ಮದುವೆ ವಾರ್ಷಿಕೋತ್ಸವದಕ್ಕೆ ಮನದಾಳದ ಮಾತು ಹಂಚಿಕೊಂಡ ವಿರಾಟ್ ಕೊಹ್ಲಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತಹ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂತೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ನಾಲ್ಕನೇ ವರ್ಷದ ಮ್ಯಾರೇಜ್ ಆನಿವರ್ಸರಿ ಸಂಭ್ರಮದ ಹಿನ್ನೆಲೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನ ಹಾಡಿ ಹೊಗಳಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಬೇಡಿಕೆಯ ನಟಿ ಅನುಷ್ಕಾ ಶರ್ಮಾ ಮತ್ತು ಟೀಮ್ ಇಂಡಿಯಾ ನಾಯಕ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇಬ್ಬರು ಪರಸ್ಪರ ಪ್ರೀತಿಸಿ 2017ರಲ್ಲಿ ಅದ್ದೂರಿಯಾಗಿ ಮದುವೆ ಆದರು. ಇದೀಗ ಒಂದು ಮುದ್ದಾದ ಮಗುವಿನ ತಂದೆ ತಾಯಿಯಾಗಿರುವ ಈ ಜೋಡಿಗಳಿಗೆ ಸಪ್ತಪದಿ ತುಳಿದು ನಾಲ್ಕು ವರ್ಷಗಳು ಪೂರೈಸಿವೆ.

ದಾಂಪತ್ಯ ಜೀವನಕ್ಕೆ ಹೆಜ್ಜೆ ಯಿಟ್ಟು ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತನ್ನ ಪ್ರೀತಿಯ ಮಡದಿ ನಟಿ ಅನುಷ್ಕಾ ಶರ್ಮಾರಿಗೆ ವಿಶೇಷವಾಗಿ ಮದುವೆ ವಾರ್ಷಿಕೋತ್ಸವ ಶುಭಾಶಯ ತಿಳಿಸಿದ್ದಾರೆ. ಕೊಹ್ಲಿ ತಮ್ಮ ಟ್ವಿಟರ್ ನಲ್ಲಿ ತಾನು ತನ್ನ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ತಮ್ಮ ಮಗು ಇರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅನುಷ್ಕಾ ಶರ್ಮಾ ಅವರನ್ನು ಕುರಿತು ನೀನು ನನ್ನ ಬದುಕಿಗೆ ಬಂದ ನಂತರ ನಾನು ಪರಿಪೂರ್ಣನಾದೆ. ನಾನು ಮಾಡುವ ಸಣ್ಣ ಪುಟ್ಟ ಹಾಸ್ಯಗಳನ್ನು ಮತ್ತು ನನ್ನ ಸೋಮಾರಿಚನವನ್ನು ಸಹಿಸಿಕೊಂಡು ಪ್ರತಿದಿನವೂ ನನಗೆ ನೀನು ಪ್ರೀತಿ ನೀಡಿದೆ.

ನಾನು ನಿನಗೆ ಎಷ್ಟೇ ಕಿರಿಕಿರಿ ಉಂಟು ಮಾಡಿದರು ಕೂಡ ಅವುಗಳನ್ನೆಲ್ಲಾ ಸಹಿಸಿಕೊಂಡು ನನ್ನನ್ನು ಪ್ರೀತಿಸಿದ್ದೀಯಾ. ಇಡೀ ಜಗತ್ತೇ ನಮ್ಮ ವಿರುದ್ದವಾದರು ನ್ಯಾಯದ ಪರ ನಿಲ್ಲಲು ನನಗೆ ಪ್ರೇರಣೆಯಾದ ಮಹಿಳೆ ನೀನು. ಅತ್ಯಂತ ಪ್ರಾಮಣಿಕ, ಕೆಚ್ಚೆದೆಯ ಮಹಿಳೆಯನ್ನು ಮದುವೆಯಾಗಿ ನಾಲ್ಕು ವರ್ಷಗಳು ಪೂರೈಸಿವೆ ಈ ನಾಲ್ಕು ವರ್ಷಗಳಲ್ಲಿ ದೇವರು ನಮ್ಮ ಮೇಲೆ ಕರುಣೆಯನ್ನು ದಯಪಾಲಿಸಿದ್ದಾನೆ. ನಾನು ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಧರ್ಮಪತ್ನಿ ಅನುಷ್ಕಾ ಶರ್ಮಾ ಅವರನ್ನು ಮೆಚ್ಚಿ ಹೊಗಳಿ ತಮ್ಮ ಟ್ವಿಟರ್ ನಲ್ಲಿ ತಮ್ಮ ‌ನಾಲ್ಕನೇಯ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

%d bloggers like this: