ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಸಿನಿಮಾ ಕೂಡ ಬಾಯ್ಕಟ್ ಮಾಡಡೇಕು ಎಂಬ ಅಭಿಯಾನ ಆರಂಭ ಆಗುತ್ತಿದೆ. ಇತ್ತೀಚೆಗೆ ತಾನೇ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಬಾಯ್ಕಟ್ ಮಾಡಬೇಕು ಎಂಬ ಅಭಿಯಾನ ಚಿತ್ರದ ಮೇಲೆ ಅಪಾರ ವ್ಯತಿರಿಕ್ತ ಪರಿಣಾಮ ಬೀರಿ ಇದೀಗ ಈ ಲಾಲ್ ಸಿಂಗ್ ಚಿತ್ರದ ಗಳಿಕೆ ಗಣನೀಯವಾಗಿ ಇಳಿಮುಖವಾಗಿದ್ದು, ಭಾರತದಲ್ಲಿ ನೂರಾರು ಥಿಯೇಟರ್ ಗಳಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಎತ್ತಂಗಡಿ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಲಾಲ್ ಸಿಂಗ್ ಚಡ್ಡಾ ಸಿನಿಮಾ ಒಂದೆಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನೊಂದು ಕಡೆ ಈ ಲಾಲ್ ಸಿಂಗ್ ಚಿತ್ರ ನೋಡಲು ಜನರು ಬರುತ್ತಿಲ್ಲ. ಪ್ರೇಕ್ಷಕರು ಈ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಲು ಯಾಕೆ ಬರುತ್ತಿಲ್ಲ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಹೌದು ನಟ ಅಮೀರ್ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯೇ ಕಾರಣ.

ಇವರಿಬ್ಫರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ನೆಟ್ಟಿಗರು ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂಬ ಅಭಿಯಾನ ಆರಂಭಿಸಿದರು. ಇದರ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಇದೀಗ ಈ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ಸಿನಿಮಾವನ್ನ ಕೂಡ ಬಾಯ್ಕಟ್ ಮಾಡಬೇಕು ಎಂದು ಅಭಿಯಾನ ಆರಂಭಗೊಳ್ಳುತ್ತಿದೆ. ಅಷ್ಟಕ್ಕೂ ನಟ ಹೃತಿಕ್ ರೋಷನ್ ಅವರು ಏನು ತಪ್ಪು ಮಾಡಿದರು ಅಂತ ನೋಡುವುದಾದರೆ. ನಟ ಹೃತಿಕ್ ರೋಶನ್ ಅವರು ಆಗಸ್ಟ್ 13ರಂದು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡಿಕೊಂಡು ಬಂದಿದ್ದಾರೆ. ಈ ಚಿತ್ರ ನೋಡಿ ವಾಪಸ್ ಹೊರ ಬರುವಾಗ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಅದರ ಜೊತೆಗೆ ತದ ನಂತರ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈಗತಾನೇ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಿದೆ. ಈ ಚಿತ್ರದ ಪ್ಲಸ್ ಅಂಡ್ ಮೈನಸ್ ಪಾಯಿಂಟ್ಸ್ ಬದಿಗೆ ಬಿಡಿ.



ಒಟ್ಟಾರೆ ಈ ಸಿನಿಮಾ ನಿಜಕ್ಕೂ ಕೂಡ ಅತ್ಯಧ್ಭುತವಾದದ್ದು. ತಡ ಮಾಡಬೇಡಿ ಆದಷ್ಟೂ ಬೇಗ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಥಿಯೇಟರ್ ಗೆ ಹೋಗಿ ನೋಡಿ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನ ಕಂಡ ಅನೇಕ ನೆಟ್ಟಿಗರು ಹೃತಿಕ್ ರೋಷನ್ ಅವರ ವಿಕ್ರಂ ವೇದ ಸಿನಿಮಾವನ್ನ ಕೂಡ ಬಾಯ್ಕಟ್ ಮಾಡಬೇಕು. ಇದು ನಮ್ಮ ದಕ್ಷಿಣ ಭಾರತದ ತಮಿಳಿನ ವಿಜಯ್ ಸೇತುಪತಿ ಮತ್ತು ಮಾಧನವ್ ನಟಿಸಿದ ವಿಕ್ರಂ ವೇದ ಚಿತ್ರದ ರೀಮೇಕ್ ಸಿನಿಮಾ. ಈ ರೀಮೇಕ್ ಸಿನಿಮಾವನ್ನ ಯಾಕೆ ನೋಡಬೇಕು. ಈಗಾಗಲೇ ಹಿಂದಿ ಡಬ್ಬಿಂಗ್ ನಲ್ಲಿ ವಿಕ್ರಂ ವೇದ ಸಿನಿಮಾ ಬಂದಿದೆ. ಇನ್ನೊಂದು ಬಾರಿ ರೀಮೇಕ್ ನಲ್ಲಿ ಯಾಕೇ ಈ ಸಿನಿಮಾ ನೋಡಬೇಕು ಎಂದು ಬಾಯ್ಕಟ್ ಬಾಲಿವುಡ್ ಹೃತಿಕ್ ರೋಷನ್ ವಿಕ್ರಂ ವೇದ ಸಿನಿಮಾ ಎಂದು ಅಭಿಯಾನ ಆರಂಭ ಮಾಡಿದ್ದಾರೆ. ಟ್ವಿಟರ್ ನಲ್ಲಿ ಆರಂಭ ಆಗಿರೋ ಈ ಅಭಿಯಾನ ಹೃತಿಕ್ ರೋಷನ್ ಅವರ ವಿಕ್ರಂ ವೇದ ಚಿತ್ರದ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಆದಂತಹ ಪರಿಣಾಮ ಬೀರಲಿದ್ಯ ಕಾದು ನೋಡಬೇಕಾಗಿದೆ.