ಕೊನೆಗೂ ತನ್ನಿಷ್ಟದ ನಟನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು

ಸೋಶಿಯಲ್ ಮೀಡಿಯಾ ಸಿಂಗರ್ ಅಂತಾನೇ ಫೇಮಸ್ ಆಗಿರೋ ಕಾಫಿನಾಡು ಚಂದು ಅವರು ಕೊನೆಗೂ ತಮ್ಮ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಮೂಲದ ಕಾಫಿನಾಡು ಚಂದು ಅನ್ನುವವರು ಒಬ್ಬ ಆಟೋ ಡ್ರೈವರ್. ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕಾಫಿನಾಡು ಚಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮದೇಯಾದ ಒಂದಷ್ಟು ಪದಗಳನ್ನ ಸೇರಿಸಿಕೊಂಡು ‌ಬರ್ಥ್ ಡೇ ಸಾಂಗ್ ಮಾಡಿ ಹಾಡುತ್ತಿದ್ದರು. ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ಬರ್ಥ್ ಡೇ ಸಾಂಗ್ ಹಾಡುತ್ತಿದ್ದ ಕಾಪಿನಾಡು ಚಂದು ಅವರ ವೀಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿಬಿಟ್ಟಿವೆ. ಇಂದು ಕಾಪಿನಾಡು ಚಂದು ಯಾವ ಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ ಅಂದರೆ ಅವರು ಹೋದಕಡೆಲೆಲ್ಲಾ ಜನರು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಅದರ ಜೊತೆಗೆ ತಮ್ಮ ಆತ್ಮೀಯರ ಬರ್ಥ್ ಡೇ ದಿನದಂದು ಅವರ ಹೆಸರಿನಲ್ಲಿ ಬರ್ಥ್ ಡೇ ಸಾಂಗ್ ಹಾಡುವಂತೆ ಮನವಿ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ಕಾಪಿನಾಡು ಚಂದು ಅವರು ಇನ್ಸ್ಟ್ರಗ್ರಾಮ್ ಖಾತೆಯಲ್ಲಿ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನ ಹೊಂದಿದ್ದು, ಶಿವಣ್ಣ ಅವರನ್ನ ಕೂಡ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹಿಂದಿಕ್ಕಿದ್ದಾರೆ. ಕಾಪಿನಾಡು ಚಂದು ಅವರಿಗೆ ಶಿವಣ್ಣ ಅವರನ್ನ ಒಮ್ಮೆ ಭೇಟಿ ಮಾಡಬೇಕು ಅನ್ನೋದು ಕನಸು. ಅವರೊಟ್ಟಿಗೆ ಮಾತನಾಡಬೇಕು, ಕಾಫಿ ಕುಡಿಬೇಕು ಅಂತ ಹೇಳ್ತಾ ಇದನ್ನೇ ಸಾಹಿತ್ಯವಾಗಿಟ್ಟುಕೊಂಡು ಸಾಂಗ್ ಮಾಡಿ ಹಾಡಿದ್ರು.

ಅದರ ಜೊತೆಗೆ ನಿರೂಪಕಿ ಅನುಶ್ರೀ ಅವರ ಬರ್ಥ್ ಡೇ ಸಾಂಗ್ ಹಾಡಿ ಅವರಿಗೆ ಕೂಡ ಫುಲ್ ಮಸ್ತ್ ಎಂಟರ್ಟೈನ್ ಮಾಡಿದ್ದರು. ಇದೀಗ ಕಾಪಿನಾಡು ಚಂದು ಅವರಿಗೆ ಶಿವಣ್ಣ ಅವರನ್ನ ನೇರವಾಗಿ ಭೇಟಿ ಮಾಡುವ ಅವಕಾಶವನ್ನು ಜೀ಼ ಕನ್ನಡ ವಾಹಿನಿ ಮಾಡಿಕೊಟ್ಟಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ದಲ್ಲಿ ಕಾಪಿನಾಡು ಚಂದು ಅವರು ಶಿವಣ್ಣ, ಅನು ಶ್ರೀ ಅವರನ್ನ ಭೇಟಿ ಮಾಡಿ ಫುಲ್ ಖುಷ್ ಆಗಿದ್ದಾರೆ. ಈ ಕಾಪಿನಾಡು ಚಂದು ಅವರು ಶಿವಣ್ಣ ಅವರೊಟ್ಟಿಗೆ ಕುಣಿದು ಕುಪ್ಪಳಿಸಿರುವ ಒಂದಷ್ಟು ವೀಡಿಯೋಗಳ ಝಲಕ್ ಈಗಾಗಲೇ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿದೆ. ಕಾಫಿನಾಡು ಚಂದು ಅವರು ಭಾಗವಹಿಸಿರುವ ಈ ಎಪಿಸೋಡ್ ನೋಡಲು ಕಿರುತೆರೆ ವೀಕ್ಷಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಅನು ಶ್ರೀ ಅವರ ಜೊತೆ ಹಾಡೊಂದನ್ನ ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

%d bloggers like this: