ಕೊನೆಗೂ ಸಿನಿಮಾ ಜಗತ್ತಿಗೆ ಕಾಲಿಟ್ಟ ಮಾಜಿ ನಾಯಕ ಎಮ್ಎಸ್ ಧೋನಿ

2019 ರಲ್ಲಿ ಕ್ರಿಕೆಟ್ ಲೋಕಕ್ಕೆ ಮಹೇಂದ್ರ ಸಿಂಗ್ ಧೋನಿ ಗುಡ್ ಬೈ ಹೇಳಿದರೂ ಕೂಡ ಧೋನಿಯ ಕ್ರಿಕೆಟ್ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿರುವ ಧೋನಿ, ಈಗಾಗಲೇ ಭಾರತಕ್ಕೆ 2 ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಟ್ಟಿದ್ದಾರೆ. ಧೋನಿ ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಮುಗಿಯಿತು ಆ ಪಂದ್ಯಕ್ಕೆ ಊಹಿಸಲಾಗದಂತಹ ತಿರುವು ಸಿಗುತ್ತಿತ್ತು. ಸೋಲುವಂತಹ ಎಷ್ಟೋ ಮ್ಯಾಚಗಳನ್ನು ಕೊನೆಯಲ್ಲಿ ಗೆಲ್ಲಿಸಿದ ಕೀರ್ತಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ. ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಆಟಕ್ಕಿಂತ ಅವರ ವಿಭಿನ್ನವಾದ ಹೇರ್ ಸ್ಟೈಲ್ ಗೆ ತುಂಬಾ ಜನ ಅಭಿಮಾನಿಗಳು ಫಿದಾ ಆಗಿದ್ದರು. ಧೋನಿ ಅವರು ತಮ್ಮ ವಿಭಿನ್ನ ಹೇರ್ ಸ್ಟೈಲ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದರು.

ಇದೀಗ ಅದೇ ಧೋನಿ ವೆಬ ಸಿರಿಸ್ ಮೂಲಕ ತಮ್ಮ ಜೀವನದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ರೆಡಿಯಾಗಿದ್ದಾರೆ. ಹೌದು ಧೋನಿ ಹೀರೋ ಆಗಿ ಮಿಂಚುವ ಕಾಲ ಹತ್ತಿರವಾಗಿದೆ. ಇವರ ಹೊಸ ಲುಕ್ ಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಯಾವ ಹೀರೋಗೂ ಕಡಿಮೆ ಇಲ್ಲ ಎನ್ನುವ ತರಹ ತಮ್ಮ ಕೂದಲನ್ನು ವಿನ್ಯಾಸಿಸಿ ಸುದ್ದಿಯಾಗುತ್ತಿದ್ದರು. ಧೋನಿಯ ಲುಕ್ ಗೆ ಮಾರುಹೋದ ಜನ ಧೋನಿ ಯಾಕೆ ಹೀರೋ ಆಗಬಾರದು ಎಂದುಕೊಳ್ಳುತ್ತಿದ್ದರು. ಇದೀಗ ಅಭಿಮಾನಿಗಳ ಆಸೆ ಸಣ್ಣಿತವಾಗಿದೆ.

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ನೆತ್ತರು ಅಂಟಿದ ಕತ್ತಿಯನ್ನು ಹಿಡಿದು ಯುದ್ಧಕ್ಕೆ ನಿಂತಿರುವ ಧೋನಿಯವರ ಧೋನಿ ಲುಕ್ ಎಲ್ಲರಿಗೂ ಶಾಕ್ ನೀಡಿದೆ. ಅವರ ಕತ್ತಿನಲ್ಲಿರುವ ಡಿಫರೆಂಟ್ ಆಭರಣಗಳು ಧೋನಿ ಅವರ ಲುಕ್ಕಿಗೆ ಪವರ್ ನೀಡಿದಂತಿದೆ. ಮಾಹಿಯವರನ್ನು ನೋಡಿದರೆ ದುಷ್ಟರನ್ನು ಶಿಕ್ಷಿಸಲು ಬಂದ ಅವತಾರ ಪುರುಷನಂತೆ ಕಾಣುತ್ತಿದ್ದಾರೆ. ಅಥರ್ವ ದಿ ಒರಿಜಿನ್ ಎಂಬ ಕಾದಂಬರಿಯು ಅಗೋರಿಗಳನ್ನು ಆಧರಿಸಿರುವ ಕಾಲ್ಪನಿಕ ಕಥೆಯಾಗಿದ್ದು, ಅಥರ್ವ ಎಂಬ ಅಗೋರಿ ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ರೋಚಕ ಕಥೆಯನ್ನು ಹೊಂದಿದೆ. ಅಥರ್ವ ಕಾದಂಬರಿಯಲ್ಲಿ ಅಥರ್ವ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೇಖಕ ರಮೇಶ್ ತಮಿಳ್ ಮಣಿ ಅವರ ಕೃತಿ ಅಥರ್ವ ಆಧಾರಿತ ಕಾದಂಬರಿಯಾಗಿದೆ. ಅಥರ್ವ ದಿ ಒರಿಜಿನ್ ಎಂಬುವುದು ಗ್ರಾಫಿಕಲ್ ಕಾದಂಬರಿಯಾಗಿದೆ. ಇಲ್ಲಿ ಪಾತ್ರಗಳು, ಕಥೆ, ಗ್ರಾಫಿಕ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಹಿನ್ನೆಲೆ ಧ್ವನಿ ಒಂದು ರೀತಿಯ ಅನಿಮೇಶನ್ ಸಿನಿಮಾದ ಫೀಲ್ ಇರಲಿದೆ. ಒಟ್ಟು 150 ಕ್ಕೂ ಅಧಿಕ ಪಾತ್ರಗಳು ಈ ಚಿತ್ರದಲ್ಲಿವೆ. ಈ ಗ್ರಾಫಿಕ್ ಕಾದಂಬರಿಯನ್ನು ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಸ್ಥಾಪಿಸಿದ ಸಂಸ್ಥೆ ಧೋನಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ.

ಪ್ರಾಚೀನ ಪುರಾಣಗಳು ಅಗೋರಿಗಳ ಬಗ್ಗೆ ಇನ್ನೂ ಹೊರಜಗತ್ತಿಗೆ ಗೊತ್ತಿರದ ರಹಸ್ಯಗಳು, ಈಗ ಅಗೋರಿಗಳ ಬಗ್ಗೆ ಇರುವ ನಂಬಿಕೆಗಳು, ಹೀಗೆ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಸಾಕ್ಷಿ ಧೋನಿ ತಿಳಿಸಿದ್ದಾರೆ. ಇನ್ನು ಧೋನಿ ತಮ್ಮ ಮೊದಲ ಲುಕ್ಕಿನಲ್ಲಿಯೇ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಟೀಸರ್ ನೋಡಿದ ದೋನಿಯ ಅಭಿಮಾನಿಗಳು ವೆಬ್ ಸೀರಿಸ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಇಷ್ಟು ದಿನ ಕ್ರಿಕೆಟ್ ಅಂಗಳದಲ್ಲಿ ಮಿಂಚಿದ ಧೋನಿ, ಬಣ್ಣ ಹಚ್ಚಿ ಅಭಿನಯಿಸುವುದನ್ನು ಕಣ್ತುಂಬಿಕೊಳ್ಳಲು ಧೋನಿ ಅಭಿಮಾನಿಗಳು ಕಾಯುತ್ತಿದ್ದಾರೆ.

%d bloggers like this: