ಮಾನಸಿಕ ಒತ್ತಡ ತರುತ್ತವೆ ಮನೆಯ ಮುಖ್ಯದ್ವಾರದ ಮುಂದಿರುವ ಈ ವಸ್ತುಗಳು

ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಬೇಕಾದರೆ ವಾಸ್ತು ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯದ್ವಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೌದು ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ಕಿರಿಕಿರಿಯಿಂದ ಬರುವ ರೋಗಗಳು ಹೆಚ್ಚಾಗಿವೆ. ಮನೆಯಲ್ಲಿ ಕೆಲಸದಲ್ಲಿ ಎಲ್ಲೂ ನೆಮ್ಮದಿಯ ವಾತಾವರಣ ಇರುವುದಿಲ್ಲ.

ಇದಕ್ಕೆ ನಾವು ಮಾಡೋ ಕೆಲವು ತಪ್ಪುಗಳು ದೊಡ್ಡ ಕಾರಣವಾಗಬಹುದು. ಅದರಲ್ಲಿ ಮನೆಯ ಮುಖ್ಯ ದ್ವಾರದ ಮುಂದೆ ಇಡಲಾರದ ವಸ್ತುಗಳು ತುಂಬಾ ಪ್ರಭಾವ ಬೀರುತ್ತವೆ. ಮುಖ್ಯದ್ವಾರದ ಮುಂದೆ ಕಸದಬುಟ್ಟಿಯನ್ನು ಯಾವುದೇ ಕಾರಣಕ್ಕೂ ಇಡಬಾರದು, ಇದರಿಂದ ಮನೆಯಲ್ಲಿ ಸಂಬಂಧಗಳು ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಹಿಂಬಾಗಿಲಿಗಿಂತ ಮುಖ್ಯದ್ವಾರ ಯಾವುದೇ ಕಾರಣಕ್ಕೂ ಚಿಕ್ಕದಾಗಿ ಇರಬಾರದು ಹೀಗಿದ್ದರೆ ಆರ್ಥಿಕ ಅಸಮತೋಲನ ಕಟ್ಟಿಟ್ಟ ಬುತ್ತಿ.

ಇನ್ನು ಮನೆಯ ಮುಖ್ಯ ದ್ವಾರದ ಮುಂದೆ ದೇವರಮನೆ ತರಹದ ನಿರ್ಮಾಣಗಳು ಯಾವುದೇ ಕಾರಣಕ್ಕೂ ಇರಬಾರದು ಜೊತೆಗೆ ಮುಖ್ಯದ್ವಾರದ ಮುಂದೆ ದುರಸ್ತಿ ಮಾಡ ಬೇಕಾಗಿರುವಂತಹ ಮೆಟ್ಟಿಲುಗಳು ಇರಲೇಬಾರದು. ಈ ತರಹದ ವ್ಯವಸ್ಥೆಗಳು ಮಾನಸಿಕ ಕಿರಿಕಿರಿ ಮತ್ತು ಅಸಮಾಧಾನ ಉಂಟುಮಾಡುತ್ತವೆ ಎನ್ನುತ್ತದೆ ವಾಸ್ತುಶಾಸ್ತ್ರ.

%d bloggers like this: