ಮಕ್ಕಳು ಚುರುಕಾಗಿ, ಆರೋಗ್ಯವಾಗಿ ಬೆಳೆಯಬೇಕಂದರೆ ಗರ್ಭಿಣಿ ಮಹಿಳೆಯರು ಇದನ್ನು ಅನುಸರಿಸಿ

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರು ತಮಗಿಂತ ತಮ್ಮ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತನ್ನ ಮಗು ಆರೋಗ್ಯಕರವಾಗಿ, ಸುಂದರವಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಜನಿಸಬೇಕು ಎಂದು ತಮ್ಮ ಜಿವನ ಶೈಲಿಯ ಜೊತೆಗೆ ಆಹಾರ ಕ್ರಮವನ್ನು ಸಹ ಬದಲಾಯಿಸಿಕೊಳ್ಳುತ್ತಾರೆ. ಗರ್ಭದಲ್ಲಿರುವ ಆ ಮಗುವಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮಗುವಿನ ಬಗ್ಗೆ ಪ್ರತಿಯೊಬ್ಬ ತಾಯಿಯು ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನನ್ನ ಮಗು ದೊಡ್ಡ ವ್ಯಕ್ತಿಯಾಗಬೇಕು, ಸಾಧಕನಾಗಬೇಕು ಎಂದು ಇನ್ನು ಹುಟ್ಟದ ಮಗುವಿನ ಬಗ್ಗೆ ಏನೆಲ್ಲಾ ಕನಸು ಕಂಡರು ಕೆಲವೊಮ್ಮೆ ಆ ಕನಸುಗಳೆಲ್ಲಾ ಭಗ್ನವಾಗಿಬಿಡುತ್ತವೆ.

ಏಕೆಂದರೆ ಜನಿಸುವ ಕೆಲವು ಮಕ್ಕಳು ನ್ಯುನತೆಯನ್ನು ಹೊಂದಿರುತ್ತವೆ, ಅಂಗವೈಕಲ್ಯ ಸಮಸ್ಯೆ ಹೊತ್ತು ಜಗತ್ತಿಗೆ ಕಾಲಿಡುತ್ತದೆ. ಇದರಿಂದ ಅನೇಕ ತಾಯಂದಿರು ಸಂಕಟಪಡುತ್ತಾರೆ. ಈ ವಿಚಾರವಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ಗರ್ಭಕ್ಕೆ ಒಂದಕ್ಕೊಂದು ಸಂಬಂಧವಿದೆ. ಗರ್ಭದಲ್ಲಿರುವ ಮಗುವಿನ ಮೇಲೆ ಗ್ರಹವು ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತಾರೆ.

ಹಾಗಾದರೆ ಈ ಗರ್ಭಿಣಿ ಮಹಿಳೆಯರ ಗರ್ಭಾವಸ್ಥೆಯ ಯಾವ ತಿಂಗಳಿನಲ್ಲಿ ಯಾವ ಗ್ರಹಗಳು ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯುವುದಾದರೆ ಮೊದಲ ತಿಂಗಳಿನಲ್ಲಿ ಶುಕ್ರ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಶುಕ್ರಗ್ರಹವು ದುರ್ಬಲನಾಗಿದ್ದರೆ ಅಂತಹ ಸಮಯದಲ್ಲಿ ಶುಕ್ರನಿಗೆ ಸಂಬಂಧಪಟ್ಟಂತಹ ಯಾವುದೇ ವಸ್ತುಗಳನ್ನು ದಾನ ಮಾಡಬೇಡಿ. ಇನ್ನೂ ಶುಕ್ರಗ್ರಹನು ನಿಮ್ಮ ಮಗುವಿನ ಮೇಲೆ ನೇರದೃಷ್ಠಿ ಬೀರಿದರೆ, ಆ ಮಗುವು ತುಂಬಾ ಸುಂದರವಾಗಿ ಇರುತ್ತದೆ.

ಎರಡನೇ ತಿಂಗಳಲ್ಲಿ ಗರ್ಭಿಣಿಯರು ಕೆಂಪು ಬಟ್ಟೆಯನ್ನು ಧರಿಸಿದರೆ ಶುಭವಾಗಿರುತ್ತದೆ ಏಕೆಂದರೆ ಎರಡನೇಯ ತಿಂಗಳಲ್ಲಿ ಮಂಗಳ ಗ್ರಹ ಪ್ರಭಾವ ಬೀರುತ್ತದೆ. ಮೂರನೇ ತಿಂಗಳು ಗುರು ಪ್ರಭಾವ ಹೆಚ್ಚಾಗಿರುವುದರಿಂದ ಆದಷ್ಟು ಗರ್ಭಿಣಿ ಮಹಿಳೆಯರು ಹಳದಿ ಬಟ್ಟೆಯನ್ನು ಧರಿಸಿದರೆ ಗುರುಬಲ ಹೆಚ್ಚಾಗಿ, ಅಪಾಯದಿಂದ ದೂರ ಆಗಿ ಸುರಕ್ಷಣೆಯು ಹೆಚ್ಚಾಗಿರುತ್ತದೆ. ನಾಲ್ಕನೆ ತಿಂಗಳು ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ ಆದ್ದರಿಂದ ಸೂರ್ಯನಿಗೆ ನಮಸ್ಕಾರ ಮಾಡುವುದರ ಜೊತೆಗೆ ಅವನಿಗೆ ಇಷ್ಟವಾಗುವಂತಹ ಕೆಲಸವನ್ನು ನೀವು ಮಾಡಿದರೆ ನಿಮ್ಮ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.

ಐದನೇ ತಿಂಗಳು ಇದನ್ನು ಚಂದ್ರ ಗ್ರಹ ಪ್ರಭಾವ ಬೀರುತ್ತಾನೆ. ಚಂದ್ರನು ತಾಯಿ ಮತ್ತು ಮನಸ್ಸಿನ ಗ್ರಹವಾಗಿರುತ್ತದೆ. ಆದ್ದರಿಂದ ಈ ತಿಂಗಳಲ್ಲಿ ಸೂಕ್ಷ್ಮತೆ ಅಗತ್ಯವಾಗಿರುತ್ತದೆ.

ಆರನೆಯ ತಿಂಗಳು ಶನಿ ಗ್ರಹ ಪ್ರಭಾವ ಹೆಚ್ಚಾಗಿರುತ್ತದೆ ಆದ್ದರಿಂದ ಆ ತಿಂಗಳು ಗರ್ಭಿಣಿಯರು ಜಾಗೃತಿಯಿಂದ ಕೆಲಸ ಮಾಡಬೇಕು, ಏಳನೇ ತಿಂಗಳು ಬುಧ ಗ್ರಹ ಪ್ರಭಾವ ವಿರುವುದರಿಂದ ಬುಧ ಹಾಗೂ ಶನಿ ಗ್ರಹ ಬಲ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇನ್ನು ಎಂಟು ಮತ್ತುಒಂಭತ್ತೇಯ ತಿಂಗಳು ಗರ್ಭಿಣಿಯರು ಆದಷ್ಟು ಸೂರ್ಯನ ಕಿರಣಗಳಿಗೆ ಒಳಗಾಗಬೇಕು ಅಂದರೆ ತಮ್ಮ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಬಿಸಿಲು ಕಾಯಬೇಕು. ಇದರಿಂದ ಜನಿಸುವ ಮಕ್ಕಳ ಮೇಲೆ ಸುರ್ಯನ ಪ್ರಭಾವ ಬೀರಿ, ಆ ಮಕ್ಕಳು ಪ್ರತಿಭಾವಂತ ಮತ್ತು ಬಲಶಾಲಿಯಾಗಿದ್ದು ಜೀವನವನ್ನು ಯಶಸ್ವಿಯಾಗಿ ಸಾಧಿಸುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.

%d bloggers like this: