ಲಂಡನ್ನಿನ ಸಮೀಕ್ಷೆಯಲ್ಲಿ ಜಗತ್ತಿಗೆ ನಂಬರ್ ಒನ್ ಸ್ಥಾನ ಪಡೆದ ನಮ್ಮ ಬೆಂಗಳೂರು

ಜಗತ್ತಿನ ನಂಬರ್ ಒನ್ ಟೆಕ್ ಹಬ್ ಅಗಿ ಹೊರಹೊಮ್ಮಿದ ಬೆಂಗಳೂರು! ಹೌದು ಗಾರ್ಡನ್ ಸಿಟಿ ಬೆಂಗಳೂರು ಐಟಿ ಬಿಟಿ ಕ್ಷೇತ್ರದಿಂದ ಹಿಡಿದು ಹೋಟೇಲ್ ರೆಸ್ಟೋರೆಂಟ್ ಉದ್ಯಮ, ಎಲ್ಲಾ ಕ್ಷೇತ್ರಗಳಲ್ಲಿಯೂ ಅತಿವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು ಮಹಾನಗರವಾಗಿದೆ. ಬ್ರಿಟನ್ ದೇಶದ ರಾಜಧಾನಿಯಾಗಿರುವ ಲಂಡನ್ ನಲ್ಲಿ 2016ರಿಂದ 2020ರವರೆಗೆ ಯಾವ ಸಿಟಿ ಹೂಡಿಕೆಯಲ್ಲಿ ಪ್ರಗತಿ ಕಂಡಿದೆ ಜೊತೆಗೆ ಯಾವ ನಗರ ಟೆಕ್ ಹಬ್ ಆಗಿ ವೇಗವಾಗಿ ಬೆಳೆದಿದೆ ಎಂದು ಖಾಸಿಗಿ ಏಜೆನ್ಸಿಯು ಸಮೀಕ್ಷೆ, ಸಂಶೋಧನೆ ನಡೆಸಲಾಗಿದೆ. ಇದರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ನಂಬರ್ ಒನ್ ಟೆಕ್ ಹಬ್ ನಗರವಾಗಿ ಆಯ್ಕೆಯಾಗಿದೆ. ಹೌದು ಈ ಸಮೀಕ್ಷೆಯ ಪ್ರಕಾರ ಟೆಕ್ ಹಬ್ ನಗರವಾಗಿ ವೇಗವಾಗಿ ಬೆಳೆಯುತ್ತಿರುವ ಸಿಟಿಗಳಲ್ಲಿ ಬೆಂಗಳೂರು ಮೊದಲನೇ ಸ್ಥಾನ ಪಡೆದರೆ, ಲಂಡನ್ ನಂತರದ ಸ್ಥಾನವನ್ನು ಲಂಡನ್ ಪಡೆದಿದೆ.

ಇನ್ನು ಮೂರನೇಯ ಸ್ಥಾನವನ್ನು ಕ್ರಮವಾಗಿ ಯುರೋಪ್ ದೇಶದ ಮ್ಯುನಿಕ್, ಬಲಿಟ್ ಮತ್ತು ಪ್ಯಾರಿಸ್ ನಗರಗಳು ನಂತರದ ಸ್ಥಾನ ಪಡೆದರೆ, ಭಾರತದ ವಾಣಿಜ್ಯನಗರಿಯಾಗಿ ಗುರುತಿಸಿಕೊಂಡಿರುವ ಮಹಾರಾಷ್ಟ್ರದ ಮುಂಬೈ ನಗರ ಆರನೇಯ ಸ್ದಾನವನ್ನು ಪಡೆದಿದೆ. 2016ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ 9506 ಕೋಟಿ ಅಂದರೆ 1.3 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಲಾಗಿತ್ತು. ಆದರೆ ಅದೇ ಹೂಡಿಕೆ 2020 ರ ಹೊತ್ತಿಗೆ ಅದು ಬರೋಬ್ಬರಿ 52654 ಕೋಟಿ ಮೊತ್ತಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಈ ಸಂಧರ್ಭದಲ್ಲಿ ಮುಂಬೈ ನಗರದಲ್ಲಿ 5119 ಕೋಟಿ ಯಷ್ಟು ಹೂಡಿಕೆ ಮಾಡಲಾಗಿದೆ ಎಂದು ಲಂಡನ್ ಅಂತರಾಷ್ಟ್ರೀಯ ಹೂಡಿಕೆ ಸಂಸ್ಥೆಯಾದ ಲಂಡನ್ ಮತ್ತು ಪಾರ್ಟನರ್ ದತ್ತಾಂಶ ವಿಶ್ಲೇಷಣೆಯಲ್ಲಿ ಮಾಹಿತಿ ನೀಡಿದೆ.

ಈ ವರದಿಯ ಪ್ರಕಾರ ಬೆಂಗಳೂರು ನಗರದಲ್ಲಿ ಐಟಿ ಬಿಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದ್ದು, ಟೆಕ್ ಹಬ್ ನಗರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಮೊದಲನೇಯ ಸ್ಥಾನ ಪಡೆದಿರುವುದು ನಿಜಕ್ಕೂ ಸಂತೋಷದ ವಿಚಾರವಾಗಿದೆ. ಆದರೆ ಟೆಕ್ ಹಬ್ ಗಳಲ್ಲಿ ಉದ್ಯೋಗದ ವಿಚಾರ ಬಂದಾಗ ಅಸಮಾಧಾನ ವ್ಯಕ್ತ ಪಡಿಸಬೇಕಾಗುತ್ತದೆ. ಏಕೆಂದರೆ ಕನ್ನಡಿಗರಿಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಸ್ಥಾನಮಾನ ಅಧಿಕಾರಗಳು ಸಿಗುವುದಿಲ್ಲ ಎಂಬ ಆರೋಪ ಆಗಾಗ ಕೇಳಿಬರುತ್ತಿವೆ.

%d bloggers like this: