ಮಲಯಾಳಂ ಚಿತ್ರ ನಿರ್ಮಿಸಿ ಕೇರಳ ರಾಜ್ಯ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ನಿರ್ಮಾಪಕ

ಇತ್ತೀಚೆಗೆ ಕೆಲವು ವರ್ಷಗಳೀಂದೀಚೆಗೆ ಕನ್ನಡ ಚಿತ್ರರಂಗ ಮತ್ತೇ 80-90ರ ದಶಕದಂತೆ ಸಖತ್ ಶೈನ್ ಆಗುತ್ತಿದೆ. ಅದಕ್ಕೆ ಉದಾಹರಣೆಯಾಗಿ ಕನ್ನಡ ಸಿನಿಮಾಗಳು ದೇಶ ವಿದೇಶಗಳವರೆಗೂ ಮೆಚ್ಚುಗೆ ಪಡೆದುಕೊಂಡು ಪರಭಾಷೆಗೂ ಕೂಡ ರಿಮೇಕ್ ಆಗುತ್ತಿವೆ. ಅಂತೆಯೇ ಕನ್ನಡದ ನಟನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ಪರಭಾಷೆಯ ಸಿನಿಮಾಗಳಲ್ಲಿ ಕನ್ನಡದ ನಟ ನಟಿಯರು ನಟಿಸಿ ಸೈ ಎನಿಸಿಕೊಂಡು ಅವಾರ್ಡ್ ಕೂಡ ಪಡೆದುಕೊಂಡಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು ಮಲೆಯಾಳಂ ಸಿನಿಮಾವೊಂದನ್ನ ನಿರ್ಮಾಣ ಮಾಡಿ ರಾಜ್ಯ ಪ್ರಶಸ್ತಿಯನ್ನ ಕೂಡ ಪಡೆದಿದ್ದಾರೆ.

ಹೌದು ಸ್ಯಾಂಡಲ್ ವುಡ್ ಪ್ಯಾಶನೆಟ್ ಸಿನಿಮಾ ನಿರ್ಮಾಪಕರಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಒಬ್ಬರು. ಕನ್ನಡದಲ್ಲಿ ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಹಂಬಲ್ ಪೊಲಿಟಿಶಿಯನ್ ನಾಗರಾಜ್, ಕಥೆಯೊಂದು ಶುರುವಾಗಿದೆ ಹೀಗೆ ಸಾಲು ಸಾಲು ಸೂಪರೊ ಹಿಟ್ ಚಿತ್ರಗಳನ್ನ ನೀಡಿದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಮೊದಲ ಬಾರಿಗೆ ಮಲೆಯಾಳಂ ನಿರ್ದೇಶಕ ಸೆನ್ನಾ ಹೆಗ್ಡೆ ಅವರೊಂದಿಗೆ ತಿಂಗಳಾಯಿಚ ನಿಶ್ಚಯಂ ಎಂಬ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರೇ ಹೇಳುವಂತೆ ಈ ಸಿನಿಮಾವನ್ನು ಕನ್ನಡದಲ್ಲೇ ಮಾಡಬೇಕಾಗಿತ್ತಂತೆ. ಆದರೆ ಈ ಚಿತ್ರದ ಕಥೆ ಕೇರಳ ಪ್ರಾದೇಶಿಕತೆಗೆ ಹೊಂದುವುದರಿಂದ ಮಲೆಯಾಳಂನಲ್ಲಿ ನಿರ್ಮಾಣ ಮಾಡಿದ್ದಾರಂತೆ.

ಸೆನ್ನಾ ಹೆಗ್ಡೆ ಅವರ ಕಥೆ ಬರೆದು ನಿರ್ದೇಶನ ಮಾಡಿದ ಈ ತಿಂಗಳಾಯಿಚ ನಿಶ್ಚಯಂ ಚಿತ್ರಕ್ಕೆ 51ನೇ ಕೇರಳ ರಾಜ್ಯ ಪ್ರಶಸ್ತಿಯಲ್ಲಿ ಎರಡನೇ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಕಥೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಿರ್ದೇಶಕ ಸೆನ್ನಾ ಹೆಗ್ಡೆ ಪ್ರಶಸ್ತಿ ಗೌರವ ಪಡೆದರು.ಕನ್ನಡದ ನಿರ್ಮಾಪಕರೊಬ್ಬರು ಪರಭಾಷೆಗೆ ಹೋಗಿ ಸಿನಿಮಾ ನಿರ್ಮಾಣ ಮಾಡಿದ್ದಲ್ಲದೆ ತಮ್ಮ ಚೊಚ್ಚಲ ನಿರ್ಮಾಣದಲ್ಲೇ ಪ್ರಶಸ್ತಿ ಪಡೆದುಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯೇ ಸರಿ ಎನ್ನಬಹುದು. ಸದ್ಯಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ನಿರ್ಮಾಣದ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವಾತಾರ್ ಪುರುಷ್ ಸಿನಿಮಾ ಬಿಡುಗಡೆ ಸಿದ್ದವಾಗಿದೆ.

%d bloggers like this: