ಕೌಟುಂಬಿಕ ಮನರಂಜನೆ ಕೊಡಲು ಹೊಸ ಚಿತ್ರದೊಂದಿಗೆ ಬರಲಿದ್ದಾರೆ ನಟ ಅನೀಶ್ ತೇಜ್

ತಮ್ಮ ಡ್ಯಾನ್ಸ್ ಸ್ಟೈಲ್ ಲುಕ್ ಮೂಲಕ ಪ್ರಸಿದ್ದಿ ಹೊಂದಿರುವ ನಟ ಅನೀಶ್ ತೇಜೇಶ್ವರ್ ನಟನೆಯ ಹತ್ತನೇ ಸಿನಿಮಾದ ಶೀರ್ಷಿಕೆ ಇದೇ ಜನವರಿ 12ರಂದು ಲಾಂಚ್ ಆಗಲಿದೆ. ವಿಶೇಷ ಅಂದರೆ ಅಂದು ನಟ ಅನೀಶ್ ತೇಜೇಶ್ವರ್ ಅವರ ಹುಟ್ಟು ಹಬ್ಬ. ಅನೀಶ್ ತೇಜೇಶ್ವರ್ ಅವರ ಜನ್ಮದಿನದ ಪ್ರಯುಕ್ತ ಹೊಸ ಚಿತ್ರದ ಟೈಟಲ್ ಲಾಂಚ್ ಮಾಡುವ ಯೋಜನೆ ಮಾಡಿಕೊಂಡಿದೆ ಚಿತ್ರತಂಡ. ಇನ್ನು ಈ ಹೊಸ ಚಿತ್ರವನ್ನು ವಿಂಕ್ ವಿಷಲ್ ಸಂಸ್ಥೆ ನಿರ್ಮಾಣದ ಜವಬ್ದಾರಿಯನ್ನ ಹೊಂದಿದೆ‌. ಪೊಲೀಸ್ ಕ್ವಾಟ್ರಸ್, ನಮ್ ಏರಿಯಲ್ ಒಂದಿನಾ, ಅಕಿರ, ರಾಮಾರ್ಜುನ ಹೀಗೆ ಅನೇಕ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಅಭಿಮಾನಿ ಬಳಗ ಹೊಂದಿದ್ದಾರೆ. ನಟ ಅನೀಶ್ ತೇಜೇಶ್ವರ್ ಅವರು ಸಂಪೂರ್ಣವಾಗಿ ಯಶಸ್ಸು ಕಾಣದಿದ್ದರು ಕೂಡ ತಮ್ಮ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಸೋಲು ಕಂಡರು ಕೂಡ ತಮ್ಮ ನಿರಂತರ ಪ್ರಯತ್ನಗಳಿಂದ ತೃಪ್ತಿದಾಯಕ ಸಿನಿಮಾಗಳನ್ನ ನೀಡುತ್ತಿದ್ದಾರೆ ಅನೀಶ್ ತೇಜೇಶ್ವರ್. ಇನ್ನು ಟೈಟಲ್ ಲಾಂಚ್ ಆಗದ ಈ ನೂತನ ಚಿತ್ರವನ್ನು ಶಾನ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಮಾತುಕತೆಯ ಸನ್ನಿವೇಶಗಳನ್ನ ಚಿತ್ರೀಕರಣ ಮಾಡಿಕೊಂಡಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಇನ್ನು ಈ ಸಿನಿಮಾ ಇದುವರೆಗೆ ನಟ ಅನೀಶ್ ತೇಜೇಶ್ವರ್ ಅವರು ನಟಿಸಿರುವ ಎಲ್ಲಾ ಸಿನಿಮಾಗಳಿಗಿಂತಾನೂ ತುಂಬಾ ಡಿಫ್ರೆಂಟ್ ಆಗಿದೆಯಂತೆ‌. ಲವ್, ಮಾಸ್, ಬೇಜವಾಬ್ದಾರಿತನದ ಹುಡುಗನ ಪಾತ್ರಗಳಲ್ಲಿ ನಟಿಸಿದ್ದ ಅನೀಶ್ ತೇಜೇಶ್ವರ್ ಅವರಿಗೆ ಇದು ಸಂಪೂರ್ಣ ಹೊಸದಾಗಿದ್ದು ಈ ಸಿನಿಮಾ ಕೌಟುಂಬಿಕ ಪ್ರಧಾನವಾಗಿದೆಯಂತೆ.

ಇನ್ನು ನಟ ಅನೀಶ್ ತೇಜೇಶ್ವರ್ ಅವರಿಗೆ ಜೋಡಿಯಾಗಿ ನಟಿ ಸಂಪದ ಹುಲಿವಾನ ನಟಿಸಿದ್ದಾರೆ. ನಟಿ ಸಂಪದ ಹುಲಿವಾನ ಇತ್ತೀಚೆಗೆ ತೆರೆಕಂಡ ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸಿದ್ದರು‌. ಅನೀಶ್ ಅವರ ತಂಗಿಯ ಪಾತ್ರದಲ್ಲಿ ಶೃತಿ ಪಾಟೀಲ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ಉಗ್ರಂ ಸಿನಿಮಾ ಖ್ಯಾತಿಯ ನಟ ಮಂಜು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ನಟ ಅನೀಶ್ ತೇಜೇಶ್ವರ್ ಅವರು ತಮ್ಮ ಹತ್ತನೇ ಸಿನಿಮಾದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ನನ್ನ ಸಿನಿಮಾ ವೃತ್ತಿ ಜೀವನದ ಹತ್ತನೇಯ ಸಿನಿಮಾ, ನಮ್ಮ ವಿಂಕ್ ವಿಷಲ್ ನಿರ್ಮಾಣ ಸಂಸ್ಥೆಯ ಮೂರನೇ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನ್ನು ಇದೇ ಜನವರಿ 12ರಂದು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಹರಸಿ ಹಂಚಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅನೀಶ್ ಅವರ ಈ ಪೋಸ್ಟ್ಗೆ ಅವರ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.

%d bloggers like this: