ಕೂದಲು ಉದುರುವ ಸಮಸ್ಯೆ ಇಂದಿನ ಯುವಕರಿಗೆ ತಮ್ಮಮೇಲೆ ತಮಗೇ ಕೀಳರಿಮೆ ಉಂಟು ಮಾಡಿದೆ. ಕೂದಲಿನ ಆರೈಕೆ ವಿಲ್ಲದೆ ಪೋಷಣೆ ಯಿಲ್ಲದೆ ಕೂದಲಿನ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ನೀವು ಸುಂದರವಾಗಿ ಕಾಣುವುದು ನಿಮ್ಮ ಕೂದಲಿನಿಂದ ಆದರೆ ಎಷ್ಟೋ ಜನಕ್ಕೆ ಇಂದಿನ ಒತ್ತಡದ ಜೀವನಶೈಲಿ, ಆಹಾರದ ಶೈಲಿಯಿಂದಾಗಿ ಕೂದಲುಗಳು ಉದುರುವುದು, ಒಣಗುವುದು, ಬೊಕ್ಕ ತಲೆಯಾಗುವಂತಹ ಅನೇಕ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳು ಕಂಡು ಬರುವುದು ಹೆಚ್ಚಾಗಿ ಧೂಳು ಇರುವ ಕಡೆ ಹೊರಗಡೆ ಅಧಿಕವಾಗಿ ಓಡಾಡುವುದು, ಒತ್ತಡದ ಕೆಲಸದಿಂದ ಟೆನ್ಷನ್ ಮಾಡಿಕೊಳ್ಳುವುದು ಮತ್ತು ಕೂದಲಿನ ಆರೈಕೆ ಮಾಡದೇ ಇರುವುದು ಈ ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ.

ಈ ಕೂದಲಿನ ಸಮಸ್ಯೆಗಳು ಹೆಚ್ಚಾಗಿ ಇಪ್ಪತ್ತು ಮೂವತ್ತು ವಯಸ್ಸಿನ ವಯೋಮಾನ ದವರಲ್ಲೇ ಇಂದು ಈ ಸಮಸ್ಯೆ ಕೂದಲಿನ ಕಾಡುತ್ತಿರುವುದು
ಅವರಿಗೆ ಕೀಳಿರಿಮೆ ಉಂಟು ಮಾಡುತ್ತದೆ. ಎಷ್ಟೋ ಜನ ಯುವಕರು ಈ ಸಮಸ್ಯೆಗಳಿಂದ ಕೊರಗುವುದುಂಟು, ಇದಕ್ಕೆ ಪರಿಹಾರವಾಗಿ ಮನೆಯಲ್ಲಿಯೇ ಹಲವಾರು ಮದ್ದುಗಳಿವೆ. ಕರಿಬೇವು ಸಹ ಕೂಡ ಔಷಧಿಯ ಗುಣಗಳನ್ನು ಹೊಂದಿದ್ದು ತಲೆಕೂದಲಿಗೆ ಬೇಕಾದ ಪೌಷ್ಠಿಕಾಂಶಗಳನ್ನು ಒದಗಿಸಿ ಕೂದಲು ಸೊಂಪಾಗಿ, ಕಪ್ಪಾಗಿ ಸಮೃದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಕರಿಬೇವನ್ನು ಬಳಸುವುದು ಹೇಗೆ ಎಂದು ತಿಳಿಯಬೇಕಾಗಿದೆ. ಹೌದು ನೀವು ಮೊದಲು ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದಕ್ಕೊಂದಷ್ಟು ಕರಿಬೇವಿನ ಎಲೆಗಳನ್ನು ಕುದಿಸಿ ನಂತರ ಒಂದು ಐದು ನಿಮಿಷ ಅದನ್ನು ಆರಿಸಿ ನಂತರ ಅದನ್ನು ನಿಮ್ಮ ತಲೆಯ ಬುಡಕ್ಕೆ ಹಚ್ಚಬೇಕು ಇದು ಕ್ರಮವಾಗಿ ಎರಡು ಮೂರು ವಾರಗಳ ಕಾಲ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಕರಿಬೇವು ಅತ್ಯುತ್ತಮ ಮನೆಮದ್ದಾಗಿದ್ದು ಕರಿಬೇವಿನಲ್ಲಿ ಕೆರೋಟಿನ್ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದ್ದು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕೂದಲು ಉದುರುವ ಸಮಸ್ಯೆಗೆ ಕರಿಬೇವಿನಿಂದ ಮತ್ತೊಂದು ಪರಿಹಾರ ರೀತಿಯಿವೆ. ಅರ್ಧ ಬಟ್ಟಲಿನಷ್ಟು ಕರಿಬೇವನ್ನು ನೀರಿನೊಂದಿಗೆ ಕುದಿಸಿ ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ಅರ್ಧ ಬಟ್ಟಲಿನಷ್ಟು ಮೊಸರಿನೊಂದಿಗೆ ಮಿಶ್ರಣ ಮಾಡಿಕೊಂಡು ಸಂಪೂರ್ಣವಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಬೇಕು. ತದನಂತರ ಯಾವುದಾದರೂ ಶಾಂಪ್ಯುವಿನಿಂದ ಕೂದಲನ್ನು ತೊಳೆದುಕೊಂಡು ಕೂದಲು ಒಣಗಿದ ನಂತರ ಟವೆಲ್ ನಿಂದ ಒರೆಸಿಸಿಕೊಳ್ಳಬೇಕು. ಇದರಿಂದಾಗಿ ನಿಮ್ಮ ಕೂದಲು ಕಪ್ಪಾಗಿ, ಸೊಂಪಾಗಿ ಸಮೃದ್ದಿಯಿಂದ ದಟ್ಟವಾಗಿ ಬೆಳೆಯುತ್ತವೆ. ಮತ್ತೊಂದು ರೀತಿಯಲ್ಲಿ ಬಳಸುವುದಾದರೆ ನೀರಿನಲ್ಲಿ ಒಂದಷ್ಟು ಕರಿಬೇವನ್ನು ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯುವುದರಿಂದ ಆರೋಗ್ಯಕ್ಕೂ ಉತ್ತಮ ಮತ್ತು ಒಂದಷ್ಟು ಕೂದಲಿನ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ.