ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತ ಟ್ಯಾಬ್, ಯಾವ ಯಾವ ವಿದ್ಯಾರ್ಥಿಗಳಿಗೆ ಅಂತ ನೋಡಿ

ಸದ್ಯದ ದಿನಮಾನದಲ್ಲಿ ಆನ್ಲೈನ್ ಶಿಕ್ಷಣ ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಶಿಕ್ಷಣವಾಗಲೀ ಅಥವಾ ಯಾವುದೇ ಉದ್ಯಮಗಳಾಗಲಿ ಅವು ಎಷ್ಟು ಡಿಜಿಟಲೀಕರಣ ಆಗುತ್ತದೆಯೋ ಅಷ್ಟು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಅವಶ್ಯಕತೆ ಸಹ ಹೆಚ್ಚಾಗುತ್ತದೆ. ಈಗ ಪ್ರಾಥಮಿಕ ಪ್ರೌಢ ಅಥವಾ ಕಾಲೇಜು ಮಕ್ಕಳೆನ್ನದೆ ಪ್ರತಿಯೊಬ್ಬರಿಗೂ ಮೊಬೈಲ್ ಅಥವಾ ಡಿಜಿಟಲ್ ಮಾಧ್ಯಮಗಳು ಅನಿವಾರ್ಯವಾಗಿ ಬಿಟ್ಟಿದೆ. ಈ ಅಂಶವನ್ನು ಮನಗಂಡ ನಮ್ಮ ರಾಜ್ಯ ಸರ್ಕಾರ ಅಭ್ಯಾಸ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ.

ಹೌದು ಸದ್ಯ ಪದವಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಸುಮಾರು 1.55 ಲಕ್ಷ ಜನ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯ ಸರ್ಕಾರ 155 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ಯಾಬ್ ಗಳನ್ನ ಉಚಿತವಾಗಿ ವಿತರಣೆ ಮಾಡಲು ಸಜ್ಜಾಗಿದೆ. ಈ ಕುರಿತು ಕಾಲೇಜು ಶಿಕ್ಷಣ ಆಯುಕ್ತ ಪ್ರದೀಪ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದ್ಯ ಅಭ್ಯಾಸ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಗಳನ್ನು ನೀಡಲು ನಿರ್ಧರಿಸಲಾಗಿದೆ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ಲ್ಯಾಪ್ಟಾಪ್ ಗಳನ್ನು ಕೊಂಡುಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯವಾಗಿದೆ ಏಕೆಂದರೆ ಪ್ರತಿಯೊಂದು ವಿಭಾಗವು ಡಿಜಿಟಲೀಕರಣ ಆಗುತ್ತಿರುವ ಸಮಯದಲ್ಲಿ ಟ್ಯಾಬ್ ಗಳಂತಹ ಗ್ಯಾಜೆಟ್ ಗಳು ಅನಿವಾರ್ಯವಾಗಿ ಬಿಟ್ಟಿದೆ. ಅದರಲ್ಲಿಯು ಈ ಕೋರೋಣ ಸಮಯದಲ್ಲಿ ಸರಕಾರ ತೆಗೆದುಕೊಂಡ ಈ ನಿರ್ಧಾರ ನಿಜಕ್ಕೂ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಲಿದೆ.

%d bloggers like this: