ಕೊನೆಗೂ ಕರ್ನಾಟಕಕ್ಕೆ ಬಂತು 568 ಕಿಮಿ ಮೈಲೇಜ್ ನೀಡುವ ಅಮೆರಿಕಾದ ದೈತ್ಯ ಕಾರು

ಕರ್ನಾಟಕದತ್ತ ಹೆಜ್ಜೆ ಇಟ್ಟ ಅಮೇರಿಕಾದ ಪ್ರಸಿದ್ದ ಟೆಸ್ಲಾ ಕಂಪನಿ! ವಿಶ್ವದಲ್ಲಿ ಪ್ರಸಿದ್ದತೆ ಪಡೆದಿರುವ ಟೆಸ್ಲಾ ಕಂಪನಿ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಶಾಖೆ ತೆರೆಯಲು ಸಜ್ಜಾಗಿದೆ. ಇದರಿಂದ‌‌‌‌‌ ರಾಜ್ಯದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗುತ್ತವೆ ಎಂಬುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಹಾಗಾದದೆ ಈ ಟೆಸ್ಲಾ ಕಂಪನಿಯ ಬಗ್ಗೆ ತಿಳಿಯುವುದಾದರೆ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಟೆಸ್ಲಾ ಕಂಪನಿಯು ಅಮೇರಿಕಾ ಮೂಲದ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿದರೆ ಭಾರತದ ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಅದರ ಬಳಕೆಯಲ್ಲಿ ಮಹತ್ತರ ಬದಲಾವಣೆ ಆಗುತ್ತದೆ ಎಂದು ವಿಶ್ಲೇಷಣೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಅಮೇರಿಕಾದ ಈ ಟೆಸ್ಲಾ ಕಂಪನಿಯು ರಾಜ್ಯದ ರಾಜಧಾನಿದಲ್ಲಿ ತಮ್ಮ ಟೆಸ್ಲಾ ಸಂಸ್ಥೆಯ ಶಾಖೆ ತೆರೆಯುತ್ತಿದ್ದು, ಈಗಾಗಲೇ ಭಾರತದ ಕಂಪನಿಗಳ ಲಿಸ್ಟ್ ಅಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಲಿಮಿಟೆಡ್ ಎಂಬ ಹೆಸರಿನಿಂದ ನೊಂದಾಯಿಸಿ ಕೊಂಡಿದೆ. ಇನ್ನು 15 ಲಕ್ಷವನ್ನು ಸಹ ಪ್ರಾಥಮಿಕ ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟೆಸ್ಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ನಿರ್ಮಿಸುವ ಪ್ರಕ್ರಿಯೆ ಆರಂಭಿಸಿದರೆ, ಭಾರತದ ಈ ಟೆಸ್ಲಾ ಕಂಪನಿಯ ಶಾಖೆಗೆ ಭಾರತ ಮೂಲದವರಾದ ವೈಭವ್ ತನೇಜಾ, ವೆಂಕಟ್ರಂಗಂ ಶ್ರೀರಾಮ್ ಮತ್ತು ಡೇವಿಡ್ ಜಾನ್ ಫೆಯಿನ್ ಸ್ಟಿನ್ ಈ ಮೂವರು ಸಂಸ್ದೆಯ ನಿರ್ದೇಶಕರಾಗುತ್ತಾರೆ ಎಂದು ಮಾಹಿತಿ ಹೊರಬಿದ್ದಿದೆ. ಟೆಸ್ಲಾ ಕಂಪನಿಯ ಸಿಇಓ ಆಗಿರುವ ಎಲೋನ್ ಮಸ್ಕ್ ಅವರು ಕಳೆದ ವರ್ಷವೇ ತಮ್ಮ ಟ್ವಿಟ್ಟರ್ ನಲ್ಲಿ ಮುಂದಿನ ವರ್ಷ (2021) ಭಾರತದಲ್ಲಿ ನಮ್ಮ ಕಂಪನಿಯನ್ನು ಆರಂಭಿಸುತ್ತೇವೆ ಎಂದುಲಟ್ವೀಟ್ ಮಾಡಿದ್ದರು. ಟೆಸ್ಲಾ ಮಾಡೆಲ್3 ಕಾರಿನ ಮೂಲಕ ಭಾರತಕ್ಕೆ ಪ್ರವೇಶ ಪಡೆಯುತ್ತೇವೆ ಎಂದು ತಿಳಿಸಿದ್ದರು.

ಈ ಟೆಸ್ಲಾ ಎಲೆಕ್ಟ್ರಿಕ್ ವಾಹನದ ಬೆಲೆ 60 ಲಕ್ಷ ರೂಗಳಾಗಿದ್ದು, ಇದನ್ನು 60 ಕಿಮೀ ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನಿಂದ ತಯಾರಿಸುವ ಅವಕಾಶವಿದೆ. ಒಮ್ಮೆ ಚಾರ್ಚ್ ಮಾಡಿದರೆ 250 ಕಿಮೀ ವೇಗದಲ್ಲಿ ಈ ಕಾರು ಸರಿ ಸುಮಾರು 500 ಕಿಮೀ ನಷ್ಟು ದೂರ ಕ್ರಮಿಸಬಹುದಾಗಿದೆ. ಇದು ಕೇವಲ 3.1ಸೆಕೆಂಡುಗಳಲ್ಲಿ 60 ಎಂ.ಪಿ ವೇಗದಲ್ಲಿ ಚಲಿಸುತ್ತದೆ ಎನ್ನಲಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಮಹೀಂದ್ರಾ ಸಂಸ್ಥೆಯ ಜೊತೆಗೆ ಏಥರ್ ಎನರ್ಜಿ ಎಲೆಕ್ಟ್ರಿಕ್ ಕಾರು ಉತ್ಪಾದನ ಘಟಕಗಳನ್ನು ಹೊಂದಿವೆ, ಇದೀಗ ಅಮೇರಿಕಾ ಮೂಲದ ಟೆಸ್ಲಾ ಕಂಪನಿಯು ಸಹ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಒಂದಷ್ಟು ಬದಲಾವಣೆ ಆಗಲಿದೆ ಎಂದು ಆಟೋಮೊಬೈಲ್ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಈ ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತಮ್ಮ ಕಾರು ತಯಾರಕ ಘಟಕವನ್ನು ಸ್ಥಾಪಿಸಲು ಸ್ಥಳ ಗುರುತಿಸಿಲ್ಲ, ರಾಜ್ಯದಲ್ಲಿ ಟೆಸ್ಲಾ ಕಂಪನಿಯು ತಮ್ಮ ಶಾಖೆಯನ್ನು ಆರಂಭಿಸಿರುವುದು ಸ್ವಾಗತಾರ್ಹ ಮತ್ತು ಅವರ ಕಂಪನಿಗೆ ಸುಗಮವಾಗಿ ನಡೆಯಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ. ಇನ್ನು ಇದೇ ಟೆಸ್ಲಾ ಕಂಪನಿಯ ಬೆಂಗಳೂರಿನಲ್ಲಿ ತಮ್ಮ ಸಂಸ್ಥೆಯ ಕಾರು ಉತ್ಪಾದನಾ ಘಟಕ ಸ್ಥಾಪನೆಯ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ವಾಗತ ಕೋರಿದ್ದಾರೆ.

%d bloggers like this: