ಲಾಲ್ ಸಿಂಗ್ ಚಡ್ಡಾ ಜೊತೆ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ಅವರ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು ಗೊತ್ತೇ

ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಥಿಯೇಟರ್ ಗಳಿಂದ ಎತ್ತಂಗಡಿ ಆಗುತ್ತಿದೆ. ಆದರೆ ಇತ್ತ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರಿಗೆ ಇನ್ನೊಂದೆಡೆ ಲಾಭ ಆಗುತ್ತಿದೆ. ಹೌದು ಅದೇಗಪ್ಪಾ ಅಂದರೆ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ ದೊಟ್ಟಿಗೆ ಪೈಪೋಟಿ ನೀಡಿದ ಮತ್ತೊಂದು ಸಿನಿಮಾ ಅಂದರೆ ಅದು ಅಕ್ಷಯ್ ಕುಮಾರ್ ಅವರ ರಕ್ಷಾಬಂಧನ್.
ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ಚಿತ್ರದ ಜೊತೆಯಲ್ಲೇ ಅಕ್ಷಯ್ ಕುಮಾರ್ ಅವರ ಈ ರಕ್ಷಾ ಬಂಧನ್ ಸಿನಿಮಾ ಕೂಡ ರಿಲೀಸ್ ಆಗಿತ್ತು. ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಕೇಳಿಬಂದಿದೆ. ಆದರೂ ಕೂಡ ಬಾಲಿವುಡ್ ಕಿಲಾಡಿ ಅಂತಾನೇ ಕರೆಸಿಕೊಳ್ಳುವ ಅಕ್ಷಯ್ ಕುಮಾರ್ ಅವರ ಈ ರಕ್ಷಾ ಬಂಧನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಯಷ್ಟು ಗಳಿಕೆ ಮಾಡಿಲ್ಲ.

ಹೌದು ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಮೊದಲ ದಿನವೇ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿವೆ. ಆದರೆ ರಕ್ಷಾ ಬಂಧನ್ ಸಿನಿಮಾ ಮೊದಲ ದಿನ ಕೇವಲ 8.20 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ. ನಾಲ್ಕು ಸಹೋದರಿಯರನ್ನ ಒಂದೊಳ್ಳೆ ಮನೆಗೆ ಮದುವೆ ಮಾಡಿ ಅವರ ಬದುಕನ್ನ ದಡಕ್ಕೆ ಸೇರಿಸುತ್ತೇನೆ ಎಂದು ತಾಯಿಗೆ ಮಾತನ್ನ ನೀಡಿದ ಅಕ್ಷಯ್ ಕುಮಾರ್ ತನ್ನ ಸೋದರಿಯರ ಬದುಕನ್ನ ಹೇಗೆ ಕಟ್ಟಿಕೊಡುತ್ತಾನೆ ಎಂಬುದೇ ಚಿತ್ರಕಥೆಯಾಗಿರುತ್ತದೆ. ಈ ಸಿನಿಮಾ ಭಾವಾನಾತ್ಮವಾಗಿ ಪ್ರೇಕ್ಷಕರ ಮನ ಗೆದ್ದಿದ್ದು ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ವಿಥ್ ಎಂಟರ್ಟೈನ್ ಮೆಂಟ್ ಸಿನಿಮಾ ಎನಿಸಿಕೊಂಡಿದೆ. ರಕ್ಷಾ ಬಂಧನ್ ಸಿನಿಮಾದ ಜವಬ್ದಾರಿಯುತ ಅಣ್ಣ ತನ್ನ ಸೋದರಿಯರ ಮದುವೆ ಜೊತೆಗೆ ತನ್ನ ಪ್ರೀತಿ ಹೀಗೆ ಇದೆಲ್ಲದರ ನಡುವೆ ಒಂದಷ್ಟು ತೊಡಕು.

ಹೀಗೆ ಕೌಟುಂಬಿಕ ಪ್ರಧಾನ ಚಿತ್ರವಾಗಿ ಮೂಡಿಬಂದಿದ್ದು ಸಿನಿ ಪ್ರೇಕ್ಷಕರನ್ನ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಈ ರಕ್ಷಾ ಬಂಧನ್ ಸಿನಿಮಾವನ್ನ ಆನಂದ್ ಎಲ್.ರೈ ಅವರು ನಿರ್ದೇಶನ ಮಾಡಿದ್ದಾರೆ. ಜೀ಼ ಸ್ಟೂಡಿಯೋಸ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಭೂಮಿ ಪಡ್ನೇಕರ್, ಸಾದಿಯಾ ಖಾತಿಬ್, ಸ್ಮೃತಿ ಶ್ರೀ ಕಾಂತ್, ದೀಪಿಕಾ ಖನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಲಾಲ್ ಸಿಂಗ್ ಚಡ್ಡಾ ಚಿತ್ರದ ಶೋಗಳು ಕ್ಯಾನ್ಸಲ್ ಆಗುತ್ತಿದ್ದರೆ ಇತ್ತ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ಒಂದು ಸಾವಿರಕ್ಕೂ ಅಧಿಕ ಶೋ ಗಳನ್ನ ಪಡೆದುಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ಲಾಲ್ ಸಿಂಗ್ ಚಡ್ಡಾಕ್ಕಿಂತ ವಾರಾಂತ್ಯದಲ್ಲಿ ಹೆಚ್ಚು ಕಲೆಕ್ಷನ್ ಮಾಡಬಹುದು ಎಂದು ಬಾಕ್ಸ್ ಆಫೀಸ್ ನಲ್ಲಿ ಲೆಕ್ಕಾಚಾರ ಕೇಳಿ ಬಂದಿದೆ.

%d bloggers like this: