ಬರೋಡ ತಂಡದ ನಾಯಕ ಕೃನಾಲ್ ಪಾಂಡ್ಯ ನಿಂದನೆ ಮತ್ತು ಅವಾಚ್ಯ ಭಾಷೆಗೆ ಕೋಪಗೊಂಡು ಬರೋಡ ತಂಡದ ಉಪನಾಯಕ ದೀಪಕ್ ಹೂಡ ಅವರು ಪಂದ್ಯದಿಂದ ಹೊರ ನಡೆದಿದ್ದಾರೆ. ದೀಪಕ್ ಹೂಡ ಅವರ ಈ ನಿರ್ಧಾರದಿಂದ ಬಿಸಿಎ ಹಾಗೂ ಬರೋಡ ತಂಡ ಗೊಂದಲಕ್ಕೆ ಒಳಗಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ t20 ಟೂರ್ನಿ ಈ ದೇಶಿಯ ಕ್ರಿಕೆಟ್ ನಲ್ಲಿ 38 ತಂಡಗಳು ಭಾಗವಹಿಸುತ್ತಿದ್ದು, ಅದರಲ್ಲಿ ಬರೋಡ ತಂಡವು ಕೂಡ ಒಂದಾಗಿದೆ. ಇನ್ನು ಈ ಬರೋಡ ತಂಡದ ನಾಯಕನಾಗಿ ಕೃನಾಲ್ ಪಾಂಡ್ಯ ನೇತೃತ್ವ ವಹಿಸಿದ್ದಾರೆ. ಇದೀಗ ತಂಡದ ನಾಯಕ ಕೃನಾಲ್ ಪಾಂಡ್ಯ ಅವರ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು ಬರೋಡ ತಂಡದಲ್ಲಿ ಅಸಮಾಧಾನ ಬುಗಿಲೆದ್ದಿದೆ.

ಬರೋಡ ತಂಡದ ಉಪನಾಯಕ ಆಗಿರುವ ದೀಪಕ್ ಹೂಡ ಹಿರಿಯ ಅನುಭವ ಆಟಗಾರಾಗಿದ್ದು ಇವರು ಮತ್ತು ಕೃನಾಲ್ ಪಾಂಡ್ಯ ನಡುವೆ ಅಭ್ಯಾಸ ಪಂದ್ಯದಲ್ಲಿ ಜಟಾಪಟಿ ಏರ್ಪಟ್ಟಿತ್ತು. ಕಾರಣ ಕೃನಾಲ್ ಪಾಂಡ್ಯ ತನ್ನ ಸಹ ಆಟಗಾರರೊಂದಿಗೆ ನಡೆದುಕೊಳ್ಳುತ್ತಿರುವ ದುರ್ವರ್ತನೆ ಮತ್ತು ನಿಂದನೆಯ ಭಾಷೆ ಬಳಸಿರುವುದು ದೀಪಕ್ ಹೂಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ದೀಪಕ್ ಹೂಡ ಆಲ್-ರೌಂಡರ್ ಆಟಗಾರ, ಬರೋಡ ತಂಡದ ಪರವಾಗಿ 46 ಪ್ರಥಮದರ್ಜೆ ಪಂದ್ಯ ಹಾಗೂ 68 ಲಿಸ್ಟ್ 123 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಟವಾಡಿದ್ದರು. ಕೃನಾಲ್ ಪಾಂಡ್ಯ ನನ್ನ ಜೊತೆ ದುರ್ವರ್ತನೆ ಮತ್ತು ಅವಾಚ್ಯ ಶಬ್ದಗಳನ್ನು ಇತರೆ ಆಟಗಾರರ ಎದುರೇ ಬಳಸಿ, ಅಭ್ಯಾಸ ಪಂಧ್ಯದಲ್ಲಿ ನನ್ನ ಆಟವನ್ನು ತಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಸಿಎ(ಬರೋಡ ಕ್ರಿಕೆಟ್ ಅಸೋಸಿಯೇಷನ್)ಗೆ ಈ ವಿಚಾರವಾಗಿ ಕೃನಾಲ್ ಪಾಂಡೆಯವರ ಈ ಅನುಚಿತ ವರ್ತನೆ ಮತ್ತು ಅವರ ನಡವಳಿಕೆಯಿಂದ ನನಗೆ ಬೇಸರವಾಗಿದೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಇಂತಹ ಪರಿಸ್ಥಿತಿಯಲ್ಲಿ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಟವಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಾನು ಈ ಪಂದ್ಯವನ್ನು ಆಟವಾಡುವುದಿಲ್ಲ ಎಂದು ಇಮೇಲ್ ಮುಖಾಂತರ ತಿಳಿಸಿದ್ದಾರೆ. ಈಗಾಗಲೇ ಬರೋಡ ತಂಡದಲ್ಲಿ ಹಾರ್ದಿಕ್ ಪಾಂಡೆ ಮತ್ತು ಯೂಸುಫ್ ಪಠಾಣ್ ಅವರು ಅನುಪಸ್ಥಿತಿ ಇರುವ ಕಾರಣ ಇದೀಗ ಆಲ್ ರೌಂಡರ್ ಅನುಭವಿ ಆಟಗಾರ ದೀಪಕ್ ಹೂಡ ಅವರು ಕೂಡ ತಂಡದಿಂದ ಹೊರಗುಳಿದಿರುವುದು ಬರೋಡ ತಂಡಕ್ಕೆ ಅಪಾರ ಪ್ರಮಾಣದ ನಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.