ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ವಿಚಾರ, ಉತ್ತರ ಕೊಟ್ಟ ನಟಿ ಸುಶ್ಮಿತಾ ಸೇನ್ ಅವರು

ಇತ್ತೀಚೆಗೆ ಕೆಲವು ದಿನಗಳಿಂದ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದು ಅಂದರೆ ಅದು ನಟಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ. ಬಣ್ಣದ ಲೋಕದಲ್ಲಿ ಯಾವಾಗ ಏನು ಬೇಕಾದ್ರು ಆಗಬಹುದು. ಬಿಟೌನ್ ಅಂಗಳದಲ್ಲಿ ಗಾಸಿಪ್ ಗಳಿಗೇನು ಕೊರತೆ ಇಲ್ಲ. ಆದ್ರೇ ಈ ಗಾಸಿಪ್ ಗಳು ಬೆಂಕಿ ಇಲ್ಲದೆ ಹೊಗೆ ಹಾಡೋದಿಲ್ಲ ಅನ್ನೋ ಹಾಗೇ ಇರುತ್ತವೆ. ಅದರಂತೆ ನಟಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಒಂದು ಸುದ್ದಿ ಬಾಲಿವುಡ್ ಅಂಗಳಲ್ಲಿ ಭಾರಿ ಗುಲ್ಲೆಬ್ಭಿಸುತ್ತದೆ. ಅದಷ್ಟೇ ಅಲ್ಲದೇ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಟ್ಟಿಗೆ ಅತ್ಯಂತ ಆಪ್ತತೆಯಿಂದ ಇರುವ ಫೋಟೋವೊಂದನ್ನ ಲಲಿತ್ ಮೋದಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಕುತೂಹಲ ಮತ್ತೂ ಬಾಲಿವುಡ್ ರಂಗದಲ್ಲಿ ಎಲ್ಲರ ಅಚ್ಚರಿಗೆ ಕಾರವಾಯಿತು.

ಇದಾದ ಬಳಿಕ ಲಲಿತ್ ಮೋದಿ ಅವರ ಮಗ ರುಚೀರ್ ಮೋದಿ ಅವರು ತಮ್ಮ ತಂದೆಯ ಜೊತೆ ಸುಷ್ಮಿತಾ ಸೇನ್ ಅವರು ಡೇಟಿಂಗ್ ನಡೆಸುತ್ತಿರುವ ಬಗ್ಗೆ ಮೊದಲೇ ತಿಳಿದಿತ್ತು ಎಂದು ತಿಳಿಸುವ ಮೂಲಕ ಈ ಸುದ್ದಿಗೆ ವಿರಾಮ ಹಾಕಿದ್ದರು. ಅದರಂತೆ ಇದೀಗ ಲಲಿತ್ ಮೋದಿ ಅವರ ಜೊತೆ ಡೇಟಿಂಗ್ ನಡೆಸಿದ್ದ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರು ಈ ಬಗ್ಗೆ ಯಾವುದೇ ಗೊಂದಲವಿಲ್ಲದೆ ಆರಾಮಾಗಿ ಉತ್ತರಿಸಿದ್ದಾರೆ. ಹೌದು ನಟಿ ಸುಷ್ಮಿತಾ ಸೇನ್ ಅವರು ತಮ್ಮ ಇಬ್ಬರು ಮುದ್ದಾದ ಮಕ್ಕಳೊಟ್ಟಿಗೆ ಇರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ನಾನು ಸಂತೋಷವಾಗಿದ್ದೇನೆ. ನಾನು ಮದುವೆ ಆಗಿಲ್ಲ. ನನ್ನ ಬಳಿ ಯಾವುದೇ ರಿಂಗ್ ಇಲ್ಲ. ನನ್ನ ಕೆಲಸ ಮತ್ತು ನನ್ನ ಬದುಕಿನಲ್ಲಿ ಭಾಗಿಯಾದವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಗಾಯ್ಸ್ ಎಂದು ಬರೆದುಕೊಂಡಿದ್ದಾರೆ. ಸುಷ್ಮಿತಾ ಸೇನ್ ಅವರು ಈ ಪೋಸ್ಟ್ ಮೂಲಕ ಯಾರಿಗೆ ಟಾಂಗ್ ನೀಡಿದ್ದಾರೆ ಎಂಬುದು ಮಾತ್ರ ಗೊಂದಲದ ಗೂಡಾಗಿಯೇ ಉಳಿದುಕೊಂಡಿದೆ.

%d bloggers like this: