ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ದಕ್ಷಿಣ ಭಾರತದ ನಟಿ

ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟಿ ಕಮ್ ಸಿಂಗರ್ ದುಬಾರಿ ಬೆಲೆಯ ಐಷಾರಾಮಿ ಕಾರ್ ಖರೀದಿ ಮಾಡಿ ಭಾರಿ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದ ಬಹಳಷ್ಟು ಸ್ಟಾರ್ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಐಷಾರಾಮಿ ಲೈಫ್ ಸ್ಟೈಲ್ ಬಗ್ಗೆಯೇ ಸೌಂಡ್ ಮಾಡುತ್ತಿದ್ದಾರೆ. ಈ ಸಿನಿಮಾ ಸೆಲೆಬ್ರಿಟಿಗಳಿಗೆ ಕಾರ್ ಕ್ರೇಜ್ ಅನ್ನೋದು ಸಖತ್ತಾಗೇ ಇದೆ. ಅದರಲ್ಲೂ ಕೆಲವು ಸ್ಟಾರ್ ನಟ-ನಟಿಯರಿಗೆ ಈ ಇಂಪೋರ್ಟೆಡ್ ಮತ್ತು ಐಷಾರಾಮಿ ಕಾರ್ ಗಳ ಬಗ್ಗೆ ಕ್ರೇಜ಼್ ಇದ್ದೇ ಇರುತ್ತದೆ. ಅಂತೆಯೇ ಇದೀಗ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿನೆ ಮತ್ತು ಗಾಯನದ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ನಟಿ ಅಧಿತಿ ರೋಲ್ ಹೈದರಿ ಅವರು ದುಬಾರಿ ಬೆಲೆಯ ಐಷಾರಾಮಿ ಕಾರ್ ವೊಂದನ್ನು ಖರೀದಿ ಮಾಡಿದ್ದಾರೆ.

ಈ ನೂತನ ಕಾರ್ ಖರೀದಿ ಮಾಡಿ ಅದರ ಕೀ ಪಡೆಯುತ್ತಿರುವ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮೆಚ್ಚುಗೆ ಪಡೆದುಕೊಂಡಿದೆ. ಅವರ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ನಟಿ ಅಧಿತಿ ರಾವ್ ಹೈದರಿ ಅವರು 2006ರಲ್ಲಿ ತೆರೆಕಂಡ ಮಲೆಯಾಳಂನ ಪ್ರಜಾಪತಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಂಧ್ರದ ಈ ಬೆಡಗಿ ಭಾಷಾ ಗಡಿ ದಾಟಿ ಬಾಲಿವುಡ್ ನಲ್ಲಿಯೂ ಕೂಡ ಮಿಂಚಿದ್ದಾರೆ. ಇತ್ತೀಚೆಗೆ ಇವರ ನಟನೆಯ ಹೇ ಸಿನಾಮಿಕಾ ಸಿನಿಮಾ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಮಾಲಿವುಡ್ ಸ್ಟಾರ್ ನಟ ದುಲ್ಶರ್ ಸಲ್ಮಾನ್ ಮತ್ತು ಕಾಜಲ್ ಅಗರ್ವಾಲ್ ಅವರು ನಟಿಸಿದ್ದಾರೆ. ಈ ಚಿತ್ರದ ಯಶಸ್ಸಿನಲ್ಲಿರುವ ನಟಿ ಅಧಿತಿ ರಾವ್ ಅವರು ಸಖತ್ ಖುಷಿಯಲ್ಲಿದ್ದಾರೆ.

ಇದೇ ಖುಷಿಯಲ್ಲಿ ನಟಿ ಅಧಿತಿ ರಾವ್ ಹೈದರಿ ಅವರು ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ. ಹೌದು ಅಧಿತಿ ಅವರು ಆಡಿ ಕ್ಯೂ7 ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ ಎಲ್ಲಾ ರೀತಿಯ ತೆರಿಗೆ ಸೇರಿ ಒಂದು ಕೋಟಿ ಐದು ಲಕ್ಷ ಎಂದು ತಿಳಿದು ಬಂದಿದೆ. ನಟಿ ಅಧಿತಿ ರಾವ್ ಅವರು ಖರೀದಿ ಮಾಡಿರುವ ಈ ಆಡಿ ಕ್ಯೂ ಸೆವೆನ್ ಕಾರು ಈ ವರ್ಷದಲ್ಲಿ ಭಾರಿ ಬೇಡಿಕೆಯನ್ನ ಹೊಂದಿದೆ. ಯಾಕಂದ್ರೆ ಈ ಕಾರು ಇದೇ ವರ್ಷದಲ್ಲಿ ಲಾಂಚ್ ಆದ ಹೊಸ ಆವೃತ್ತಿಯ ಕಾರ್ ಆಗಿದೆ. ನಟಿ ಅಧಿತಿ ರಾವ್ ಹೆದರಿ ಅವರು ನೀಲಿ ಬಣ್ಣದ ಆಡಿ ಕ್ಯೂ ಸೆವೆನ್ ಕಾರ್ ಅನ್ನು ಖರೀದಿ ಮಾಡಿ ಕಾರ್ ಕೀ ಪಡೆಯುತ್ತಿರುವ ಒಂದಷ್ಟು ಫೋಟೋಗಳನ್ನು ತಮ್ಮ ಮುಂಬೈ ವೆಸ್ಟ್ ಇನ್ಸ್ಟಾಗ್ರಾಮ್ ಖಾತೆಯು ಶೇರ್ ಮಾಡಿದೆ. ಇದೇ ಫೋಟೋಗಳನ್ನು ಅಧಿತಿ ರಾವ್ ಹೈದರಿ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

%d bloggers like this: