ಈ ಭೂಮಿಯ ಮೇಲೆ ಯಾವಾಗ ಯಾರಿಗೆ ಯಾರ ಮೇಲೆ ಹೇಗೆ ಪ್ರೀತಿ ಹುಟ್ಟುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹಾಗೆಯೇ ಕೆಲವು ಪ್ರೇಮಿಗಳು ತಮ್ಮ ಪ್ರೇಮ ವಿಷಯವನ್ನು ವಿಭನ್ನವಾಗಿ ಹೇಳಬೇಕು ಎಂದು ತಿಂದಳುಗತ್ತಲೆ ಯೋಚನೆ ಮಾಡುವ ಉದಾಹರಣೆ ಗಳನ್ನು ಕೂಡ ನಾವು ನೋಡಿದ್ದೇವೆ. ಅದೇ ರೀತಿ ಇತ್ತೀಚಿಗೆ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಂದ್ಯಕ್ಕಿಂತಲೂ ಹೆಚ್ಚಾಗಿ ಪಂದ್ಯಾಟದ ನಡುವೆ ನಡೆದ ಘಟನೆಯೊಂದು ಹೆಚ್ಚಿಗೆ ವೈರಲ್ ಆಗಿತ್ತು. ಹೌದು ಎರಡನೇ ಏಕದಿನ ಪಂದ್ಯ ನಡೆದ ಸಂದರ್ಭದಲ್ಲಿ ಭಾರತೀಯ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ಹುಡುಗಿಗೆ ಪ್ರಪೋಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದಾದ ನಂತರ ಆ ಹುಡುಗ ಯಾರೆಂದು ಎಲ್ಲರಲ್ಲೂ ಸಹಜವಾಗಿಯೇ ಕುತೂಹಲ ಉಂಟಾಗಿತ್ತು.

ಆದರೆ ಆ ಯುವಕ ಯಾರು ಎಂಬ ಸುದ್ದಿ ಈಗ ತಿಳಿದುಬಂದಿದೆ. ಹೌದು ಅಚ್ಚರಿ ಎಂಬಂತೆ ಆತ ನಮ್ಮ ಬೆಂಗಳೂರಿಗನೆ ಎಂದು ತಿಳಿದುಬಂದಿದೆ. ಆತ ಬೆಂಗಳೂರಿನಲ್ಲಿ ಶಿಕ್ಷಣವನ್ನು ಪಡೆದ ದಿಪೆನ್ ಮಂಡಲಿಯ ಎಂಬ ವ್ಯಕ್ತಿ. ಅವರು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದು ಸದ್ಯಕ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಕಂಪನಿ ಒಂದರಲ್ಲಿ ಕಾರ್ಯ ನಿವಹಿಸುತ್ತಿದ್ದಾರೆ. ಅವರು ತಮ್ಮ ಬಹುದಿನಗಳ ಆಸ್ಟ್ರೇಲಿಯಾದ ಪ್ರೀತಿಯ ಗೆಳತಿಗೆ ಹೇಗೆ ಪ್ರಪೋಸ್ ಮಾಡಬೇಕು ಎಂಬ ಚಿಂತೆಯಲ್ಲಿ ಇದ್ದರಂತೆ.

ಕುಟುಂಬ ಸದಸ್ಯರ ಮುಂದೆ ಮಾಡಬೇಕು ಎಂಡಿಕೊಂಡಿದ್ದರಂತೆ ಆದರೆ ಗಡಿ ಸಮಸ್ಯೆಗಳ ಕಾರಣ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಪಂದ್ಯದ ಹಿಂದಿನ ದಿನ ಸಿಡ್ನಿ ಕ್ರಿಕೆಟ್ ಮೈದಾನದ ಸಿಬ್ಬಂದಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ದೀಪಿನ್ ಅವರ ಯೋಜನೆ ಅಂದುಕೊಂಡಂತೆ ಆಯಿತಂತೆ. ಈ ವಿಷಯವನ್ನು ಸ್ವತಃ ಅವರೇ ಹಂಚಿಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳಾದ ನಾವಿಬ್ಬರು ಕ್ರಿಕೆಟ್ ವಿಷಯ ಬಂದರೆ ನಮ್ಮ ವಿಚಾರ ಮತ್ತು ನಮ್ಮ ಬೆಂಬಲ ನಮ್ಮ ನಮ್ಮ ದೇಶಗಳಿಗೆ ಮೀಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.