ಕುಟುಂಬದ ಮದುವೆ ಸಮಾರಂಭದಲ್ಲಿ ಸಾಂಪ್ರದಾಯಕ ಉಡುಗೆಯಲ್ಲಿ ಮಿಂಚಿದ ಯಶ್ ಹಾಗೂ ರಾಧಿಕಾ ಪಂಡಿತ್ ಅವರು

ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಜೋಡಿ. ಇವರಿಬ್ಬರ ಜರ್ನಿ ತುಂಬಾ ವಿಶೇಷವಾಗಿದೆ. ಏಕೆಂದರೆ ಇಬ್ಬರು ಅಪರಿಚಿತರಾಗಿ ಒಂದೇ ಸೀರಿಯಲ್ ನಲ್ಲಿ ಅಭಿನಯಿಸುವುದರ ಮೂಲಕ ಭೇಟಿಯಾದರು. ನಂತರ ಇಬ್ಬರು ಬೆಳ್ಳಿ ಪರದೆಗೆ ಕಾಲಿಟ್ಟಿದ್ದು ಕೂಡ ಒಂದೇ ಸಿನಿಮಾದ ಮೂಲಕ. ಹಲವು ಸಿನಿಮಾಗಳಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದ ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದರು. ಕೇವಲ ಪರದೆಯ ಹಿಂದಷ್ಟೇ ಅಲ್ಲದೆ ನಿಜ ಜೀವನದಲ್ಲೂ ಇವರಿಬ್ಬರ ಜೋಡಿ ತುಂಬಾ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದರು.

ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಿನಿಮಾದ ನಂತರವಂತೂ ಈ ಜೋಡಿಗಳು ಮದುವೆಯಾಗುತ್ತಾರೆ ಎಂಬ ಸುದ್ದಿ ಸಕ್ಕತ್ ವೈರಲ್ ಆಗಿತ್ತು. ಆದರೆ ಎಲ್ಲಿಯೂ ಅಧಿಕೃತವಾಗಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳದ ಈ ಜೋಡಿ ಒಮ್ಮೆಲೆ ಎಂಗೇಜ್ಮೆಂಟ್ ಆಗುತ್ತಿರುವ ಸುದ್ದಿಯನ್ನು ತಿಳಿಸಿ ಎಲ್ಲರಿಗೂ ಶಾಕ್ ನೀಡಿದರು. ರಾಧಿಕಾ ಪಂಡಿತ್ ಮದುವೆ ಹಾಗೂ ಮಕ್ಕಳ ನಂತರ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ರಾಧಿಕಾ ಅವರು, ತಮ್ಮ ಹಾಗೂ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ರಾಧಿಕಾ ಅಷ್ಟು ದೊಡ್ಡ ನಟಿಯಾದರೂ, ನ್ಯಾಷನಲ್ ಹೀರೋ ಯಶ್ ಅವರ ಹೆಂಡತಿಯಾದರೂ, ಯಾವಾಗಲೂ ಸಿಂಪಲ್ ಅಂಡ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಯಶ್ ಅವರಿಗೆ ಸಿಂಪಲ್ ಆಗಿ ಇರುವುದೇ ಇಷ್ಟ ಎಂದು ಒಂದು ಸಂದರ್ಶನದಲ್ಲಿ ರಾಧಿಕಾ ಹೇಳಿಕೊಂಡಿದ್ದರು. ಇತ್ತೀಚೆಗೆ ರಾಧಿಕಾ ಪಂಡಿತ್ ಅವರು ಹಂಚಿಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಹೌದು ಸ್ಯಾಂಡಲ್ವುಡ್ ಸಿಂಡ್ರೆಲಾ ಎಂದೇ ಖ್ಯಾತಿಯಾಗಿರುವ ರಾಧಿಕಾ ಪಂಡಿತ್ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಇಂದಿಗೂ ದೊಡ್ಡ ಪರದೆಯ ಮೇಲೆ ಇವರನ್ನು ನೋಡಲು ಅನೇಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮದುವೆ ಹಾಗೂ ಮಕ್ಕಳ ನಂತರ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿರುವ ನಟಿ ಅಭಿಮಾನಿಗಳಿಂದ ದೂರವಾಗಿಲ್ಲ. ಯಾವಾಗಲೂ ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಹಿಸುತ್ತಿರುತ್ತಾರೆ. ರಾಧಿಕಾ ಪಂಡಿತ್ ಅವರು ಅಪ್ಲೋಡ್ ಮಾಡುವ ಎಲ್ಲಾ ಫೋಟೋ ಹಾಗೂ ವಿಡಿಯೋಗಳು ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಇತ್ತೀಚಿಗೆ ರಾಧಿಕಾ ಪಂಡಿತ್ ಅವರು ಅವರ ಕಸಿನ್ ಮದುವೆಯಲ್ಲಿ ಕುಟುಂಬ ಸಮೇತ ಪಾಲ್ಗೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಯಥರ್ವ, ರಾಧಿಕಾ ಪಂಡಿತ್ ಅವರ ತಂದೆ, ತಾಯಿ ಪಾಲ್ಗೊಂಡಿದ್ದರು. ಈ ಸಂಭ್ರಮದ ಕೆಲವು ತುಣುಕುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ರಾಧಿಕಾ ಪಂಡಿತ್, ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಯಶ್ ಅವರು ಕಪ್ಪುಬಣ್ಣದ ಲಾಂಗ್ ಕುರ್ತಾ ತೊಟ್ಟಿದ್ದರು. ಈ ಸ್ಟಾರ್ ದಂಪತಿಗಳ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು ನಾನು ನನ್ನ ಚಿಕ್ಕಮ್ಮಂದಿರನ್ನು ಹಲವು ವರ್ಷಗಳ ನಂತರ ನನ್ನ ಕಸಿನ್ ಮದುವೆಯಲ್ಲಿ ಭೇಟಿಯಾದೆ. ಅವರೊಂದಿಗೆ ಒಳ್ಳೆಯ ಸಮಯವನ್ನು ಸ್ಪೆಂಡ್ ಮಾಡಿದ್ದೇನೆ. ಮದುವೆ ಕಾರ್ಯಕ್ರಮಕ್ಕಾಗಿ ಹಲವು ದಿನಗಳ ನಂತರ ರೆಡಿಯಾಗಿದ್ದೇನೆ ಎಂದು ರಾಧಿಕಾ ಕ್ಯಾಪ್ಷನ್ ನೀಡಿದ್ದಾರೆ.

%d bloggers like this: