ಕೊನೆಗೂ ಹೊರಬಿತ್ತು ಭಾರತದಾದ್ಯಂತ ಸುದ್ದಿಯಾಗಿದ್ದ ಕನ್ನಡ ಚಿತ್ರದ 2ನೇ ಭಾಗ

ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್2 ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿಯಾದ ಸಿನಿಮಾಗಳಲ್ಲಿ ಲವ್ ಮಾಕ್ಟೆಲ್ ಚಿತ್ರ ಕೂಡ ಒಂದಾಗಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ನಟ ಡಾರ್ಲಿಂಗ್ ಕೃಷ್ಣ ತಾವೇ ಸ್ವತಃ ನಿರ್ದೇಶನಕ್ಕಿಳಿದು ಲವ್ ಮಾಕ್ಟೇಲ್ ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡುವುದರ ಜೊತೆಗೆ ಮಿಲನಾ ನಾಗರಾಜ್ ಅವರ ಜೊತೆಗೂಡಿ ನಿರ್ಮಾಣವನ್ನು ಕೂಡ ಮಾಡಿದರು‌. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಯಶಸ್ಸು ಕಂಡ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೆಲ್ ಮುಂದುವರಿದ ಭಾಗವಾಗಿ ಪಾರ್ಟ್2 ಕೂಡ ಬರುತ್ತದೆ ಎಂದು ತಿಳಿಸಿದ್ದರು.

ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮೋಡಿ ಮಾಡಿತು. ಅಧಿತಿ ಪಾತ್ರದಲ್ಲಿ ರಚನಾ ಇಂದರ್ ನಟಿಸಿದ್ದರು. ಇವರ ಹೆಂಗೆ ನಾವು ಎಂಬ ಡೈಲಾಗ್ ಸಖತ್ ಫೇಮಸ್ ಕೂಡ ಆಗಿತ್ತು. ಜೊತೆಗೆ ರಘು ದೀಕ್ಷೀತ್ ಅವರ ಮ್ಯೂಸಿಕ್ ಕೂಡ ಸಖತ್ ಹಿಟ್ ಆಗಿತ್ತು. ನಟಿ ಅಮೃತಾ ಅಯ್ಯಂಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು‌. ಈ ಲವ್ ಮಾಕ್ಟೇಲ್ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿಧಿಮಾ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಾರೆ. ಇದು ಕ್ಲೈಮ್ಯಾಕ್ಸ್ ನಲ್ಲಿ ಸಹ ಪ್ರಯಾಣಿಕರಾಗಿ ಸಾಗುವ ಅಧಿತಿ ಮತ್ತು ಆದಿ ಪಾತ್ರಗಳು ಕೊನೆಯಲ್ಲಿ ಜೊತೆಯಾಗುತ್ತಾರಾ ಎಂಬ ಪ್ರಶ್ನೆಯೊಂದು ಪ್ರೇಕ್ಷಕರನ್ನ ಕುತೂಹಲಕ್ಕೆ ಮೂಡಿಸುತ್ತದೆ.

ಇದೀಗ ಈ ಲವ್ ಮಾಕ್ಟೇಲ್ ಮಂಜುವರಿದ ಭಾಗವಾಗಿ ಲವ್ ಮಾಕ್ಟೇಲ್2 ಚಿತ್ರ ಕೂಡ ತಯಾರಾಗಿದೆ. ಈ ಲವ್ ಮಾಕ್ಟೇಲ್2 ಚಿತ್ರ ಸ್ಯಾಂ ಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ‌. ಇದೀಗ ಈ ಲವ್ ಮಾಕ್ಟೇಲ್ 2 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೌದು ಮುಂದಿನ ವರ್ಷ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿ 14 ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತದೆ ಎಂದು ತಿಳಿಸಿದ್ದರು. ಇದೀಗ ಅದಕ್ಕೂ ಮೂರು ದಿನಗಳ ಮುನ್ನವೇ ಲವ್ ಮಾಕ್ಟೇಲ್2 ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಈ ಚಿತ್ರಕ್ಕೆ ನಕುಲ್ ಅಭಯಂಕರ್ ರಾಗ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ.

%d bloggers like this: