ಲಾಕ್ ಡೌನ್ ಅಲ್ಲಿ ಊರಿಗೆ ಬಂದ ಇಂಜಿನಿಯರ್ ಉದ್ಯೋಗಿ ಯುವತಿಗೆ ಈಗ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮುಡಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿರುವ ಈ ಯುವತಿ ಇಂಜಿನಿಯರ್ ಉದ್ಯೋಗಿ ಎಂಬುದು ಸ್ವಾರಸ್ಯಕರ ಸಂಗತಿಯಾಗಿದೆ, ಲೋಕಲ್ ವಾರ್ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಹಲವಾರು ರೀತಿಯಲ್ಲಿ ಸ್ವಾರಸ್ಯಕರ ಕುತೂಹಲಕಾರಿ ಸಂಗತಿಗಳು ನಡೆಯುತ್ತವೆ. ಇತ್ತೀಚೆಗೆ ಭಿಕ್ಷುಕನೊಬ್ಬರನ್ನು ಚುನಾವಣೆಗೆ ನಿಲ್ಲಿಸಿದ್ದು ಆಶ್ಚರ್ಯಕರ ಸುದ್ದಿಯಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು. ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳು ಈ ಪಂಚಾಯ್ತಿ ಎಲೆಕ್ಷನ್ ಅಲ್ಲಿ ಗೆಲ್ಲೋದಕ್ಕೆ ಮಾಡೋ ಸರ್ಕಸ್ ಅಷ್ಟಿಷ್ಟಲ್ಲ ಚುನಾವಣಾ ಪ್ರಚಾರ ಆರಂಭದಿಂದ ಹಿಡಿದು ಚುನಾವಣೆ ಮುಗಿದು ರಿಸಲ್ಟ್ ಬರುವವರೆಗೂ ಗ್ರಾಮಗಳಲ್ಲಿ ಓಟಿನ ರಂಗು ಮನೆ ಮನೆಗಳಲ್ಲಿ ಮಿಂಚುತ್ತಾ ಇರುತ್ತದೆ.

ರಾಜ್ಯದಲ್ಲಿ 6025 ಗ್ರಾಮ ಪಂಚಾಯ್ತಿ ಚುನಾವಣೆಯು 2020 ಡಿಸೆಂಬರ್ 22 ಮತ್ತು 27 ತಾರೀಖಿನಲ್ಲಿ ಎರಡು ಹಂತದಲ್ಲಿ ನಡೆದಿದ್ದುಇಂದು (ಡಿಸೆಂಬರ್ 30)ಬುಧವಾರ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಕೆಲವು ಪಂಚಾಯ್ತಿಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಜಯಶೀಲರಾದರೆ ಮತ್ತೊಂದೆಡೆ ಸೊಸೆಯ ಎದುರು ಅತ್ತೆ ಗೆದ್ದಿರುವುದು ಹೀಗೆ ಒಂದಷ್ಟು ಸ್ವಾರಸ್ಯಕರ ಸಂಗತಿಗಳು ನಡೆದಿವೆ. ಇಂದಿನ ಯುವಪೀಳಿಗೆ ಐಟಿ ಕ್ಷೇತ್ರಗಳಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ಬಯಸಿದರೆ ಇತ್ತ ಇಂಜಿನಿಯರ್ ಉದ್ಯೊಗಿಯಾಗಿರುವ ವೆಲಿಂಡಾ ಡಿಸೋಜಾ ಎಂಬ ಯುವತಿ ಮುಡಿಗೆರೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವುದು ಗಮನಾರ್ಹವಾಗಿದೆ, ಜೊತೆಗೆ ಗ್ರಾಮಪಂಚಾಯ್ತಿ ಚುನಾವಣೆಯ ಅತಿ ಕಿರಿಯ ಸದಸ್ಯರಾಗಿ ಆಯ್ಕೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಅಭಿನಂದನೆಯ ಮಹಾಪೂರ ಬರುತ್ತಿದೆ.

%d bloggers like this: