ಮಗಳ 3ನೇ ಹುಟ್ಟು ಹಬ್ಬಕ್ಕೆ ವಿಶೇಷ ಪೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್ ಅವರು

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ಪುತ್ರಿ ಐರಾಗೆ ಇದೀಗ ಮೂರು ವರ್ಷ ಪೂರೈಸಿದೆ. ಈ ಮೂರು ವಸಂತಗಳ ಸಂಭ್ರಮದ ದಿನದಂದು ತಾಯಿ ನಟಿ ರಾಧಿಕಾ ಪಂಡಿತ್ ತನ್ನ ಮುದ್ದಾದ ಮಗಳು ಐರಾಳ ಕ್ಯೂಟ್ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ನಿನ್ನ ಕೈ ಹಿಡಿಯಲು ಸದಾ ನಾನು ಇರುತ್ತೇನೆ ಎಂದು ಭಾವನಾತ್ಮಕ ಪದಗಳನ್ನು ಬರೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಅಭೂತಪೂರ್ವ ಯಶಸ್ಸು ಮತ್ತು ಕೆಜಿಎಫ್ 2 ಚಿತ್ರದ ಟ್ರೇಲರ್ ಗೆ ದೊರೆತ ಜನ ಮನ್ನಣೆಯಿಂದ ಯಶ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಗಳು ಮತ್ತು ಬಿಡುಗಡೆಗೆ ಸಿದ್ದವಾಗಿರುವ ಕೆಜಿಎಫ್ ಚಾಪ್ಟರ್ ಚಿತ್ರದ ಪ್ರಮೋಶನ್ ಮತ್ತು ರಿಲೀಸ್ ಬಗ್ಗೆ ತುಂಬಾ ಬಿಝಿ಼ ಆಗಿದ್ದಾರೆ.

ಇದೆಲ್ಲದರ ಬಿಝಿ಼ ಶೆಡ್ಯೂಲ್ ನಡುವೆ ಕೂಡ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಇನ್ನು ನಟಿ ರಾಧಿಕಾ ಪಂಡಿತ್ ಅವರಂತೂ ಮದುವೆಯಾದ ನಂತರ ಸಿನಿಮಾರಂಗದಿಂದ ಅಂತರವನ್ನು ಕಾಯ್ದುಕೊಂಡು ತಮಗೆ ಒಪ್ಪುವಂತಹ ಪಾತ್ರ ಸಿಕ್ಕರೆ ಮಾತ್ರ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮಗಳು ಐರಾ ಜನಿಸಿದಾಗಿನಿಂದ ರಾಧಿಕಾ ಪಂಡಿತ್ ಅವರು ಯಾವುದೇ ಕೆಲಸ ಕಾರ್ಯಗಳಲ್ಲಿ ನಿರತರಾಗದೇ ತಮ್ಮ ಸಂಪೂರ್ಣ ಸಮಯವನ್ನು ತಮ್ಮ ಮಗಳ ಲಾಲನೆ ಪಾಲನೆಗೆ ಮೀಸಲಿಟ್ಟಿದ್ದರು. ಅದರಂತೆ ತಮ್ಮ ಮಗ ಯಥರ್ವ್ ಜನಿಸಿದ ನಂತರ ಫುಲ್ ಟೈಮ್ ಮದರ್ ಆಗಿ ತಮ್ಮಿಬ್ಬರ ಮಕ್ಕಳ ಜೊತೆ ಕಾಲ ಕಳೆಯುತ್ತಿರುವ ನಟಿ ರಾಧಿಕಾ ಪಂಡಿತ್ ಅವರು ಆಗಾಗ ತಮ್ಮಿಬ್ಬರ ಮಕ್ಕಳ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿರುತ್ತಾರೆ.

ತಮ್ಮಿಬ್ಬರ ಮಕ್ಕಳನ್ನು ಕೂಡ ಪ್ರವಾಸ ತಾಣಗಳಿಗೆ ಕರೆದುಕೊಂಡು ಹೋಗಿ ತಮ್ಮ ಮಕ್ಕಳ ಜೊತೆ ಕಳೆಯುವ ತರಲೆ, ತುಂಟಾಟ ಮತ್ತು ಸಂತಸದ ಕ್ಷಣಗಳ ಫೋಟೋಗಳನ್ನ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯವ‌ಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ತಮ್ಮ ಮುದ್ದು ಮಗಳು ಐರಾಳ ಮೂರನೇ ವರ್ಷದ ಹುಟ್ಟುಹಬ್ಬದಂದು ಐರಾಳ ಬೆರಳು ಹಿಡಿದು ಹೋಗುತ್ತಿರುವ ಫೋಟೋವೊಂದನ್ನ ಶೇರ್ ಮಾಡಿಕೊಂಡು ನಿನ್ನ ಕೈ ಹಿಡಿಯಲು ಸದಾ ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಭಾವನಾತ್ಮಕ ಬರಹ ಬರೆದುಕೊಂಡು ಏಂಜೆಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

%d bloggers like this: