ನಮ್ಮ ಹಿಂದೂ ಪುರಾಣದ ಪ್ರಕಾರ ಹಲ್ಲಿಯನ್ನು ಶಕುನಗಳ ರಾಜ ಎಂದು ಕರೆಯುತ್ತಾರೆ. ನಿಮ್ಮ ದೇಹದ ಮೇಲೆ ಈ ಹಲ್ಲಿಯು ಬಿದ್ದರೆ ಅದು ಅಪಶುಕನ ಮತ್ತು ಶುಭಕರ ಹೀಗೆ ಎರಡನ್ನೂ ಊಹಿಸಬಹುದಾಗಿದೆ. ಕೆಲವೊಮ್ಮೆ ನೀವು ಮನದಲ್ಲಿ ಏನೋ ಯೋಚಿಸುತ್ತಿರುವಾಗ, ಅಂದು ಕೊಳ್ಳುತ್ತಿರುವಾಗ ಆ ಸಮಯಕ್ಕೆ ಸರಿಯಾಗಿ ಹಲ್ಲಿಯೇನಾದ್ರೂ ಲೊಚ್ಗುಟ್ಟರೆ ಅದು ಆಗೇ ಆಗುತ್ತದೆ ಅದು ಸತ್ಯ ಎಂದು ನಂಬುತ್ತೇವೆ. ಹಾಗಾದರೆ ಹಲ್ಲಿಯು ಮೈ ಮೈಮೇಲಿನ ಯಾವ ಭಾಗಕ್ಕೆ ಬಿದ್ದರೆ ನಿಮಗೆ ಅಪಾಯ ಕಾಡುತ್ತದೆ ಎಂದು ತಿಳಿದುಕೊಳ್ಳವುದು ಅವಶ್ಯಕತೆಯ ಜೊತೆಗೆ ಉಪಯುಕ್ತವಾಗಿದೆ.

ಹಲ್ಲಿಯು ನಿಮ್ಮ ತಲೆಯ ಕೂದಲಿನ ಮೇಲ್ಭಾಗದಲ್ಲಿ ಬಿದ್ದರೆ ಪುರುಷರಿಗೆ ಸುಖ ಪ್ರಾಪ್ತಿಯಾಗುತ್ತದೆ ಇನ್ನು ಮಹಿಳೆಯರಿಗೆ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ. ಹಲ್ಲಿಯು ತಲೆಯ ನಡುಭಾಗದಲ್ಲಿ ಬಿದ್ದರೆ ಪುರುಷರಿಗೆ ಮರಣದ ಆತಂಕ ಕಾಡುತ್ತದೆ. ಇನ್ನು ಸ್ತ್ರೀ ಯರಿಗೂ ಸಹ ಮರಣದ ಕಂಟಕ ಕಾಡುತ್ತದೆ. ಹಣೆಯ ಮೇಲೆ ಹಲ್ಲಿ ಬಿದ್ದರೆ ಪುರುಷರಿಗೆ ಧನಲಾಭ ಆಗುತ್ತದೆ. ಇನ್ನು ಮಹಿಳೆಯರಿಗೆ ದ್ರವ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಕಣ್ಣಿನ ಉಬ್ಬಿನ ಮೇಲೆ ಹಲ್ಲಿ ಬಿದ್ದಾಗ ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಹ ದ್ರವ್ಯ ನಾಶವಾಗುತ್ತದೆ.
ಇನ್ನು ಬಲಗಣ್ಣಿನ ಮೇಲೆ ಹಲ್ಲಿಬಿದ್ದಾಗ ಪುರುಷರಿಗೆ ಶುಭವಾದರೆ ಸ್ತ್ರೀ ಯರಿಗೆ ಅಶುಭವಾಗುತ್ತದೆ. ಎಡಗಣ್ಣಿನ ಮೇಲೆ ಹಲ್ಲಿ ಬಿದ್ದರೆ ಪುರುಷರಿಗೆ ಬಂಧನದ ಭೀತಿ ಎದುರಾಗುವ ಸಾಧ್ಯತೆ ಇರುತ್ತದೆ. ಹೆಣ್ಣು ಮಕ್ಕಳಿಗೆ ದುಃಖದ ಸಂಧರ್ಭ ಏರ್ಪಡುತ್ತದೆ.ಮೂಗಿನ ಮೇಲೆ ಹಲ್ಲಿಯು ಬಿದ್ದರೆ ಪುರುಷರಿಗೆ ಮತ್ತು ಮಹಿಳೆಯರಿಗೆ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

ಬಲ ಭುಜದ ಮೇಲೆ ಹಲ್ಲಿ ಬಿದ್ದರೆ ಪುರುಷರಿಗೆ ಅವರ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತಾರೆ. ಮಹಿಳೆಯರಿಗೆ ಸುಖ ಪ್ರಾಪ್ತಿಯಾಗುತ್ತದೆ. ಕಿವಿಯ ಮೇಲೆ ಹಲ್ಲಿಬಿದ್ದಾಗ ಪುರುಷರಿಗೆ ವ್ಯಾಪರದಲ್ಲಿ ಅಧಿಕ ಲಾಭವಾಗುತ್ತದೆ ಮತ್ತು ಮಹಿಳೆಯರಿಗೆ ಆಯುಶ್ಯಾಭಿವೃದ್ದಿ ಆಗುತ್ತದೆ.
ಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ಪುರುಷರಿಗೆ ತಮ್ಮ ಎಲ್ಲಾ ಇಷ್ಟಾರ್ಥಗಳು ನೆರೆವೇರುತ್ತವೆ. ಮಹಿಳೆಯರಿಗೆ ತಮ್ಮ ಗಂಡಂದಿರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಹಲ್ಲಿಯು ಕಾಲಿನ ಮೇಲೆ ಬಿದ್ದರೆ ಪುರುಷರಿಗೆ ಹಳೆಯ ವೈಷಮ್ಯದ ವಿಚಾರವಾಗಿ ಬಂಧನದ ಭೀತಿ ಭಯ ಕಾಡಲು ಆರಂಭಿಸುತ್ತದೆ.

ನೀವು ಮಲಗಿದ್ದಾಗ ನಿಮ್ಮ ಎದೆಯ ಮೇಲೆ ಹಲ್ಲಿಯೇನಾದರು ಬಿದ್ದರೆ ಆಗ ನಿಮಗೆ ಪುರುಷರಾದರೆ ಸೌಭಾಗ್ಯ ದೊರೆಯುತ್ತದೆ, ಮಹಿಳೆಯರಾದರೆ ದುಃಖವು ನಿಮ್ಮನ್ನು ಭಾದಿಸಲಾರಂಭಿಸುತ್ತದೆ. ಇನ್ನು ಹೀಗೆ ಹಲ್ಲಿಯು ಮೈ ಮೇಲೆ ಬೀಳುವುದರಿಂದ ಶುಭ ಫಲ ಅಶುಭ ಫಲ ಎರಡನ್ನೂ ನೋಡಬಹುದಾಗಿದೆ. ಇದು ನಿಮ್ಮನಿಮ್ಮ ನಂಬಿಕೆಗೆ ಬಿಟ್ಟವಿಚಾರ ಯಾವುದೇ ಹಲ್ಲಿಯು ಬೇಕು ಅಂತಾನೇ ನಿಮ್ಮ ದೇಹದ ಒಂದು ಭಾಗವನ್ನು ಆಯ್ಕೆ ಮಾಡಿಕೊಂಡು ಬೀಳುವುದಿಲ್ಲ, ಕಾಕತಾಳೀಯವಾಗಿ ಅದು ನಿಮ್ಮ ಮೇಲೆ ಅನಿರೀಕ್ಷಿತವಾಗಿ ಬೀಳಬಹುದು ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಅಷ್ಟು ಮಹತ್ವ ಕೊಡುವ ಅಗತ್ಯವಿಲ್ಲ ಭಯ ಪಡಬೇಕಾದ ಅವಶ್ಯಕತೆಯೂ ಇಲ್ಲ ಎಂದು ಒಂದಷ್ಟು ಮಂದಿಯ ಅಭಿಪ್ರಾಯವಾಗಿದೆ.