ಕೊಟ್ಟ ಹಣ ವಾಪಸ್ ಬರುತ್ತಿಲ್ಲವೇ, ಈ ಸಣ್ಣ ಕೆಲಸ ಮಾಡಿ ನೋಡಿ

ನಿಮ್ಮ ಸ್ನೇಹಿತರಿಗೆ, ಬಂಧು ಬಳಗದವರಿಗೆ ಕಷ್ಟ ಎಂದು ಸಾಲದ ರೂಪ ಅಥವಾ ಇಂತಿಷ್ಟು ದಿನಗಳಲ್ಲಿ ಕೊಡುತ್ತಾರೆ ಎಂದು ಕೊಟ್ಟ ಹಣ ನಿಮ್ಮ ಕೈಸೇರುವುದಿಲ್ಲ. ಇದಕ್ಕೆ ಕಾರಣವಾದರು ಏನು ಎಂಬುದಕ್ಕೆ ನಿಮ್ಮ ಜಾತಕದಲ್ಲಿರುವ ಗ್ರಹಗತಿಗಳ ಚಲನೆ ಎಂದು ಹೇಳುತ್ತವೆ ಭವಿಷ್ಯ ಶಾಸ್ತ್ರ. ಈ ರೀತಿ ಕಷ್ಟ ಎಂದು ಕೊಟ್ಟ ಹಣ ನಿಮಗೆ ಹಿಂದಿರುಗಿ ಬರುತ್ತಿಲ್ಲವಾದರೆ ಅದು ನಿಮ್ಮ ಜಾತಕದಲ್ಲಿರುವ ಶುಕ್ರಗ್ರಹ ನಿಮ್ಮ ರಾಶಿಯ ಮನೆಯಿಂದ ಹೊರಗುಳಿದಿದ್ದಾನೆ ಎಂಧರ್ಥ. ಹೌದು ಶುಕ್ರ ಗ್ರಹವನ್ನು ಲಕ್ಷಿ ಕಟಾಕ್ಷದ ಸಂಕೇತ ಗ್ರಹ ಎನ್ನಲಾಗುತ್ತದೆ. ಆದ ಕಾರಣ ನಿಮ್ಮ ಜಾತಕದ ರಾಶಿ ಚಕ್ರಗಳಲ್ಲಿ ಶುಕ್ರನ ನಿರ್ಗಮನ ವಾದರೆ ನಿಮಗೆ ದಾರಿದ್ರ್ಯತನ ಆರಂಭವಾಗಿದೆ ಎಂದು ತಿಳಿಯಬೆಕಾಗುತ್ತದೆ.

ಪಾಪಗಳ ಸ್ಥಾನದಲ್ಲಿ ಶುಕ್ರ ಅಲಂಕರಿಸಿದಾಗ ಇಂತಹ ಹಣಕಾಸಿನ ಸಮಸ್ಯೆಗಳು ತಲೆದೂರುತ್ತವೆ, ಅಂದಹಾಗೆ 4,7,12 ಈ ದಿನಾಂಕಗಳಲ್ಲಿ ಜನಿಸಿದವರಿಗೆ ಬೇರೆಯವರಿಂದ ಮೋಸವಾಗುವುದು ಸರ್ವೇ ಸಾಮಾನ್ಯವಾಗಿ ಬಿಡುತ್ತದೆ. ಈ ದಿನಾಂಕದಲ್ಲಿ ಜನಿಸಿದವರು ಮೃದು ಸ್ವಭಾವ ಮತ್ತು ಕಷ್ಟಕ್ಕೆ ಕರಗುವ ಕರುಣೆವುಳ್ಳವರು. ಇವರ ಅನುಕಂಪವನ್ನೇ ದುರುಪಯೋಗ ಮಾಡಿಕೊಂಡು ಇವರಿಗೆ ಮೋಸ ಮಾಡಲಾಗುತ್ತದೆ, ರಾಹು ಕೇತುಗಳು ದುಷ್ಟ ಮನೆಯಲ್ಲಿ ಇದ್ದರೆ ಸ್ನೇಹಿತರಿಂದ ಬಂಧುಗಳಿಂದ ಮೋಸಕ್ಕೆ ಒಳಗಾಗುತ್ತಾರೆ.

ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ನೀವು ನಿಮ್ಮ ನಗದು ಇಡುವ ಸ್ಥಳದಲ್ಲಿ ಆರು ಲವಂಗ, ಗೋಡಂಬಿ, ಕರ್ಪೂರವನ್ನು ಆರು ಕವಡೆಯೊಂದಿಗೆ ಕೆಂಪು ಬಟ್ಟೆಯಿಂದ ಅವುಗಳನ್ನು ಕಟ್ಟಿಟ್ಟು ಅಮವಾಸ್ಯೆ ಹುಣ್ಣಿಮೆಯ ದಿನದಂದು ಶ್ರದ್ದಾಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ ಪೂಜೆ ಮಾಡಬೇಕು. ಇದರಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಆಗುವ ದ್ರೋಹ, ಮೋಸಗಳು ನಿವಾರಣೆ ಆಗುತ್ತವೆ. ಇದೇ ರೀತಿಯಾಗಿ ನಿಮ್ಮ ಬಲಗೇ ಎಬ್ಬೆರೆಳಿನ ಕೆಳಭಾಗದಲ್ಲಿ 24 ಎಂಬ ಚಿಹ್ನೆಯನ್ನು ಬರಹ ರೂಪದಲ್ಲಿ ಬರೆಸಿಕೊಂಡರೆ ಧನಾಕರ್ಷಣೆ ಆಗುತ್ತದೆ.

ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಸುಗಳನ್ನು ಸಾಕ್ಷತ್ ಲಕ್ಷ್ಮಿಯ ಸ್ವರೂಪದಲ್ಲಿ ಕಾಣುವ ಗೋಮಾತೆಗೆ ಪ್ರತಿದಿನ ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆಯ ಸಮೇತ ತಿನ್ನಿಸುವುದರಿಂದ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ನಿಮಗೆ ಮತ್ತೊಂದು ಸುಲಭ ಪರಿಹಾರ ಎಂದರೆ ಪ್ರತಿ ಬುಧವಾರ ಚಾಚೂತಪ್ಪದೆ ನಿರಂತರವಾಗಿ ಮಣ್ಣಿನ ಮುಚ್ಚುಳದಿಂದ ಮುಚ್ಚಿದ ಮಣ್ಣಿನ ಮಡಿಕೆಯನ್ನು ಹರಿಯುವ ನದಿಯಲ್ಲಿ ಬಿಡುವಂತಹ ನಿಯಮವನ್ನು ಪಾಲಿಸಿದರೆ ನಿಮಗೆ ಹಣಕಾಸಿನ ವ್ಯವಹಾರದಲ್ಲಿ ಆಗುತ್ತಿರುವ ತೊಂದರೆಗಳಿಂದ ಮುಕ್ತಿ ಹೊಂದಬಹುದಾಗಿದೆ.

%d bloggers like this: