ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕರ್ನಾಟಕದ ಕಿರುತೆರೆ ನಟಿ

ಸದ್ಯಕ್ಕೆ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೌದು ತೆಲುಗುವಿನಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿ, ತೆಲುಗುವಿನಲ್ಲಿ ಪ್ರೇಕ್ಷಕರ ಮನ ಗೆದ್ದ ನಂತರ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ಕನ್ನಡದಲ್ಲಿ ಕೃಷ್ಣ ತುಳಸಿಯಾಗಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ಶ್ಯಾಮ, ಈಗ ರಿಯಲ್ ಲೈಫ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶ್ಯಾಮ ಪಾತ್ರಧಾರಿ ಐಶ್ವರ್ಯ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರು. ನಟನೆಯನ್ನರಸಿ ಕಲಾ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಇವರು, ಯಾರಿವಳು ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಷ್ಟೇನೂ ಹೇಳಿಕೊಳ್ಳದ ಯಶಸ್ಸನ್ನು ಕಾಣದ ಯಾರಿವಳು ಧಾರಾವಾಹಿಯಿಂದ ಐಶ್ವರ್ಯ ಅವರಿಗೆ ತೆಲುಗು ಧಾರಾವಾಹಿಗಳು ಹುಡುಕಿಕೊಂಡು ಬಂದವು.

ಸದ್ಯಕ್ಕೆ ತೆಲುಗು ಧಾರಾವಾಹಿಗಳಲ್ಲಿ ಕೃಷ್ಣ ತುಳಸಿ ಸಕ್ಕತ್ ಫೇಮಸ್. ಇದೇ ಧಾರವಾಹಿ ತೆಲುಗುವಿನಿಂದ ಕನ್ನಡಕ್ಕೆ ಡಬ್ ಆಗಿ, ಕೃಷ್ಣಸುಂದರಿ ಎನ್ನುವ ಟೈಟಲ್ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಮೂಲತಹ ಇದು ತೆಲುಗು ಧಾರಾವಾಹಿ ಆದರೂ ಇದರಲ್ಲಿ ಹೆಚ್ಚಾಗಿ ಕನ್ನಡದ ನಟ ನಟಿಯರಿದ್ದಾರೆ ಎನ್ನುವುದು ವಿಶೇಷ. ಇದೇ ಫೆಬ್ರವರಿ 24ರಂದು ರೋಹಿತ್ ಎಂಬುವವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡ ಐಶ್ವರ್ಯ ಅವರು, ಹಸಿರು ಮತ್ತು ಆರೆಂಜ್ ಕಾಂಬಿನೇಷನ್ ಸೀರೆ ತೊಟ್ಟು ಮಿಂಚುತ್ತಿದ್ದರು. ಇನ್ನು ರೋಹಿತ್ ಕೂಡ ಮರೂನ್ ಅಂಡ್ ವೈಟ್ ಉಡುಗೆ ತೊಟ್ಟು ಮಿಂಚಿದ್ದಾರೆ. ಇವರಿಬ್ಬರ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ತಮ್ಮ ಎಂಗೇಜ್ಮೆಂಟ್ ಬಗ್ಗೆ ಮಾತನಾಡಿದ ಐಶ್ವರ್ಯ ಅವರು, ಇದು ಪ್ಯೂರ್ಲೀ ಅರೆಂಜ್ ಮ್ಯಾರೇಜ್.

ನನ್ನ ಫ್ಯಾಮಿಲಿ ನೋಡಿದ ಸಂಬಂಧ ಇದು. ನನ್ನ ಹುಡುಗನ ಹೆಸರು ರೋಹಿತ್, ಇವರು ಬೆಳಗಾವಿಯಲ್ಲಿ ಡಾಕ್ಟರ್ ಆಗಿದ್ದಾರೆ. ರೋಹಿತ್ ತುಂಬಾ ಸಪೋರ್ಟಿವ್ ಆಗಿದ್ದು ನನ್ನ ಆಕ್ಟಿಂಗ್ ಕೆರಿಯರ್ ಗೆ ಯಾವುದೇ ಅಡ್ಡಿ ಇಲ್ಲ. ಮದುವೆಯಾದಮೇಲೂ ಅಭಿನಯಿಸಬಹುದು ಎಂದು ಹೇಳಿದ್ದಾರೆ. ಇಂತಹ ಸಪೋರ್ಟಿವ್ ಮತ್ತು ಅಂಡರ್ಸ್ಟ್ಯಾಂಡಿಂಗ್ ಹುಡುಗನನ್ನು ಪಡೆದದ್ದು ನನ್ನ ಸೌಭಾಗ್ಯ. ಇಂತಹ ಒಳ್ಳೆಯ ಕುಟುಂಬಕ್ಕೆ ಸೊಸೆಯಾಗುತ್ತಿದ್ದೇನೆ ಎಂದು ಖುಷಿಯಾಗುತ್ತಿದೆ ಎಂದು ಐಶ್ವರ್ಯ ಸಂತಸ ಹಂಚಿಕೊಂಡರು. ಇನ್ನೂ ಎಂಗೇಜ್ಮೆಂಟ್ ಆಯಿತು ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ಐಶ್ವರ್ಯ ಅವರು, ಸದ್ಯಕ್ಕೆ ನಿಶ್ಚಿತಾರ್ಥ ಜರುಗಿದೆ. ಎಲ್ಲಾ ರೀತಿ ಅನುಕೂಲತೆಗಳನ್ನು ನೋಡಿಕೊಂಡು ಮದುವೆ ಡೇಟ್ ಫಿಕ್ಸ್ ಮಾಡುತ್ತೇವೆ. ಈ ಎಲ್ಲಾ ಜವಾಬ್ದಾರಿಯನ್ನು ನನ್ನ ಕುಟುಂಬವೇ ನಿರ್ಧರಿಸುತ್ತದೆ. ನನ್ನ ಮದುವೆಯ ಡೇಟ್ ಫಿಕ್ಸ್ ಆದಮೇಲೆ ಖಂಡಿತ ಇನ್ಫಾರಂ ಮಾಡುತ್ತೇನೆ ಎಂದು ಐಶ್ವರ್ಯ ಹೇಳಿದ್ದಾರೆ.

%d bloggers like this: