ಮೈದಾನದಲ್ಲೇ ಅಲ್ಲು ಅರ್ಜುನ್ ಹಾಡಿಗೆ ಡಾನ್ಸ್ ಮಾಡಿದ ಆಸ್ಟ್ರೇಲಿಯಾ ಆಟಗಾರ

ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರನ್ನು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಡಾನ್ಸ್ ಮಾಡಲು ಕೂಗಿದರು, ತಕ್ಷಣ ಆ ಆಟಗಾರ ಡಾನ್ಸ್ ಮಾಡಿ ಅಭಿಮಾನಿಗಳನ್ನು ಮನರಂಜಿಸಿದರು. ನಿಮಗೆ ಗೊತ್ತೇ ಇರುವಂತೆ ಈ ಆಟಗಾರ ಬೇರೆ ಯಾರು ಅಲ್ಲ ಬುಟ್ಟಬೊಮ್ಮ ಎಂಬ ತೆಲುಗು ಹಾಡಿಗೆ ಹೆಜ್ಜೆ ಹಾಕಿದ್ದ ಡೇವಿಡ್ ವಾರ್ನರ್. ಐಪಿಎಲ್ ಸಮಯದಲ್ಲಿ ಖ್ಯಾತ ತೆಲುಗು ಹಾಡಿಗೆ ಟಿಕ್ ಟಾಕ್ ಮಾಡಿ ಸುದ್ದಿಯಾಗಿದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರನ್ನು ಹೈದರಾಬಾದ್ ಅಭಿಮಾನಿಗಳು ಈಗಲೂ ಬುಟ್ಟಬೊಮ್ಮ ವಾರ್ನರ್ ಎಂದೇ ಕರೆಯುತ್ತಾರೆ. ಅಲ್ಲು ಅರ್ಜುನ್ ನಟನೆಯ ಈ ಬುಟ್ಟಬೊಮ್ಮ ಹಾಡು ಯೌಟ್ಯೂಬ್ ಅಲ್ಲಿ ಅತೀಹೆಚ್ಚು ವೀಕ್ಷಣೆ ಹೊಂದಿದೆ.

ಐಪಿಎಲ್ ಸಂದರ್ಭದಲ್ಲಿ ಬುಟ್ಟಬೊಮ್ಮ ವಾರ್ನರ್ ಎಂದೇ ಖ್ಯಾತಿಯಾಗಿರುವ ಡೇವಿಡ್ ವಾರ್ನರ್ ಅವರು ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಬೌಂಡರಿ ಸಮೀಪ ನಿಂತಿದ್ದಾಗ ಕೂಗಿದ ಭಾರತೀಯ ಅಭಿಮಾನಿಗಳು ಡೇವಿಡ್ ವಾರ್ನರ್ ಅವರನ್ನು ಡಾನ್ಸ್ ಮಾಡಲು ಕೇಳಿಕೊಂಡರು, ಇದಕ್ಕೆ ಪ್ರತಿಕ್ರಿಯಿಸಿದ ವಾರ್ನರ್ ಕೂಡಲೇ ಎಂದಿನಂತೆ ಪ್ರಸಿದ್ದವಾಗಿರುವ ಬುಟ್ಟಬೊಮ್ಮ ಹಾಡಿನ ಹೆಜ್ಜೆಯನ್ನು ಹಾಕಿದರು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಖುಷಿಯಿಂದ ಶೇರ್ ಮಾಡುತ್ತಿದ್ದಾರೆ. ವಾರ್ನರ್ ಅವರು ಈಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರು.

%d bloggers like this: