ಕನ್ನಡದ ನಟ ಹಾಗೂ ನಿರ್ದೇಶಕ ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಶೋಗೆ ಕನ್ನಡಿಗರು ಸುಮಾರು ವರ್ಷಗಳಿಂದ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ, 2015ರಲ್ಲಿ ಪ್ರಾರಂಭವಾದ ಈ ಶೋ ಅದೇಷವರ್ಷದಂದು ಕನ್ನಡ ಕಿರುತೆರೆಯಲ್ಲಿಯೇ ಅತ್ಯಧಿಕ ಪಿಆರ್ಪಿ ಗಳಿಸಿ ಬಹುದೊಡ್ಡ ಸುದ್ದಿ ಮಾಡಿತ್ತು. ಈಗ ಸದ್ಯಕ್ಕಿರುವ ವಿಶೇಷ ಸುದ್ದಿ ಏನೆಂದರೆ ಸೃಜನ್ ಲೋಕೇಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಫೋಟೋವನ್ನು ಹಾಕಿದ್ದು ಇದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈ ಫೋಟೋ ಅಲ್ಲಿ ಸೃಜನ್ ಲೋಕೇಶ್ ಅವರ ಜೊತೆ ಇನ್ನೊಬ್ಬ ಹೊಸ ಮಜಾ ಟಾಕೀಸ್ ಪಾತ್ರದಾರಿ ಬಂದಿದ್ದಾರೆ. ಸೃಜನ್ ಲೋಕೇಶ್ ಅವರು ಫೋಟೋ ಹಾಕಿ ಯಾರಿದು ಹೊಸ ಎಂಟ್ರಿ ಎಂಬ ಅಡಿಬರಹ ಕೊಟ್ಟಿದ್ದಾರೆ ಅಂದರೆ ಸೃಜನ್ ಅವರು ಅಭಿಮಾನಿಗಳಿಗೆ ಇವರು ಯಾರಿರಬಹುದು ಎಂದು ಗೆಸ್ ಮಾಡಲು ಹೇಳಿದ್ದಾರೆ.

ನೀವು ಹಿಂದಿಯಲ್ಲಿ ಬರುವ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮ ಶೋ ನೋಡಿರುತ್ತೀರಿ, ಅಲ್ಲಿ ಬರುವ ವಿಶೇಷ ಪಾತ್ರದ ಬಗ್ಗೆ ನಿಮಗೆ ಗೊತ್ತು ಯಾರೆಂದರೆ ಸುನಿಲ್ ಗ್ರೋವರ್ ಎಂಬ ಕಲಾವಿದ ಡಾಕ್ಟರ್ ವೇಷದಲ್ಲಿ ಬಂದು ನಕ್ಕು ನಗಿಸುತ್ತಾರೆ. ಅದೇ ರೀತಿಯಂತೆ ಕನ್ನಡದಲ್ಲಿಯೂ ಕೂಡ ಸುನಿಲ್ ಗ್ರೋವರ್ ಪಾತ್ರವನ್ನು ಇಲ್ಲಿಗೆ ತಂದಿದ್ದಾರೆ ಎನಿಸುತ್ತಿದೆ ಯಾಕೆಂದರೆ ಸೃಜನ್ ಲೋಕೇಶ್ ಅವರು ಹಾಕಿರುವ ಹೊಸ ಕಲಾವಿದ ಕೂಡ ಡಾಕ್ಟರ್ ವೇಷದಲ್ಲಿದ್ದ ಮುಖ ಸರಿಯಾಗಿ ಕಾಣಿಸಿಲ್ಲ. ಆದರೆ ನಿಮಗೆ ಕನ್ನಡ ನಟರ ಮುಖ ಪರಿಚಯವಿದ್ದರೆ ನೀವು ಹೊಸ ಕಲಾವಿದನನ್ನು ಬೇಗನೆ ಕಂಡು ಹಿಡಿಯುತ್ತೀರಿ. ಹೌದು ತೀಕ್ಷಣವಾಗಿ ಫೋಟೋ ನೋಡಿದರೆ ಡಾಕ್ಟರ್ ವೇಷದಲ್ಲಿರುವ ಈ ಹೊಸ ಕಲಾವಿದ ಸಿಲ್ಲಿಲಲ್ಲಿ ಖ್ಯಾತಿಯ ರವಿಶಂಕರ್ ಗೌಡ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.



ಅಸಲಿಗೆ ರವಿಶಂಕರ್ ಗೌಡ ಅವರ ವೇಷಭೂಷಣಗಳನ್ನು ನೋಡಿದರೆ ಸುನಿಲ್ ಗ್ರೋವರ್ ಅವರ ಪಾತ್ರ ದಂತೆ ಕಾಣುತ್ತದೆ ಆದರೆ ಇದಕ್ಕೆಲ್ಲಾ ಉತ್ತರ ಅವರು ಬಂದ ಮೇಲೆ ಗೊತ್ತಾಗುವುದು, ಇವರು ಇನ್ನುಮೇಲೆ ಪ್ರತಿಸಲವೂ ಮಜಾ ಟಾಕೀಸ್ ಅಲ್ಲಿ ಭಾಗವಹಿಸುತ್ತಾರಾ ಇಲ್ಲವೇ ಬರೀ ಒಂದು ಎಪಿಸೋಡಲ್ಲಿ ಬಂದು ಹೋಗುತ್ತಾರಾ ಎಂಬುದು ಮುಂದೆ ಗೊತ್ತಾಗಲಿದೆ. ಏನೇ ಆಗಲಿ ರವಿಶಂಕರ್ ಅವರು ಸಿಲ್ಲಿಲಲ್ಲಿ ಯಲ್ಲಿ ಡಾಕ್ಟರ್ ಪಾತ್ರವಹಿಸಿ ತುಂಬಾ ಮೆಚ್ಚುಗೆ ಪಡೆಯುತ್ತಿದ್ದರು ಅದೇ ರೀತಿ ಮಜಾ ಟಾಕೀಸ್ ಅಲ್ಲಿಯೂ ಕೂಡ ಈ ಡಾಕ್ಟರ್ ರವಿಶಂಕರ್ ಅವರು ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ತಯಾರಾಗಿದ್ದಾರೆ.