ಮಕ್ಕಳ ಚಿಕಿತ್ಸೆಗೆ ಬರೋಬ್ಬರಿ 67 ಲಕ್ಷ ಹಣ ನೀಡಿದ ಸುಪ್ರಸಿದ್ದ ನಟಿ

ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದ ಬಾಲಿವುಡ್ ನಟಿ ಕಮ್ ಮಾಡೆಲ್ ಆಗಿರುವ ಊರ್ವಶಿ ರೌಟೆಲಾ ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ಫ್ಯಾಶನ್ ಶೋ ಮೂಲಕವೇ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಊರ್ವಶಿ ರೌಟೆಲಾ ಅವರು ಟಾಪ್ ರ್ಯಾಂಕ್ ನ ರೂಪದರ್ಶಿಯರಲ್ಲಿ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕೇವಲ ಸಿನಿಮಾ , ಮಾಡೆಲ್ ಅಷ್ಟೇ ಅಲ್ಲದೆ ಊರ್ವಶಿ ರೌಟೆಲಾ ಅವರು ಅನೇಕ ಪ್ರತಿಷ್ಟಿತ ಆಭರಣ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಮೂಲಕವೇ ಕೋಟ್ಯಾಂತರ ರುಪಾಯಿಗಳ ಆದಾಯ ಗಳಿಸುವ ಊರ್ವಶಿ ಅವರು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಶಿ ಅವರು ಹಣ, ರೂಪ ಸೌಂದರ್ಯದಲ್ಲಿ ಎಷ್ಟು ಶ್ರೀಮಂತರೋ ಅಷ್ಟೇ ಅವರು ತಮ್ಮ ಗುಣ ಸ್ವಭಾವದಲ್ಲಿಯೂ ಕೂಡ ಶ್ರೀಮಂತರು ಎಂದು ಹೇಳಬಹುದು. ಅದಕ್ಕೆ ಅವರು ಮಾಡಿರುವ ಅನೇಕ ಸಾಮಾಜಿಕ ಸೇವೆಗಳೇ ಉತ್ತಮ ಉದಾಹರಣೆ ಎಂದು ಹೇಳಬಹುದು.

ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಊರ್ವಶಿ ಅವರು ಅನೇಕ ಕಲ್ಯಾಣ ಕಾರ್ಯಕ್ರಮ ಮಾಡಿದ್ದರು. ಇದೀಗ ಸ್ಮೈಲ್ ಟ್ರೈನ್ ಎಂಬ ಎನ್.ಜಿ.ಓ ಸಂಸ್ಥೆಯ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಈ ಸ್ಮೈಲ್ ಟ್ರೈನ್ ಎನ್.ಜಿ.ಓ ಸಂಸ್ಥೆಯು ಕಳೆದ ಇಪ್ಪತ್ತೆರಡು ವರ್ಷಗಳಿಂದ ಜಗತ್ತಿನಾದ್ಯಂತ ಸರಿ ಸುಮಾರು ಹದಿನೈದು ಲಕ್ಷ ಮಕ್ಕಳಿಗೆ ಸೀಳು ತುಟಿ ಶಸ್ತ್ರ ಚಿಕಿತ್ಸೆ ಮಾಡಿಸಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆಯನ್ನ ದುಪ್ಪಟಾಗಿಸುವ ಗುರಿಯನ್ನ ಸಂಸ್ಥೆ ಹೊಂದಿದೆಯಂತೆ. ಇದರ ಹಿನ್ನೆಲೆಯಲ್ಲಿ ಊರ್ವಶಿ ರೌಟೆಲಾ ಅವರು ಸಂಸ್ಥೆಯ ರಾಯಭಾರಿ ಆಗುವುದರ ಜೊತೆಗೆ ಅವರು ಕೂಡ ವೈಯಕ್ತಿಕವಾಗಿ ಈ ಸಂಸ್ಥೆಗೆ ಬರೋಬ್ಬರಿ ಅರವತ್ತೇಳು ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣದ ಮೊತ್ತವು ಸರಿ ಸುಮಾರು ಇನ್ನೂರು ಮಕ್ಕಳ ಸೀಳು ತುಟಿಯ ಶಸ್ತ್ರ ಚಿಕಿತ್ಸೆಗೆ ಸಹಾಯಕವಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ವಿಚಾರವನ್ನು ಊರ್ವಶಿ ಅವರು ಸಂಸ್ಥೆಯ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಊರ್ವಶಿ ಅವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

%d bloggers like this: