ಕುಸಿದ ಮೊಬೈಲ್ ಬೆಲೆ, ಹೊಸ ವರ್ಷಕ್ಕೆ ಕಡಿಮೆ ಬೆಲೆಗೆ ಅತ್ತ್ಯುತ್ತಮ ಮೊಬೈಲ್ ಫೋನ್ ಗಳು

ಪ್ರತಿಷ್ಟಿತ ಮೊಬೈಲ್ ಗಳ ಬೆಲೆ ಗಣನೀಯವಾಗಿ ಇಳಿಮುಖ ಕಂಡಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಕೊರೋನ ವೈರಸ್ ಪರಿಣಾಮ ಮೊಬೈಲ್ ಕ್ಷೇತ್ರದಲ್ಲಿ ವ್ಯಾಪಾರ ವಹಿವಾಟುಗಳು ಕಡಿಮೆ ಆಗಿವೆ. ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ, ಬಹಳಷ್ಟು ಮಂದಿಗೆ ಉದ್ಯೋಗ ನಷ್ಟವಾಗಿ ಬದುಕಲು ಕಷ್ಟವಾಗುತ್ತಿರಬೇಕಾದರೆ ಈ ನೂತನ ಮೊಬೈಲ್ ಗಳನ್ನು ಕೊಳ್ಳುವ ಯೋಚನೆ ಯಾರು ಮಾಡುತ್ತಾರೆ? ಹಾಗಾಗಿಯೇ ಕೇವಲ ಮೊಬೈಲ್ ಕ್ಷೇತ್ರ ಮಾತ್ರವಲ್ಲದೆ, ಐಟಿ, ತಂತ್ರಜ್ಞಾನ ಉತ್ಪಾದನಾ ಕ್ಷೇತ್ರಗಳಿಗೆ ಅಪಾರ ಪ್ರಮಾಣದ ನಷ್ಟ ಎದುರಾಗಿದೆ. ಆದದೆ ಮೊಬೈಲ್ ಕ್ಷೇತ್ರ ಮಾತ್ರ ತನ್ನ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮೊಬೈಲ್ ಮಾರಾಟ ಮಾಡುವ ಮೂಲಕ ಮೊಬೈಲ್ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಈ ವರ್ಷದಲ್ಲಿ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿರುವ ಮೊಬೈಲ್ ಗಳನ್ನು ನೋಡುವುದಾದರೆ, ಕ್ರಮವಾಗಿ ಶಿಯೋಮಿ, ನೋಕಿಯಾ, ಸ್ಯಾಮ್ಸಂಗ್, ಓಪ್ಪೋ ಕಂಪನಿಗಳು ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿವೆ.

ಪೋಕೋ ಎಂ3 ಮೊಬೈಲ್ ಭಾರತದಲ್ಲಿ ಎರಡು ರೀತಿಯ ವಿಭಿನ್ ರೂಪಾಂತರಗಳಲ್ಲಿ 6 ಜಿಬಿ ರ್ಯಾಮ್ ಮತ್ತು 64 ಜಿಬಿ ಜೊತೆಗೆ 128 ಜಿಬಿ ಸ್ಟೋರೇಜ್ ಹೊಂದಿರುವ ಮಾದರಿ ಮೊಬೈಲ್ ನ ಆರಂಭಿಕ 10999 ರೂಯಿಂದ 12499 ರೂರವರೆಗೆ ಬೆಲೆಯಿತ್ತು, ಆದರೆ ಇದೀಗ ಕೇವಲ 9,999 ರೂಗಳಿಗೆ ಈ ಮೊಬೈಲ್ ಅನ್ನು ಖರೀದಿಸಬಹುದಾಗಿದೆ. ಸ್ಯಾಮ್ಸಂಗ್ ಎ31 ಈ ಮೊಬೈಲ್ ಆರಂಭಿಕ ಬೆಲೆಯು 17,999 ರೂಗಳಿಗೆ ಮಾರಾಟ ವಾಗುತ್ತಿತ್ತು ಆದರೆ ಪ್ರಸ್ತುತ ಕೇವಲ 15,999 ರೂಗೆ ಮಾರಾಟವಾಗುತ್ತಿದೆ. ಈ ಮೊಬೈಲ್ 6 ಜಿಬಿ ರ್ಯಾಮ್ ಜೊತೆಗೆ 12 ಜಿಬಿ ಸ್ಟೋರೇಜ್ ಹೊಂದಿದೆ. ನೋಕಿಯಾ 5.3 ಈ ಮೊಬೈಲ್ 4 ಜಿಬಿ ರ್ಯಾಮ್ ಜೊತೆಗೆ 64 ಜಿಬಿ ಸ್ಟೋರೇಜ್ ಹೊಂದಿದ್ದು, ಇದರ ಹಳೆಯ ಬೆಲೆ ರೂ13,999, ಆದರೆ ಪ್ರಸ್ತುತ ಈ ಮೊಬೈಲ್ ಬೆಲೆಯು ಕೇವಲ 12,999 ರೂಗೆ ಮಾರಾಟವಾಗುತ್ತಿದೆ.

ಅಂದರೆ ಪ್ರತಿಯೊಂದು ಮೊಬೈಲ್ ಗಳ ಬೆಲೆಯಲ್ಲಿ ಒಂದು ಸಾವಿರ ರೂಗಳನ್ನು ಕಡಿತ ಗೊಳಿಸಲಾಗಿದೆ. ಅದೇ ರೀತಿಯಾಗಿ ನೋಕಿಯಾ 5.3 ರೂಪಾಂತರದಲ್ಲಿ 6 ಜಿಬಿ ರ್ಯಾಮ್ ಜೊತೆಗೆ 64 ಜಿಬಿ ಸ್ಟೋರೇಜ್ ಹೊಂದಿರುವ ಮಾದರಿಯನ್ನು 15,499 ರೂಗೆ ಮಾರಾಟ ಮಾಡಲಾಗುತಿತ್ತು. ಇದರ ಬೆಲೆಯನ್ನು ಕೂಡ ಕಡಿತ ಗೊಳಿಸಿದ್ದು, ಇದರ ಬೆಲೆ ಇದೀಗ ಕೇವಲ 14,499 ರೂಗಳಾಗಿವೆ. ಓಪ್ಪೋ ಎ15 ಮೊಬೈಲ್ ಫೋನ್ ಕೂಡ ತನ್ನ ಬೆಲೆಯಲ್ಲಿ ಕಡಿತ ಗೊಳಿಸಿದ್ದು, 3 ಜಿಬಿ ರ್ಯಾಮ್ ಜೊತೆಗೆ 32 ಜಿಬಿ ಶೇಖರಣಾ ಸಾಮರ್ಥ್ಯವನ್ನು ಒಳಗೊಂಡಿದೆ.

ಇದರ ಪ್ರಸ್ತುತ ಬೆಲೆಯು 9,990 ರೂಗಳಾಗಿದೆ. ಮೊದಲು ಇದೇ ಮೊಬೈಲ್ 11,999 ಆಗಿತ್ತು ಓಪ್ಪೋ ಎ12 ಫೋನ್ 3ಜಿಬಿ ರ್ಯಾಮ್ ಜೊತೆಗೆ 32 ಜಿಬಿ ಸ್ಟೋರೇಜ್ ಒಳಗೊಂಡಿದೆ. ಈ ಫೋನ್ ಬೆಲೆಯು ಇದೀಗ ಕೇವಲ 8,490 ರೂಗಳಾಗಿದೆ. ಇದಕ್ಕೂ ಮೊದಲು ಇದರ ಬೆಲೆ 10,990 ರೂಗಳಾಗಿತ್ತು. ವಿಶೇಷವಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎ51 ಫೋನ್ ಬೆಲೆಯು ಇದೀಗ ಪ್ರಸ್ತುತ ಬೆಲೆಯಲ್ಲಿ ಕೇವಲ 20,999 ರೂಗಳಾಗಿ ಮಾರಾಟ ವಾಗುತ್ತಿವೆ. ಇದೇ ಮೊಬೈಲ್ ಫೋನ್ ಎರಡು ತಿಂಗಳ ಹಿಂದೆ 22,499 ರೂಗಳಾಗಿತ್ತು. ಇನ್ನು ಈ ಫೋನ್ 8 ಜಿಬಿ ರ್ಯಾಮ್ ಜೊತೆಗೆ 128 ಜಿಬಿ ಶೇಖರಣಾ ಸಾಮರ್ಥ್ಯವನ್ನು ಒಳಗೊಂಡಿದ್ದು, ವಿಶೇಷ ಫೀಚರ್ ಗಳನ್ನು ಒಳಗೊಂಡಿದೆ.

%d bloggers like this: