ಸ್ಯಾಂಡಲ್ ವುಡ್ ಕ್ರೇಜಿ಼ ಸ್ಟಾರ್ ವಿ.ರವಿಚಂದ್ರನ್ ಅವರ ಮೊದಲ ಪುತ್ರ ನಟ ಮನೋರಂಜನ್ ಅವರು ನಟಿಸಿರುವ ಪ್ರಾರಂಭ ಚಿತ್ರದ ಪ್ರಮೋಶನ್ ತುಂಬಾ ವಿಶಿಷ್ಟವಾಗಿ ನಡೆಯುತ್ತಿದೆ. ಹೌದು ತನ್ನ ತಂದೆ ಒಬ್ಬ ಸ್ಟಾರ್ ನಟ ಆದರೂ ಕೂಡ ಅವರ ಹೆಸರನ್ನ ಎಲ್ಲಿಯೂ ಕೂಡ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ತನ್ನ ಪ್ರತಿಭೆಯನ್ನು ನಂಬಿ ಸಿವಿಮಾರಂಗದಲ್ಲಿ ಏನಾದ್ರು ಸಾಧಿಸಬೇಕು ಎಂದು ಹೋರಾಡುತ್ತಿರುವ ನಟ ಮನೋರಂಜನ್ ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅವರು ತಮ್ಮ ಪ್ರಾರಂಭ ಸಿನಿಮಾದ ಪ್ರಚಾರ ಕಾರ್ಯವನ್ನು ಬಹಳ ವಿಭಿನ್ನವಾಗಿ ಮಾಡುತ್ತಿದ್ದಾರೆ. ಹೌದು ಮುಯ್ಯಿ ನಿಮ್ದು. ಮನಸ್ಸು ಮುಟ್ಟೋ ಕೆಲಸ ನಮ್ದು ಎಂದು ತಮ್ಮ ಚಿತ್ರವನ್ನ ನೋಡಲು ಸಿನಿ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಿದ್ದಾರೆ.
ಹೌದು ಪ್ರಾರಂಭ ಸಿನಿಮಾ ಇದೇ ಮೇ13ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹಾಗಾಗಿ ಸಿನಿ ಪ್ರೇಕ್ಷಕರನ್ನು ಚಿತ್ರ ಮಂದಿರದತ್ತ ಕರೆ ತರಲು ಮುಯ್ಯಿ ನಿಮ್ದು ಮನಸ್ಸು ಮುಟ್ಟೋ ಕೆಲಸ ನಮ್ದು, ಇವರಿಬ್ಬರು, ನಾವೆಲ್ಲರೂ ಅಲ್ಪ ಪ್ರಿಯರು ಕುಬೇರರನ್ನಾಗಿ ಮಾಡುವುದು ನಿಮ್ಮ ಜವಬ್ದಾರಿ ಎಂದು ಆಹ್ವಾನ ಪತ್ರಿಕೆ ರೆಡಿ ಮಾಡಿದ್ದಾರೆ. ಈ ಆಹ್ವಾನ ಪತ್ರಿಕೆ ಸಖತ್ ಆಗಿದ್ದು. ಸೋಶಿಯಲ್ ಮೀಡಿಯಾಗಳಲ್ಲಿ ಈ ಚಿತ್ರದ ಆಹ್ವಾನ ಪತ್ರಿಕೆ ಸಖತ್ ವೈರಲ್ ಆಗಿದೆ. ಮನೋರಂಜನ್ ಅಭಿನಯದ ಈ ಪ್ರಾರಂಭ ಚಿತ್ರವನ್ನ ಜೇನುಶ್ರೀ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಡಿ ಜಗದೀಶ್ ಕಲ್ಯಾಣಿ ಅವರು ಬಂಡವಾಳ ಹೂಡಿದ್ದಾರೆ.
ಈ ಪ್ರಾರಂಭ ಚಿತ್ರಕ್ಕೆ ಮನು ಕಲ್ಯಾಡಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ನಟ ಮನೋರಂಜನ್ ಅವರಿಗೆ ಜೋಡಿಯಾಗಿ ಕೀರ್ತಿ ಕಲ್ಕೇರಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಡ್ಡಿ ಪುಡಿ ಚಂದ್ರು ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್ ಪಾಯ್ ಅವರು ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಈ ಪ್ರಾರಂಭ ಚಿತ್ರದ ಆಹ್ವಾನ ಪತ್ರಿಕೆ ನೋಡಿದ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದು, ಖಂಡಿತಾ ನಿಮ್ಮ ಚಿತ್ರ ನೋಡಲು ಕುಟುಂಬ ಸಮೇತ ಬರುತ್ತೇವೆ. ಮನರಂಜನೆಯ ಮದುವೆ ಊಟ ಸಖತ್ತಾಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಟ್ರೇಲರ್ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟು ಹಾಕಿದೆ.