ಮೇಕಪ್ ಇಲ್ಲದ ನಿಮ್ಮ ಫೋಟೋ ತೋರಿಸಿ ಎಂದವನಿಗೆ ಹೀಗೆ ಉತ್ತರ ಕೊಟ್ಟ ಸಂಜನಾ ಚಿದಾನಂದ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುವುದು ಹಾಗೂ ಪ್ರಶ್ನೆ ಕೇಳುವುದು ಸಾಮಾನ್ಯ, ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಪರ್ಧಿಯಾಗಿ ಬಂದಿದ್ದ ಕನ್ನಡ ಕಿರುತೆರೆಯ ನಟಿ ಸಂಜನಾ ಚಿದಾನಂದ್ ಅವರು ಕರ್ನಾಟಕದ ಜನತೆಗೆ ಪರಿಚಿತ, ತಮ್ಮ ಸೌಂದರ್ಯ ಹಾಗೂ ನಗುವಿನ ಮೂಲಕ ನಟಿ ಸಂಜನಾ ಚಿದಾನಂದ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಜನಾ ಚಿದಾನಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಕ್ರಿಯರಾಗಿದ್ದಾರೆ ಸಂಜನಾ ಮೇಲಿಂದ ಮೇಲೆ ಫೋಟೋಗಳನ್ನು ಹಾಕುತ್ತಾ ಇರುತ್ತಾರೆ. ಬಿಗ್ ಬಾಸ್ ಇಂದ ಖ್ಯಾತಿಪಡೆದ ಸಂಜನಾ ಅವರು ಸದ್ಯ ಜೀ ಕನ್ನಡ ಚಾನೆಲ್ ನಲ್ಲಿ ಬರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಈ ನಟಿಯು ನಟಿಯ ಪಾತ್ರವನ್ನೇ ಮಾಡುತ್ತಿದ್ದಾರೆ. ನಿನ್ನೆ ಶನಿವಾರದಂದು ವೀಕೆಂಡ್ ಸಮಯದಲ್ಲಿ ನಟಿ ಸಂಜನಾ ಚಿದಾನಂದ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೆ ಉತ್ತರಗಳನ್ನು ಹಂಚಿಕೊಂಡರು. ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದಿತ್ತು, ಆಗ ಅಭಿಮಾನಿಗಳ ಎಲ್ಲ ಪ್ರಶ್ನೆಗೆ ನಟಿ ಸಂಜನಾ ಅವರು ಉತ್ತರ ಕೊಟ್ಟರು. ಕೆಲವು ಅಭಿಮಾನಿಗಳು ಆಶ್ಚರ್ಯಕರ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದರು ಹಾಗೂ ಸಂಜನಾ ಅವರೆಲ್ಲರಿಗೂ ಉತ್ತರ ನೀಡಿದ್ದಾರೆ. ಒಬ್ಬ ಅಭಿಮಾನಿ ‘ನೀವು ಮೇಕಪ್ ಹಾಕದೆ ಇರುವ ಫೋಟೋವನ್ನು ತೋರಿಸಿ’ ಎಂದು ಪ್ರಶ್ನೆ ಕೇಳಿದ.

ಈ ಪ್ರಶ್ನೆಗೆ ತಾವು ಮೇಕಪ್ ಹಚ್ಚಿದೆ ಇರುವ ಫೋಟೋವನ್ನು ಹಾಕಿ ಸ್ಮೈಲ್ ಕೊಟ್ಟಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನು ಸಕಾರಾತ್ಮಕ ಭಾವನೆಗಳಿಂದ ನೋಡುವ ಸಂಜನಾ ಅವರು ಮೇಕಪ್ ಇಲ್ಲದೆ ಇರುವ ಫೋಟೋ ಕೂಡ ಅಪ್ ಲೋಡ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ನೀವು ಯಾರನ್ನಾದರೂ ಲವ್ ಮಾಡುತ್ತಿದ್ದೀರಾ ಇಲ್ಲ ಇನ್ನು ಸಿಂಗಲ್ ಆಗಿ ಇದ್ದೀರಾ ಎಂದು ಕೇಳಿದ, ಇದಕ್ಕೆ ಸಂಜನಾ ಅವರು ಸೀಕ್ರೆಟ್ ಎಂದು ಹೇಳಿದರು. ಹೀಗೆ ಫೋಟೋ ಮೂಲಕ ಅಭಿಮಾನಿ ಕೇಳಿದ ಪ್ರಶ್ನೆಗೆ ಸಂಜನಾ ಚಿದಾನಂದ ಅವರು ಉತ್ತರಿಸಿದರು.

%d bloggers like this: