ಬಹುಭಾಷಾ ನಟ ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಹೌದು ಬೇರೆ ಭಾಷೆಯ ನಟರಾದರೂ ಕೂಡ ಕನ್ನಡಕ್ಕೆ ತಮ್ಮ ಮಗನನ್ನು ಪರಿಚಯಿಸುತ್ತಿರುವುದು ವಿಶೇಷ. ಆದಿತ್ಯ ವಿಕ್ರಮ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಧ್ರುವ ಅವರು ಮೊದಲು ಕಾಲಿಟ್ಟಿದ್ದರು. ಆದಿತ್ಯ ವಿಕ್ರಮ ಸಿನಿಮಾ, ತೆಲುಗು ಸೂಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ಆಗಿದೆ. 2019 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಅವರು ತಮ್ಮ ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡುಕೊಂಡಿದ್ದರು. ಧ್ರುವ ತಮ್ಮ ಮೊದಲ ಸಿನೆಮಾ ಹದಿಮೂರನೇ ಆನಂದ ವಿಕಟನ್ ಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಮತ್ತು 9ನೇ ಸೌತ್ ಇಂಡಿಯಾ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಗೆ ನಾಮಿನೇಟ್ ಆಗಿದ್ದರು.

ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ ಸಿನಿಮಾದಲ್ಲಿ ದ್ರುವ ಅವರು ಮೊದಲು ಕಾಣಿಸಿಕೊಂಡರೂ ಕೂಡ, ಅವರಿಗೆ ಹೆಸರು ತಂದು ಕೊಟ್ಟಿದ್ದು 2019 ರ ಆನಂದ್ ವಿಕಾಟನ್. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು. ಒಳ್ಳೆಯ ಹೆಸರು ಮಾಡಬೇಕೆಂದು ಧ್ರುವ ಅವರು ಅವರ ತಂದೆ ಚಿಯಾನ್ ವಿಕ್ರಂ ಸಲಹೆಯ ಮೇರೆಗೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ತಂದೆಯ ಹಾಗೆ ಇವರು ಕೂಡ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಬಯಸುತ್ತಿದ್ದಾರೆ. ನಾನು ಚಿತ್ರದಲ್ಲಿ ಅಭಿನಯಿಸಲು 1 ಕೋಟಿ ಜನರೊಟ್ಟಿಗೆ ಮಾತನಾಡಲು ನನ್ನ ತಂದೆಯೇ ಕಾರಣ ಮತ್ತು ಸ್ಫೂರ್ತಿ. ನಾನು ಹೋಪ್ ಕಳೆದುಕೊಂಡಿದ್ದಾಗ ಜೊತೆಗಿದ್ದವರು ಅವರೇ.

ನಾನು ಗಟ್ಟಿಯಾಗಿ ನಿಲ್ಲುವುದಕ್ಕೆ ಬೆನ್ನು ತಟ್ಟಿದವರು ನನ್ನ ತಂದೆ ಎಂದು ದ್ರುವ ಅವರು ತಮ್ಮ ತಂದೆಯನ್ನು ಹಾಡಿಹೊಗಳಿದ್ದಾರೆ. ಸದ್ಯಕ್ಕೆ ದ್ರುವಾ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವುಗಳ ಬಗ್ಗೆ ಶೀಘ್ರದಲ್ಲಿಯೇ ಅನೌನ್ಸ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಧ್ರುವ ಅವರು ಕನ್ನಡದಲ್ಲಿ ಮಹಾಪುರುಷನಾಗಿ ಬರಲು ರೆಡಿಯಾಗುತ್ತಿದ್ದಾರೆ. ಹೌದು ಧ್ರುವ ಅವರ ಮೊದಲ ಕನ್ನಡ ಸಿನಿಮಾಗೆ ಮಹಾಪುರುಷ ಎಂದು ಹೆಸರಿಡಲಾಗಿದೆ. ಮಹಾಪುರುಷ ಚಿತ್ರವು ಮಹಾನ್ ಹೆಸರಿನಲ್ಲಿ ಒಟಿಟಿ ಯಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ವಿಶೇಷತೆ ಎಂದರೆ, ಈ ಚಿತ್ರದಲ್ಲಿ ಧ್ರುವ ವಿಕ್ರಂ ಅವರ ಜೊತೆಗೆ ಅವರ ತಂದೆ ಚಿಯಾನ್ ವಿಕ್ರಂ ಕೂಡ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೊ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.