ಕಿಸ್ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ಯೂಟ್ ಅಂಡ್ ಬ್ಯೂಟಿಫುಲ್ ನಟಿ ಎಂದರೆ ಶ್ರೀಲೀಲಾ. ತಮ್ಮ ಮೊದಲ ಚಿತ್ರದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಶ್ರೀಲೀಲಾ ಅವರು ಗಳಿಸಿಕೊಂಡಿದ್ದಾರೆ. ಮೊದಲ ಚಿತ್ರದಿಂದಲೇ ಭರವಸೆಯ ನಟಿ ಎಂಬ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ನಟಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬಿಸಿಯಾಗಿದ್ದಾರೆ. ಕನ್ನಡದಲ್ಲಿ ಕಿಸ್, ಭರಾಟೆ ಮತ್ತು ರಿಲೀಸ್ ಗೆ ರೆಡಿಯಾಗಿರುವ ಬೈ ಟು ಲವ್ ಹಾಗೂ ತೆಲಗುದಲ್ಲಿ ಪೆಳ್ಳಿ ಸಂದಡಿಯಲ್ಲಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ ಬೇರೆ ಭಾಷೆಗಳ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಅವರು ರೀಲ್ ಲೈಫ್ನಲ್ಲಿ ಮಾತ್ರವಲ್ಲದೆ, ರಿಯಲ್ ಲೈಫ್ ನಲ್ಲೂ ಹೀರೋಯಿನ್ ಆಗಿದ್ದಾರೆ. ಹೌದು ಇಬ್ಬರು ದಿವ್ಯಾಂಗ ಮಕ್ಕಳನ್ನು ನಟಿ ಶ್ರೀಲೀಲಾ ಅವರು ದತ್ತು ಪಡೆದಿದ್ದಾರೆ. ಮಾತೃಶ್ರೀ ಮನೋ ವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳನ್ನು ಇವರು ದತ್ತು ಪಡೆದಿದ್ದಾರೆ. ಇದರಲ್ಲಿ 8 ತಿಂಗಳ ಗಂಡು ಮಗು ಗುರು ಹಾಗೂ ಶೋಭಿತ ಎನ್ನುವ ಹೆಣ್ಣುಮಗುವನ್ನು ಶ್ರೀಲೀಲಾ ಅವರು ದತ್ತು ಪಡೆದಿದ್ದಾರೆ.

ಅಂದಹಾಗೆ ಫೆಬ್ರವರಿ 18 ರಂದು ರಾಜ್ಯದಾದ್ಯಂತ ರಿಲೀಸ್ ಆಗಲು ರೆಡಿಯಾಗುತ್ತಿರುವ ಶ್ರೀಲೀಲಾ ಅಭಿನಯದ ಬೈ ಟು ಲವ್ ಚಿತ್ರಕ್ಕೂ ಈ ಮಕ್ಕಳಿಗೂ ವಿಶೇಷ ನಂಟಿದೆ. ಈ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದೆಯಂತೆ. ಅಂತಹ ವಿಶೇಷ ವಿಚಾರಗಳು ಈ ಚಿತ್ರದಲ್ಲಿದೆ. ಬೈ ಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರುವ ಶ್ರೀಲಿಲಾ ಅವರಿಗೆ ಮಗುವಿನೊಂದಿಗೆ ವಿಶೇಷ ಬಂಧ ಬೆಳೆದಿದೆ. ಮಾತೃಶ್ರೀ ಮನೋ ವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಅಕ್ಷರಶಹ ಭಾವುಕರಾದರು. ಜೊತೆಗೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿ, ಸ್ಪೂರ್ತಿ ತುಂಬಿದ್ದಾರೆ. ಈ ವೇಳೆಯಲ್ಲಿ ಬೈ ಟು ಲವ್ ಚಿತ್ರದ ನಿರ್ದೇಶಕ ಹರೀಶ್ ಸಂತು ಅವರು ಕೂಡ ಶ್ರೀಲೀಲಾ ಅವರಿಗೆ ಸಾಥ್ ನೀಡಿದ್ದಾರೆ.