ಲೀಟರ್ ಹಾಲಿಗೆ 200 ರೂಪಾಯಿ ಕೊಡುತ್ತಾರೆ ಈ ಖ್ಯಾತ ನಟ

ಜನಸಾಮಾನ್ಯರೇ ಎಷ್ಟರಮಟ್ಟಿಗೆ ತಮ್ಮ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಿರ ಬೇಕಾದರೆ ಇನ್ನು ಧಾರಾವಾಹಿ ಹಾಗೂ ಸಿನಿಮಾಗಳ ಮೂಲಕ ತೆರೆಯ ಮೇಲೆ ನಮ್ಮನ್ನು ರಂಜಿಸಲು ಬರುವ ನಟ ನಟಿಯರಿಗೆ ತಮ್ಮ ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಇರಬೇಡ ನೀವೇ ಹೇಳಿ. ಹೌದು ಈಗ ಚಿತ್ರರಂಗ ಮೊದಲಿನ ರೀತಿಯಲ್ಲಿ ಇಲ್ಲ. ಇಲ್ಲಿ ನಟ ಅಥವಾ ನಟಿಯಾಗಬೇಕಾದರೆ ಫಿಟ್ನೆಸ್ ಅತಿ ಮುಖ್ಯ ಅಂಶವಾಗಿ ಬಿಟ್ಟಿದೆ, ಅದರಲ್ಲೂ ನಟರ ಪಾಡಂತೂ ಕೇಳಲೇಬೇಡಿ.

ಪ್ರತಿಯೊಂದು ಚಿತ್ರಕ್ಕೂ ದೇಹವನ್ನು ಚಿತ್ರದ ಕಥೆಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ನಾಯಕನಟರಿಗೆ ಬರುತ್ತಿದೆ. ಇನ್ನು ಇಡೀ ದೇಶವೇ ವೀಕ್ಷಿಸುವ ಬಾಲಿವುಡ್ ನಟ ನಟಿಯರ ಬಗ್ಗೆ ಕೇಳಲೇಬೇಡಿ. ಅದರಲ್ಲೂ ನಟ ಅಕ್ಷಯ್ ಕುಮಾರ್ ಅವರ ಫಿಟ್ನೆಸ್ ಬಗ್ಗೆ ಮೊದಲಿನಿಂದಲೂ ಅನೇಕರಿಗೆ ಗೊತ್ತಿರುವಂತಹ ವಿಷಯ. ಹೌದು ಉಳಿದಂತೆ ಯಾವುದೇ ಜಿಮ್ ಗಳಿಗೆ ಮೊರೆ ಹೋಗದೆ ಅಕ್ಷಯ್ ಕೇವಲ ತಮ್ಮ ಆಹಾರಕ್ರಮ ಸರಿಯಾಗಿ ಅನುಸರಿಸಿ ಗಟ್ಟಿಮುಟ್ಟಾಗಿ ಫಿಟ್ ಆಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಎಷ್ಟರಮಟ್ಟಿಗೆ ಫಿಟ್ನೆಸ್ ಬಗ್ಗೆ ಬದ್ಧತೆಯನ್ನು ಹೊಂದಿದ್ದಾರೆ ಎಂದರೆ ಅವರನ್ನು ಹಾಕಿಕೊಂಡು ಚಿತ್ರ ಮಾಡಿ ಮುಗಿದಮೇಲೆ ಅವರೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬರೂ ಫಿಟ್ನೆಸ್ ಬಗ್ಗೆ ಕಾಳಜಿವಹಿಸಲು ಆರಂಭಿಸಿ ಬಿಡುತ್ತಾರೆ. ಬೆಳಿಗ್ಗೆ 4:00 ಗಂಟೆಯಿಂದಲೇ ದಿನ ಆರಂಭಿಸುವ ಅಕ್ಷಯ್ ಕುಮಾರ್ ದಿನಪೂರ್ತಿ ದಣಿದರು ಆಯಾಸವಾಗದೇ ಇರುತ್ತಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ಅವರ ಆಹಾರ ಪದ್ಧತಿ ಮತ್ತು ಅವರು ಸೇವಿಸುವ ಆಹಾರದ ಗುಣಮಟ್ಟ.

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದು ಲೀಟರ್ ಹಾಲಿಗೆ 40 ರೂಪಾಯಿ ಅಥವಾ ಐವತ್ತು ರೂಪಾಯಿಗಳನ್ನು ನೀಡಿದರೆ ಅಕ್ಷಯ್ ಕುಮಾರ್ ಅವರ ಮನೆಗೆ ಬರುವ ಹಾಲಿನ ಬೆಲೆ ಒಂದು ಲೀಟರ್ಗೆ ಬರೋಬ್ಬರಿ 190 ರಿಂದ 200 ರೂಪಾಯಿಗಳು. ಹೌದು ಆಕಳಿನ ಈ ಹಾಲು ತುಂಬಾ ಪೌಷ್ಟಿಕಾಂಶಗಳಿಂದ ಕೂಡಿದ್ದು ಆ ಹಾಲಿನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೊಟೀನುಗಳ ಪ್ರಮಾಣ ಹೇರಳವಾಗಿರುತ್ತದೆ ಅಂತೆ.

ಎಲಬುಗಳು ಹಾಗೂ ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಅನಿವಾರ್ಯವಾದ ಈ ಹಾಲು ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುವುದರಿಂದ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿದೆ. ನೋಡಿ ಒಬ್ಬ ನಟನ ಕೆಲಸ ಕೇವಲ ತೆರೆಯಮೇಲೆ ರಂಜಿಸುವುದು ಅಲ್ಲ ಬದಲಾಗಿ ತೆರೆಯ ಹಿಂದೆ ಕೂಡ ತುಂಬಾ ಶ್ರಮವಹಿಸಬೇಕಾಗುತ್ತದೆ ಇದಕ್ಕೆ ಬಹಳ ಅತ್ಯುತ್ತಮ ಉದಾಹರಣೆ ನಟ ಅಕ್ಷಯ್ ಕುಮಾರ್ ಎನ್ನಬಹುದು.

%d bloggers like this: