ಮಗಳು ಜನಿಸುತ್ತಿದ್ದಂತೆ ಟ್ವಿಟ್ಟರ್ ಅಲ್ಲಿ ಬದಲಾವಣೆ ಮಾಡಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಣ್ಣು ಮಗುವಿನ ತಂದೆಯಾಗಿ ಸಂಭ್ರಮದಲ್ಲಿದ್ದಾರೆ. ವಿರುಷ್ಕಾ ದಂಪತಿಗೆ ಹೆಣ್ಣು ಮಗುವಾದ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಇದಾದ ಬಳಿಕ ಮಗುವಿನ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಮುದ್ದಿನ ಮಗಳಿಗೆ ಭರ್ಜರಿ ಸ್ವಾಗತ ಕೋರಿದ ಕೊಹ್ಲಿ ತಾವು ಮುಂಬೈನ ವರ್ಲಿಯಲ್ಲಿ ಖರೀದಿಸಿರುವ ಐಷರಾಮಿ ಫ್ಲ್ಯಾಟ್ ಗೆ ಕರೆದೊಯ್ಯಲಾಗಿತ್ತು, ಇದೀಗ ವಿರಾಟ್ ಕೊಹ್ಲಿ ತನ್ನ ಟ್ವಿಟ್ಟರ್ ಖಾತೆಯ ಹಳೇ ಪೋಟವನ್ನು ರಿಮೂವ್ ಮಾಡಿ ಈಗ ತಾನು ಮತ್ತು ಅನುಷ್ಕಾ ಜೊತೆಯಿರುವ ಫೋಟವನ್ನು ಸೇರಿಸಿದ್ದಾರೆ.

ಅನುಷ್ಕಾ ತುಂಬು ಗರ್ಭಿಣೆಯಾದಾಗಿನಿಂದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ತೊರೆದಿದ್ದಿರು. ಜೊತೆಗೆ ಅನುಷ್ಕಾಳ ಆರೈಕೆಯಲ್ಲಿ ತೊಡಗಿದ್ದರು ಕೊಹ್ಲಿ, ಇದೀಗ ತನ್ನ ಅನುಷ್ಕಾ ಮತ್ತು ಮುದ್ದು ಮಗಳ ಜೊತೆಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಟ್ವಿಟ್ಟರ್ ಖಾತೆಯ ಬಯೋದಲ್ಲಿ ನನ್ನ ಮುದ್ದು ಮಗಳಿಗೆ ತಂದೆಯಾಗಿ, ಪ್ರೀತಿಯ ಪತ್ನಿ ಅನುಷ್ಕಾಳ ಪತಿಯಾಗಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನ ನಾಲ್ಕನೇಯ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಮತ್ತು ಠಾಕೂರ್ ಅವರ ಆಟ ಮೆಚ್ಚಿ ಅಭಿನಂದನೆ ತಿಳಿಸುವುದರ ಜೊತೆಗೆ ಹಾಡಿ ಹೊಗಳಿದ್ದರು.

%d bloggers like this: