ಮಗಳ ನಾಮಕರಣದಲ್ಲಿ ಅಥಿತಿಗಳಿಗೆ ಭರ್ಜರಿ ಊಟ ಹಾಕಿಸಿದ ಬೆಂಗಳೂರಿನ ತಂದೆ, ಒಂದು ಬಾಳೆ ಎಲೆ ಊಟಕ್ಕೆ ಸಾವಿರ ರೂಪಾಯಿ

ಮಗಳ ನಾಮಕರಣಕ್ಕೆ ವಿವಿಧ ಭಕ್ಷ ಭೋಜನ. ಒಂದು ಎಲೆ ಊಟಕ್ಕೆ ಬರೋಬ್ಬರಿ ಒಂದು ಸಾವಿರ ರುಪಾಯಿ ಖರ್ಚಾಗಿದೆಯಂತೆ. ಈ ಸುದ್ದಿ ನಿಜಕ್ಕೂ ಕೂಡ ಅಚ್ಛರಿ ಮತ್ತು ದುಂದು ವೆಚ್ಚ, ತೋರ್ಪಡಿಕೆಯ ಪರಿ ಎಂದು ಅನಿಸಬಹುದು. ಆದರೆ ಇದು ಅವರು ತಮ್ಮ ಮುದ್ದಿನ ಮಗಳ ನಾಮಕರಣಕ್ಕೆ ಬಂದ ಅತಿಥಿಗಳನ್ನ ಸತ್ಕರಿಸಿದ ಪರಿ ಎಂದು ತಿಳಿಸಿದ್ದಾರೆ. ಅಂದ್ಹಾಗೆ ಈ ಒಂದು ವಿಶೇಷ ಭೋಜನದ ಸಂಗತಿ ನಡೆದಿರುವುದು ನೆಲಮಂಗಲದಲ್ಲಿ. ಸಾಮಾನ್ಯವಾಗಿ ಯಾವುದೇ ಶುಭ ಸಮಾರಂಭ ಕಾರ್ಯಗಳ ತಯಾರಿಯಲ್ಲಿ ಊಟದ ವ್ಯವಸ್ಥೆಯ ಬಗ್ಗೆ ಆಲೋಚನೆ ಬಂದೇ ಬರುತ್ತದೆ. ಬರುವ ಅತಿಥಿಗಳಿಗೆ, ಬಂಧು ಬಳಗದವರಿಗೆ ಯಾವ ರೀತಿಯ ಊಟದ ವ್ಯವಸ್ಥೆ ಮಾಡಬೇಕು. ಯಾವ ಯಾವ ಪಧಾರ್ಥ ಇರಬೇಕು ಎಂದು ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಅಬ್ಬಬ್ಬಾ ಅಂದರೆ ಒಂದು ಬಾಳೆ ಎಲೆಯ ಊಟ ಎಷ್ಟು ಖರ್ಚಾಗಬಹುದು.

ಕನಿಷ್ಟ ಅಂದ್ರು ಕೂಡ ನೂರರಿಂದ ನೂರೈವತ್ತು. ಬೇಡ, ಇನ್ನೂರು ರೂ ಅಂತ ಇಟ್ಟುಕೊಂಡರು ಒಂದು ರೇಂಜ್ ಗೆ ಊಟ ಚೆನ್ನಾಗಿಯೇ ಇರುತ್ತದೆ. ಆದರೆ ನೆಲಮಂಗಲದ ಈ ವ್ಯಕ್ತಿ ತನ್ನ ಮಗಳ ನಾಮಕರಣದ ಹಿನ್ನೆಲೆ ಊಟದ ಮೆನುವಿನಲ್ಲಿ ವಿಶೇಷ ವಿಭಿನ್ನ ಬಗೆಯ ಆಹಾರ ಪಧಾರ್ಥಗಳನ್ನು ಮಾಡಿಸುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಹೌದು ಊಟದ ಮೆನುವಿನಲ್ಲಿ ಬೆಳಿಗ್ಗೆಗೆ ಸಾಬುದಾನ ಇಡ್ಲಿ, ಎಂಟಿಆರ್ ಸಾಗು, ಎರಡೆರಡು ಬಗೆಯ ಚಟ್ನಿ, ಮಿನಿ ಬೋಂಡಾ ಸೂಪ್, ಮದ್ರಾಸ್ ಪೊಂಗಲ್, ಹುಳಿಗೊಜ್ಜು, ಮೊಸರು, ಪಾಲಾಕ್ ಪೂರಿ, ಸಿಟಿ ಸ್ಪೆಷಲ್ ಮಸಾಲ, ಮಿನಿ ಬೆಣ್ಣೆ ದೋಸೆ, ಕೊಬ್ಬರಿ ಚಟ್ನಿ ಇನ್ನಿತರ ಸಿಹಿ ಖಾಧ್ಯ ಪಧಾರ್ಥಗಳು. ಇನ್ನು ಮಧ್ಯಾಹ್ನದ ಊಟದಲ್ಲಿ ಮದುವೆಯಲ್ಲಿ ಇರುವ ಎಲ್ಲಾ ಸಿಹಿ ಮತ್ತು ಖಾರ ಖಾಧ್ಯಗಳ ಜೊತೆಗೆ ಹತಿಕಾಯಿ ಮಸಾಲ, ಆಂಧ್ರ ಪಪ್ಪು ಖಾರ, ಅಕ್ಕಿ ಹಪ್ಪಳ, ಈರುಳ್ಳಿ ಸಂಡಿಗೆ, ಕಡಕ್ ರೊಟ್ಟಿ, ದಪ್ಪ ಮೆಣಸಿನ ಎಣ್ಣೆಗಾಯಿ ಇತ್ಯಾಧಿ.

ಇದರ ಜೊತೆಗೆ ಅತಿಥಿಗಳನ್ನ ಸ್ವಾಗತ ಬಯಸುವ ಸಂಧರ್ಭದಲ್ಲಿ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್, ಪುದೀನಾ ಪೈನಾಪಲ್, ಫಲೂದಾ, ಚೌಮಿನ್ ಲಾಲಿ ಪಾಪ್, ಯೆಲ್ಲೋ ಕಬಾಬ್, ಕೋಲ್ಡ್ ಗಿಣ್ಣು ಹೀಗೆ ತಮ್ಮ ಮಗಳ ನಾಮಕರಣಕ್ಕೆ ವಿವಿಧ ರೀತಿಯ ಭರ್ಜರಿ ಭೋಜನ ಮಾಡಿಸುವ ಮೂಲಕ ನೆಲಮಂಗಲದ ವ್ಯಕ್ತಿ ಭಾರಿ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಕೆಲವರು ಕೇವಲ ನಾಮಕರಣಕ್ಕೇನೇ ಹೀಗಾದ್ರೇ, ಮದುವೆಗೆ ಹೇಗೆ ಮಾಡಿಸಬೇಡ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕೋವಿಡ್ ಬದುಕು ನೋಡಿ ಅನುಭವಿಸಿದ ನಂತರವೂ ಕೂಡ ಈ ರೀತಿಯಾಗಿ ಅನಗತ್ಯ ದುಂದು ವೆಚ್ಚ ಮಾಡುವುದು ನಿಜಕ್ಕೂ ಕೂಡ ದುರಂತ ಎಂದು ಒಂದಷ್ಟು ಮಂದಿ ನಕರಾತ್ಮಕ ಪ್ರತಿಕಿಯೆ ವ್ಯಕ್ತಪಡಿಸಿದ್ದಾರೆ.

%d bloggers like this: