತ್ತಿದೆ. ಅದೇನೇ ಇರಲಿ ನಮ್ಮ ದೇಶದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದರ ಮೂಲಕ ಚೀನಾ ತನ್ನ ಹಠಮಾರಿ ಧೋರಣೆಯನ್ನು ಕಡಿಮೆ ಮಾಡಿದಂತಿದೆ. ವಿಶೇಷ ಸಂಗತಿ ಏನೆಂದರೆ ಇಡೀ ವಿಶ್ವದಲ್ಲಿಯೇ ಚೀನಾ ಅತಿ ಹೆಚ್ಚು ಅಕ್ಕಿಯನ್ನು ಮಾಡಿಕೊಳ್ಳುವ ದೇಶವಾಗಿದೆ.

%d bloggers like this: