ಮಗನ ಈಜು ಸ್ಪರ್ಧೆಯ ಸಲುವಾಗಿ ಭಾರತ ಬಿಟ್ಟು ದುಬೈಯಲ್ಲಿ ನೆಲೆಯೂರಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟ

ದಕ್ಷಿಣ ಭಾರತದ ಸುಪ್ರಸಿದ್ದ ನಟನ ಮಗ ಇದೀಗ ನ್ಯಾಷನಲ್ ಸ್ವಿಮ್ಮಿಂಗ್ ಚಾಂಪಿಯನ್, ಸಿನಿಮಾ ನಟ-ನಟಿಯರ ಬಹುತೇಕ ಮಕ್ಕಳು ಬಣ್ಣದ ಲೋಕದಲ್ಲಿ ಮಿಂಚಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವು ಕಲಾವಿದರ ಮಕ್ಕಳು ಈಗಾಗಲೇ ಸಿನಿಮಾ ಕ್ಷೇತ್ರದಲ್ಲಿ ನಕ್ಷತ್ರ ತಾರೆಗಳಾಗಿ ಮಿಂಚುತ್ತಿದ್ದಾರೆ. ಆದರೆ ಕೆಲವು ಸ್ಟಾರ್ ನಟರ ಮಕ್ಕಳು ಮಾತ್ರ ತಮ್ಮದೇಯಾದ ಸ್ವಂತಿಕೆಯ ದಾರಿಯನ್ನ ಕಂಡುಕೊಳ್ಳುತ್ತಿದ್ದಾರೆ. ಅಪ್ಪ ಹಾಕಿದ ಹಾಲದ ಮರ ಅಂತ ಅದಕ್ಕೇನೇ ತಳುಕು ಹಾಕಿಕೊಳ್ಳದೇ ಪ್ರತ್ಯೇಕವಾದ ತನ್ನ ಇಚ್ಚೆಯ ಕ್ಷೇತ್ರದತ್ತ ಹೆಜ್ಜೆ ಹಾಕಿದ್ದಾರೆ. ತಮ್ಮ ಮಕ್ಕಳು ತಮಗಿಂತ ವಿಭಿನ್ನ ಕನಸುಗಳ ಬೆನ್ನತ್ತಿ ಹೊರಟಾಗ ಪೋಷಕರು ಕೂಡ ತಮ್ಮ ಮಕ್ಕಳ ಕನಸು ಸಾಕಾರವಾಗಲು ಪ್ರೋತ್ಸಾಹ ಬೆಂಬಲ ನೀಡಿ ನೆರವಾಗುತ್ತಾರೆ.

ಅದರಂತೆ ಇದೀಗ ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟರಾದ ಮಾಧವನ್ ಅವರ ಪುತ್ರ ವೇದಾಂತ್ ವಿಶೇಷವಾದ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಹೌದು ನಟ ಮಾಧವನ್ ಪುತ್ರ ವೇದಾಂತ್ ಸ್ವಿಮ್ಮಿಂಗ್ ನಲ್ಲಿ ನ್ಯಾಷನಲ್ ಚಾಂಪಿಯನ್ ಆಗಿದ್ದಾರೆ. ತಮ್ಮ ಮಗನ ಸಾಧನೆ ಕಂಡು ನಟ ಮಾಧವನ್ ವೇದಾಂತ್ ಈಗಾಗಲೇ ಜಗತ್ತಿನಾದ್ಯಂತ ಅನೇಕ ಚಾಂಪಿಯನ್ ಶಿಪ್ ಗಳನ್ನು ಜಯಿಸಿದ್ದಾರೆ. ನಮ್ಮ ಮಗನ ಸಾಧನೆಗೆ ನಮಗೆ ಹೆಮ್ಮೆ ಇದೆ ಎಂದು ನಟ ಮಾಧವನ್ ಸಂತಸ ವ್ಯಕ್ತಪಡಿಸಿದ್ದಾರೆ. ವೇದಾಂತ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ ಭಾಗವಾಗಿ ಏಷ್ಯನ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಕಾಂಪಿಟೇಶನ್ ನಲ್ಲಿ ಜಯಶಾಲಿಯಾಗಿದ್ದಾರೆ.

ಜೊತೆಗೆ ಇತ್ತೀಚೆಗೆ ಮಾರ್ಚ್ ನಲ್ಲಿ ನಡೆದ ಲಟ್ಟಿಯನ್ ಓಪನ್ ಕ್ವಾಲಿ ಫೈಯರ್ ನಲ್ಲಿ ವೇದಾಂತ್ ಭಾರತ ತಂಡದ ಪರವಾಗಿ ಆಡಿ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ವೇದಾಂತ್ ರಾಷ್ಟ್ರ ಮಟ್ಟದ ಸ್ವಿಮ್ಮಿಂಗ್ ಕಾಂಪಿಟೇಶನ್ ನಲ್ಲಿ ಗುರುತಿಸಿಕೊಂಡಿದ್ದು, ಇದೀಗ ಮತ್ತೊಂದು ಸಾಧನೆಯ ಮೈಲಿಗಲ್ಲು ಮುಟ್ಟಲು 2026 ರ ಒಲಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ವೇದಾಂತ್ ತಯಾರಿಸಿ ನಡೆಸುತ್ತಿದ್ದಾರೆ. ಆದರೆ ಮುಂಬೈ ನಗರದಲ್ಲಿ ಕೋವಿಡ್ ಹಿನ್ನೆಲೆಯ ಪರಿಣಾಮ ಈಜುಕೊಳಗಳನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ವೇದಾಂತ್ ಅವರಿಗೆ ಅಭ್ಯಾಸ ನಡೆಸಲು ಅವಕಾಶ ಇಲ್ಲದ ಕಾರಣ ಮಾಧವನ್ ಅವರು ತಮ್ಮ ಪುತ್ರನ ಸಾಧನೆಗೆ ಪ್ರೇರಕವಾಗಿ ನಿಲ್ಲಲು ನಟ ಮಾಧವನ್ ಅವರು ತಮ್ಮ ಸಂಪೂರ್ಣ ಕುಟುಂಬದ ಸಮೇತ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

%d bloggers like this: