ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೀಗ ವೆಬ್ ಸೇರೀಸ್ ಅಲ್ಲಿಯೂ ಕೂಡ ಮಿಂಚಲಿದ್ದಾರೆ. ಹೌದು ಕನ್ನಡ ಚಿತ್ರರಂಗದ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ನಟ ಅಂದರೆ ಅದು ಶಿವಣ್ಣ. ಐವತ್ತು ದಾಟಿದರು ಕೂಡ ಇಪ್ಪತ್ತೈದರ ಹರಯ ಯುವಕರನ್ನು ನಾಚುವಂತೆ ಸದಾ ಉತ್ಸಾಹದಿಂದ ಇರುವ ಶಿವಣ್ಣ ಇಂದಿನ ಎಲ್ಲಾ ಯುವ ಕಲಾವಿದರಿಗೆ ಸ್ಪೂರ್ತಿ ಅಂತಾನೇ ಹೇಳಬಹುದು. ವರ್ಷ ಪೂರ್ತಿ ಒಂದಲ್ಲ ಒಂದು ಸಿನಿಮಾದಲ್ಲಿ ತೊಡಗಿಕೊಂಡು ಸದಾ ಸಕ್ರೀಯವಾಗಿ ದುಡಿಯುವ ಶಿವಣ್ಣ ಇದೀಗ ಮತ್ತಷ್ಟು ಬಿಝಿ಼ ಆಗಲಿದ್ದಾರೆ. ಹೌದು ನಟ ಶಿವರಾಜ್ ಕುಮಾರ್ ಅವರು ಈಗಾಗಲೇ 125 ಸಿನಿಮಾಗಳತ್ತ ದಾಪುಗಾಲಿಟ್ಟಿದ್ದಾರೆ. ತಮ್ಮ 125ನೇ ವೇದ ಚಿತ್ರದ ಕೆಲಸ ಕಾರ್ಯಗಳು ಕೂಡ ನಡೆಯುತ್ತಿವೆ. ಈ ಚಿತ್ರವನ್ನ ತಮ್ಮದೇ ಯಾದ ಗೀತಾ ಪಿಕ್ಚರ್ಸ್ ಅಡಿಯಲ್ಲಿ ತಾವೇ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದರ ನಡುವೆ ಶಿವಣ್ಣ ಭೈರಾಗಿ ಮತ್ತು ಇನ್ನೊಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಬಿಝಿ಼ ಶೆಡ್ಯೂಲ್ ನಡುವೆ ಶಿವಣ್ಣ ಅವರು ವೆಬ್ ಸೀರೀಸ್ ನಲ್ಲಿಯೂ ಕೂಡ ಮಿಂಚಲು ಸಿದ್ಧತೆ ನಡೆಸುತ್ತಿದ್ದಾರೆ. ಹೌದು ನಟ ಶಿವರಾಜ್ ಕುಮಾರ್ ಅವರೇ ಈ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಶಿವಣ್ಣ ಅವರು ಕೋವಿಡ್ ಸಮಯದಲ್ಲಿ ಸಾಕಷ್ಟು ವೆಬ್ ಸೀರಿಸ್ ಗಳನ್ನ ನೋಡಿದ್ದಾರಂತೆ. ಅವರ ಎರಡನೇ ಪುತ್ರಿ ನಿವೇದಿತಾ ಅವರು ಕಳೆದ ನಾಲ್ಕೈದು ವರ್ಷಗಳಿಂದ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ನಿವೇದಿತಾ ಅವರು ಹೇಟ್ ಯೂ ರೋಮಿಯೋ, ಬೈ ಮಿಸ್ಟೇಕ್, ಹನಿಮೂನ್ ಅಂತಹ ಮೂರು ಉತ್ತಮ ವೆಬ್ ಸೀರಿಸ್ ಗಳನ್ನ ನಿರ್ಮಾಣ ಮಾಡಿದ್ದಾರೆ. ಇದೀಗ ತಮ್ಮ ಮುಂದಿನ ವೆಬ್ ಸೀರಿಸ್ ನಲ್ಲಿ ನಿವೇದಿತಾ ಅವರು ತಮ್ಮ ತಂದೆಯನ್ನೇ ಹಾಕಿಕೊಂಡು ವೆಬ್ ಸೀರಿಸ್ ಮಾಡಲಿದ್ದಾರಂತೆ.

ಶಿವಣ್ಣ ಅವರು ತಮ್ಮ ಮಗಳ ಮೂಲಕ ಒಂದಷ್ಟು ವಿಭಿನ್ನ ಬಗೆಯ ಕಥಾ ಹಂದರ ಇರುವ ವೆಬ್ ಸೀರಿಸ್ ಗಳನ್ನು ನೋಡಿದ್ದು, ತಾವು ಕೂಡ ಅಪ್ ಡೇಟ್ ಆಗಿ ಹೊಸ ರೀತಿಯಾಗಿ ಪ್ರೇಕ್ಷಕರನ್ನ ರಂಜಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದ್ದಾರೆ. ಬಲಗೈ ಬಂನಂತಿದ್ದ ಅಪ್ಪು ಅವರನ್ನ ಕಳೆದುಕೊಂಡ ನಂತರ ಶಿವಣ್ಣ ಅವರ ಕೆಲವು ತಿಂಗಳು ಮಾನಸಿಕ ವೇದನೆಯನ್ನು ಪಡುತ್ತಾ ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಅಪ್ಪು ಅವರು ನಮ್ಮ ಜೊತೆ ಇದ್ದಾರೆ. ಅವರು ಎಂದಿಗೂ ಕೂಡ ನಮ್ಮ ಜೊತೆಯಲ್ಲೇ ಸದಾ ಇರುತ್ತಾರೆ ಎಂಬ ಆತ್ಮಸ್ಥೈರ್ಯ ತೆಗೆದುಕೊಂಡು ಮತ್ತೆ ಸಿನಿಮಾಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಇಷ್ಟು ದಿನ ಸಿನಿಮಾಗಳಲ್ಲಿ ಶಿವಣ್ಣ ಅವರನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ವೆಬ್ ಸೀರಿಸ್ ನಲ್ಲಿ ಕೂಡ ತಮ್ಮ ನೆಚ್ಚಿನ ನಟನನ್ನ ನೋಡುವ ಖುಷಿಯಲ್ಲಿದ್ದಾರೆ.