ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡ ನಟಿ

2014 ರಲ್ಲಿ ಚಂದ್ರಲೇಖ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ನಟಿ ಸಾನ್ವಿ ಶ್ರೀವಾತ್ಸವ ಅವರು ಕಾಲಿಟ್ಟರು. ಮೂಲತಹ ವಾರಣಾಸಿಯವರಾದ ಇವರು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಮುಂದೊಂದು ದಿನ ನಟಿಯಾಗುತ್ತೇನೆ ಅಥವಾ ನಟಿಯಾಗಬೇಕು ಎಂಬ ಆಸೆಯನ್ನು ಸಾನ್ವಿಯವರು ಎಂದು ಇಟ್ಟುಕೊಂಡಿರಲಿಲ್ಲ. ಇವರ ಸಹೋದರಿಗೆ ಸಿನಿಮಾ ಕ್ಷೇತ್ರದ ಆಸಕ್ತಿ ಇದ್ದುದರಿಂದ ಇವರು ವಾರಣಾಸಿಯಿಂದ ಮುಂಬೈಗೆ ಬಂದರು. ಅಲ್ಲಿ ಇವರನ್ನು ನೋಡಿದ ನಿರ್ದೇಶಕರೊಬ್ಬರು ಸಿನಿಮಾ ಇಂಡಸ್ಟ್ರಿಗೆ ಸಾನ್ವಿಯವರನ್ನು ಕರೆತಂದರು. ಮೊದಲಿಗೆ ಅವರು ನಟಿಸಿದ್ದು ತೆಲುಗು ಸಿನಿಮಾದಲ್ಲಿ.

ಹೌದು ಕನ್ನಡ ಚಿತ್ರಗಳಿಗೂ ಮೊದಲು ಇವರು ಒಂದೆರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದ್ರಲೇಖ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ನಂತರ ಸುಂದರಾಂಗ ಜಾಣ, ಸಾಹೇಬ, ತಾರಕ್, ಮಾಸ್ಟರ್ ಪೀಸ್, ಗೀತಾ, ಅವನೇ ಶ್ರೀಮನ್ನಾರಾಯಣ ಹೀಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಇದೀಗ ನಟಿ ಸಾನ್ವಿ ಶ್ರೀವಾತ್ಸವ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹೌದು ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ನಟಿಸುತ್ತಿರುವ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಮಲಯಾಳಂ ಸಿನೆಮಾ ಮಹಾವೀರ್ಯರ್ ಚಿತ್ರಕ್ಕೆ ನಾಯಕಿಯಾಗಿ ಸ್ಯಾಂಡಲ್ವುಡ್ ನಟಿ ಸಾನ್ವಿ ಶ್ರೀವಾತ್ಸವ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ನಾಯಕ ನಟ ನಿವಿನ್ ಪೌಲಿ ಅವರೇ ಸಿನಿಮಾಗೆ ಹಣ ಹೂಡುತ್ತಿರುವುದು ವಿಶೇಷ.

ಈ ಸಿನೆಮಾದಲ್ಲಿ ನಿವಿನ್ ಪೌಲಿ ಜೊತೆಗೆ ಅಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೈಮ್ ಟ್ರಾವೆಲಿಂಗ್ ಸೇರಿ ಕಾನೂನು ಕಟ್ಟಳೆಗಳ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದ್ದು, ಸಂಪೂರ್ಣ ಫ್ಯಾಂಟಸಿ ಕಥೆಯನ್ನು ಹೊಂದಿದೆ. ಈ ಹಿಂದೆ ನಿವಿನ್ ಅವರ 1983 ಮತ್ತು ಆಕ್ಷನ್ ಹೀರೋ ಬಿಜು ಎಂಬ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಬ್ರಿದ್ ಶೈನ್ ಈ ಚಿತ್ರಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಒಟ್ಟಾರೆಯೆಯಾಗಿ ಕನ್ನಡದ ಈ ನಟಿ ಎಲ್ಲೆಡೆ ಶೈನ್ ಆಗುತ್ತಿದ್ದಾರೆ.

%d bloggers like this: