ಮೈದಾನದಲ್ಲೇ ಕೆಎಲ್ ರಾಹುಲ್ಗೆ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್, ಕಾರಣ ಏನ್ ಗೊತ್ತೇ

ಮೊನ್ನೆ ಆರಂಭವಾದ ಭಾರತ ಹಾಗು ಆಸ್ಟ್ರೇಲಿಯಾ ನಡುವಿನ ಏಕದಿನ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಅಂತರದಿಂದ ಗೆಲುವು ಪಡೆದಿದೆ. ಈ ಪಂದ್ಯದಲ್ಲಿ ನಮ್ಮ ಆರ್ಸಿಬಿ ತಂಡದ ಆಟಗಾರ ಆರನ್ ಫಿಂಚ್ ಅವರು ಭರ್ಜರಿ ಶತಕ ಬಾರಿಸಿದ್ದಾರೆ, ಇದೆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಕೇವಲ ಇಪ್ಪತ್ತು ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಎಲ್ಲರೂ ಬೆರಗಾಗುವಂತೆ ಮಾಡಿದರು. ಕಳೆದ ತಿಂಗಳಷ್ಟೇ ಅಂತ್ಯವಾದ ಐಪಿಎಲ್ ಅಲ್ಲಿ ಮ್ಯಾಕ್ಸ್ ವೆಲ್ ಅವರು ಕಿಂಗ್ಸ್ ಪಂಜಾಬ್ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ, ಆದರೆ ಈ ವರ್ಷದ ಐಪಿಎಲ್ ಅಲ್ಲಿ ಮ್ಯಾಕ್ಸ್ ವೆಲ್ ಅವರು ಪಂಜಾಬ್ ಪರವಾಗಿ ಒಟ್ಟು ಹದಿಮೂರು ಪಂದ್ಯ ಆಡಿ ಕೇವಲ ನೂರು ರನ್ ಗಳಿಸಿದ್ದಾರೆ. ಐಪಿಎಲ್ ಅಲ್ಲಿ ಮ್ಯಾಕ್ಸ್ ವೆಲ್ ಅವರ ಕಳಪೆ ಪ್ರದರ್ಶನ ನೋಡಿ ಪಂಜಾಬ್ ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರಿಗೂ ಸಹ ಬೇಸರ ತರಿಸಿತ್ತು.

ಭಾರತ ವಿರುದ್ದದ ಮೊನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ಅವರ ಈ ರೀತಿ ಆಟ ನೋಡಿದ ಪಂಜಾಬ್ ಅಭಿಮಾನಿಗಳು ಮ್ಯಾಕ್ಸಿ ಅವರ ಮೇಲೆ ಸಿಟ್ಟಾಗಿದ್ದಾರೆ, ಅಷ್ಟೇ ಏಕೆ ಮ್ಯಾಕ್ಸಿ ಅವರ ಈ ಆಟ ಹಿಂದೆಯೇ ನಿಂತಿದ್ದ ಕೆಎಲ್ ರಾಹುಲ್ ಅವರಿಗೂ ಬೇಸರ ತರಿಸಿದೆ. ಈ ಬಗ್ಗೆ ಟ್ವಿಟ್ಟರ್ ಅಲ್ಲಿ ಮ್ಯಾಕ್ಸ್ ವೆಲ್ ಅವರು ಅಭಿಮಾನಿ ಒಬ್ಬನಿಗೆ ಉತ್ತರ ನೀಡಿದ್ದು ನಾನು ಬ್ಯಾಟಿಂಗ್ ಆಡುವಾಗಲೇ ಕೆಎಲ್ ರಾಹುಲ್ ಅವರಿಗೆ ಕ್ಷಮೆ ಕೇಳಿದ್ದೇನೆ ಈ ವಿಷಯವಾಗಿ ಎಂದು ಹಾಸ್ಯವಾಗಿ ಉತ್ತರಿಸಿದ್ದಾರೆ. ಇನ್ನು ಈವರ್ಷದ ಐಪಿಎಲ್ ಅಲ್ಲಿ ಆರಂಭದಲ್ಲೇ ಕಳಪೆ ಪ್ರದರ್ಶನ ತೋರಿದ ಪಂಜಾಬ್ ತಂಡ ಸೆಮಿ ಫೈನಲ್ಗೆ ಬರುವಲ್ಲಿ ವಿಫಲವಾಯಿತು, ಆದರೆ ಕೆಎಲ್ ರಾಹುಲ್ ಅವರು ಪ್ರತಿ ಪಂದ್ಯದಲ್ಲೂ ತಮ್ಮ ಕ್ಯಾಪ್ಟನ್ ಆಟವನ್ನು ಆಡಿದ್ದರು.

%d bloggers like this: